Advertisement
ಇಂಡಿಯಾ- ಪಾಕಿಸ್ತಾನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ 100 ನೇ ಟಿ-20 ಪಂದ್ಯವನ್ನು ಆಡಲಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರಿಗೆ ಇಂದಿನ ಪಂದ್ಯದಲ್ಲಿ ಸಾಧನೆಯೊಂದನ್ನು ಮಾಡುವ ಅವಕಾಶವಿದೆ.
Related Articles
Advertisement
ಪ್ರತಿಕಾಗೋಷ್ಟಿಯಲ್ಲಿ ರೋಹಿತ್ ಈ ಬಗ್ಗೆ ಮಾತಾನಾಡುತ್ತಾ, ಯಾರು ಓಪನರ್ ಆಗಿ ತನ್ನೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ ಎನ್ನುವುದನ್ನು ನೀವು ಟಾಸ್ ಆದ ಮೇಲೆ ನೋಡಿ. ಅಲ್ಲಿಯವರೆಗೆ ಅದು ರಹಸ್ಯವಾಗಿಯೇ ಇರಲಿ ಎಂದು ಹೇಳಿರುವುದು ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ಹೊಸ ಸಾಧನೆ ಮಾಡಲು ಅವಕಾಶವಿದೆ. ಕೇವಲ 10 ರನ್ ಗಳಿಸಿದರೆ ಅವರು ಅಂತಾರಾಷ್ಟ್ರೀಯ ಟಿ-20ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಈ ಪಟ್ಟಿಯಲ್ಲಿ ಸದ್ಯ ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ನಂ. 1 ಆಗಿದ್ದಾರೆ. ಅವರು 3,497 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 3,487 ರನ್ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 99 ಪಂದ್ಯವನ್ನಾಡಿ 3,308 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಮಾರ್ಟಿನ್ ಗಪ್ಟಿಲ್ 121 ಪಂದ್ಯವನ್ನಾಡಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 132 ಟಿ-20 ಪಂದ್ಯವನ್ನು ಆಡಿದ್ದಾರೆ.
ಟೀಮ್ ಇಂಡಿಯಾದ ರೋಹಿತ್ ಹಾಗೂ ಕೊಹ್ಲಿ ಇಬ್ಬರಿಗೂ ಇಂದಿನ ಪಂದ್ಯ ವಿಶೇಷ.