Advertisement

Rohit Sharma: ಆ ಸೋಲನ್ನು ಮರೆಯುವುದು.. ವಿಶ್ವಕಪ್‌ ಸೋಲಿನ ಬಗ್ಗೆ ಮೌನ ಮುರಿದ ರೋಹಿತ್‌

01:53 PM Dec 13, 2023 | Team Udayavani |

ಮುಂಬಯಿ: ಭಾರತ ಏಕದಿನ ವಿಶ್ವಕಪ್‌ ನಲ್ಲಿ ಅಮೋಘ ಪ್ರದರ್ಶನ ನೀಡಿ ಅಂತಿಮ ಹಂತದಲ್ಲಿ ಎಡವಿ ವಿಶ್ವಕಪ್‌ ಕಪ್‌ ಎತ್ತುವ ಕನಸು ನುಚ್ಚುನೂರಾದ ಕ್ಷಣವನ್ನು ಲಕ್ಷಾಂತರ ಕ್ರೀಡಾಭಿಮಾನಿಗಳು ಇಂದಿಗೂ ಮರೆತಿಲ್ಲ.

Advertisement

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯ ಭಾರತದ ವಿರುದ್ಧ ಗೆಲುವ ಮೂಲ ಆರನೇ ಬಾರಿ ವಿಶ್ವ ಚಾಂಪಿಯನ್‌ ಪಟ್ಟವನ್ನು ಪಡೆಯಿತು. ಇಡೀ ವಿಶ್ವಕಪ್‌ ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲಾದ ಟೀಮ್‌ ಇಂಡಿಯಾ ಫೈನಲ್‌ ನಲ್ಲಿ ಸೋತದ್ದು ಆಘಾತವೇ ಸರಿ.

ಟೀಮ್‌ ಇಂಡಿಯಾ ಕಪ್ತಾನ ರೋಹಿತ್‌ ಶರ್ಮಾ ವಿಶ್ವಕಪ್‌ ಸೋಲಿನ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬಯಿ ಇಂಡಿಯನ್ಸ್‌ ಜೊತೆ ಮಾತನಾಡಿರುವ ಅವರು, ವಿಶ್ವಕಪ್‌ ಸೋಲಿನ ಬಳಿಕದ ಆಘಾತದ ಬಗ್ಗೆ ಮಾತನಾಡಿದ್ದಾರೆ.

“ವಿಶ್ವಕಪ್‌ ಫೈನಲ್‌ ಸೋಲಿನ ಆಘಾತದಿಂದ ಹೇಗೆ ಹೊರಬರಬೇಕೆನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ನಾನೇನು ಮಾಡಬೇಕೆನ್ನುವ ಆಯ್ಕೆಯೂ ನನ್ನಲ್ಲಿ ಇಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನನ್ನು ಮುಂದುವರಿಸಿದರು. ನನ್ನ ಸುತ್ತಲಿನ ಯೋಚನೆಯನ್ನು ಹಗುರವಾಗಿಸಿದರು. ಇದು ನನಗೆ ಸಾಕಷ್ಟು ಸಹಾಯವಾಗಿದೆ. ಆ ಸೋಲನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಆದರೆ ಜೀವನವು ಮುಂದುವರಿಯುತ್ತದೆ ಮತ್ತು ನೀವು ಮುಂದುವರಿಯಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಕಠಿಣವಾಗಿತ್ತು. ಇದರಿಂದ ಮುಂದುವರಿಯುವುದು ಅಷ್ಟು ಸುಲಭವಲ್ಲ. ನಾನು 50 ಓವರ್‌ಗಳ ವಿಶ್ವಕಪ್ ನೋಡುತ್ತಾ ಬೆಳೆದಿದ್ದೇನೆ. ವಿಶ್ವಕಪ್‌ಗಾಗಿ ನಾವು ಇಷ್ಟು ವರ್ಷ ಶ್ರಮಿಸಿದ್ದೇವೆ. ಇಷ್ಟು ಶ್ರಮವಹಿಸಿ ನೀವು ಅಂದುಕೊಂಡದ್ದು ಆಗದೇ ಇದ್ದಾಗ ಅಥವಾ ನಿಮಗೆ ಬೇಕಾದುದನ್ನು ನೀವು ಪಡೆಯದಿದ್ದರೆ ಅದು ನಿರಾಶಾದಾಯಕವಾಗಿರುತ್ತದೆ. ಇದರಿಂದ ನೀವು ನಿರಾಶೆಗೊಳ್ಳುತ್ತೀರಿ” ಎಂದು ರೋಹಿತ್‌ ಹೇಳಿದ್ದಾರೆ.

