ಮುಂಬೈ: ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆದ್ದಿರುವುದು ತನಗೆ ‘ಮತ್ತೆ ಬದುಕಿದ ಅನುಭವ’ ನೀಡಿತು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮ ಗುರುವಾರ(ಅ3) ಹೇಳಿಕೊಂಡಿದ್ದಾರೆ.
ಅಹ್ಮದ್‌ನಗರ ಜಿಲ್ಲೆಯ ಕರ್ಜತ್‌ನ ರಶಿನ್‌ನಲ್ಲಿ ತಮ್ಮ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಪವಾರ್ ಅವರ ಉಪಸ್ಥಿತಿಯಲ್ಲಿ ರೋಹಿತ್ ಅಭಿಮಾನಿಗಳನ್ನು ಉದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದರು.
“ನಾನು ಮರಾಠಿ ಚೆನ್ನಾಗಿ ಮಾತನಾಡುವುದಿಲ್ಲ ಆದರೆ ನಾನು ಪ್ರಯತ್ನಿಸುತ್ತೇನೆ” ಎಂದು ರೋಹಿತ್ ಆಟೋಗ್ರಾಫ್‌ಗಳಿಗೆ ಸಹಿ ಮಾಡಿದ ನಂತರ ಪ್ರೇಕ್ಷಕರಿಗೆ ಹೇಳಿದರು.
“ನಮಗೆ ವಿಶ್ವಕಪ್ ಗೆಲ್ಲುವುದು 3-4 ತಿಂಗಳಗಳ ಕಾಲ ದೊಡ್ಡ ಗುರಿಯಾಗಿತ್ತು. ವಿಶ್ವಕಪ್ ಗೆದ್ದ ನಂತರ ನಾನು ಮತ್ತೆ ಜೀವಂತವಾಗಿದ್ದೇನೆ ಎಂದು ಅನಿಸಿತು. ನಾವು ಇಲ್ಲಿ ನಮ್ಮ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸುತ್ತಿದ್ದೇವೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಜಸ್ಪ್ರೀತ್ ಬುಮ್ರಾ (ಅವರಂತಹ ಆಟಗಾರರು)ಇಲ್ಲಿಂದ ಹೊರ ಬರಲಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದರು.
ಕಳೆದ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಹೃದಯವಿದ್ರಾವಕ ಸೋಲು ತಂಡಕ್ಕೆ ಆಘಾತ ನೀಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಹೋರಾಟದ ರೋಮಾಂಚಕ ಗೆಲುವು ತಂಡದ ಮತ್ತೊಂದು ಪರಿಪೂರ್ಣ ಅಭಿಯಾನವನ್ನು ತೋರಿಸಿತು.