ಇದನ್ನೂ ಓದಿ: Huge Security Breach: ಕಲಾಪ ನಡೆಯುವ ವೇಳೆ ಸದನದೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು

Advertisement

“ನಮ್ಮ ಕಡೆಯಿಂದ ನಾವು ಮಾಡಬಹುದಾದ ಎಲ್ಲವನ್ನೂ ನಾವು ಮಾಡಿದ್ದೇವೆ ಎಂದು ನಾನು ಭಾವಿಸಿದೆವು. ನಮ್ಮ ಕಡೆಯಿಂದ ಏನು ತಪ್ಪಾಗಿದೆ ಎಂದು ಯಾರಾದರೂ ಕೇಳಿದರೆ? ನಾವು 10 ಪಂದ್ಯಗಳನ್ನು ಗೆದ್ದಿದ್ದೇವೆ ಮತ್ತು ಆ 10 ಪಂದ್ಯಗಳಲ್ಲಿ ನಾವು ತಪ್ಪುಗಳನ್ನು ಮಾಡಿದ್ದೇವೆ. ತಪ್ಪು ಪ್ರತಿಯೊಂದು ಪಂದ್ಯದಲ್ಲೂ ಸಂಭವಿಸುತ್ತದೆ. ನೀವು ಪರಿಪೂರ್ಣ ಆಟವನ್ನು ಆಡಲು ಸಾಧ್ಯವಿಲ್ಲ. ಆದರೆ ಪರಿಪೂರ್ಣಕ್ಕೆ ಹತ್ತಿರವಾಗುವ ಆಟವನ್ನು ಆಡಬಹುದು” ಎಂದು ಹೇಳಿದ್ದಾರೆ.

“ನಾನು ತಂಡದ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ. ನಾವು ಅತ್ಯುತ್ತಮವಾಗಿ ಆಡಿದ್ದೇವೆ. ಪ್ರತಿ ವಿಶ್ವಕಪ್‌ನಲ್ಲಿ ನೀವು ಹೀಗೆ ಆಡಲು ಆಗುವುದಿಲ್ಲ. ಫೈನಲ್ ತನಕ ನಮ್ಮ ಆಟ ಜನರಿಗೆ ಬಹಳಷ್ಟು ಸಂತೋಷವನ್ನು ನೀಡುತ್ತಿತ್ತು” ಎಂದು ರೋಹಿತ್‌ ಹೇಳಿದ್ದಾರೆ.

“ಆ ಫೈನಲ್‌ನ ನಂತರ ಹಿಂತಿರುಗುವುದು ತುಂಬಾ ಕಷ್ಟಕರವಾಗಿತ್ತು. ಮುಂದುವರಿಯಲು ಬಯಸಿದ್ದೆ. ಮನಸ್ಸು ಅದರಿಂದ ಹೊರಬರಲು ನಾನು ಎಲ್ಲೋ ಹೋಗಬೇಕೆಂದು ನಿರ್ಧರಿಸಿದ್ದೆ. ಆದರೆ ನಾನು ಎಲ್ಲಿದ್ದರೂ, ಜನರು ನನ್ನ ಬಳಿಗೆ ಬರುತ್ತಿದ್ದಾರೆ ಮತ್ತು ನಮ್ಮ ಪ್ರಯತ್ನವನ್ನು ಮೆಚ್ಚುತ್ತಿದ್ದಾರೆಂದು ನಾನು ಅರಿತುಕೊಂಡೆ. ಅವರೆಲ್ಲರೂ ನಮ್ಮೊಂದಿಗೆ ಅವರೂ ವಿಶ್ವಕಪ್ ಎತ್ತುವ ಕನಸು ಕಾಣುತ್ತಿದ್ದರು. ವಿಶ್ವಕಪ್‌ನುದ್ದಕ್ಕೂ ಎಲ್ಲರಿಂದಲೂ ತುಂಬಾ ಬೆಂಬಲವಿತ್ತು, ”ಎಂದು ಅವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next