Advertisement
ಈ ಬೆಳವಣಿಗೆ ಬೆನ್ನಲ್ಲೇ ಒಂಟೆ ರೋಹಿತ್ ಹಾಗೂ ಸೈಲೆಂಟ್ ಸುನೀಲ್ ಮಂಗಳವಾರ ಪೊಲೀಸರಿಗೆ ಶರಣಾಗಿದ್ದರು. ಮಂಗಳವಾರ ರಾತ್ರಿಯಿಂದಲೇ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಇಬ್ಬರನ್ನೂ ತೀವ್ರ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದರು. ವಿಚಾರಣೆ ವೇಳೆ ಕಡಬೆಗೆರೆ ಶ್ರೀನಿವಾಸ್ ಕೊಲೆ ಯತ್ನದಲ್ಲಿ ಒಂಟೆ ರೋಹಿತನ ನೇರ ಕೈವಾಡವಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
Advertisement
ಹತ್ತು ಮಂದಿಯೂ ಪೊಲೀಸರ ವಶಕ್ಕೆ ಬೆಂಗಳೂರು: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ 10 ಆರೋಪಿಗಳನ್ನು ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಮಂಗಳವಾರ ಬಂಧನಕ್ಕೊಳಗಾಗಿದ್ದ ಅಗ್ನಿ ಶ್ರೀಧರ ಆಪ್ತ ಎನ್ನಲಾದ ಸೈಯದ್ ಅಮಾನ್ ಬಚ್ಚನ್, ಸೈಲೆಂಟ್ ಸುನೀಲ್, ರೋಹಿತ್, ಖಾಸಗಿ ಅಂಗರಕ್ಷಕರಾದ ಬ್ರಿಜ್ ಭೂಷಣ್ ಹುಸೇನ್, ರಾಮ್‌ಕುಮಾರ್ ರಾಯ್, ಸಾಬೀರ್ ಆಲಿ, ಅರುಣ್‌ಕುಮಾರ್, ಅಮಾನುಲ್ಲಾ ಷರೀಫ್, ವರುಣ್‌ಕುಮಾರ್, ಜಬ್ಬರ್, ಬನಶಂಕರಿಯ ತನ್ವೀರ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು 44ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಸಂಪಿಗೇಹಳ್ಳಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯವು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನ ಪೊಲೀಸ್ ವಶಕ್ಕೆ ನೀಡಿದೆ. ಆಸ್ಪತ್ರೆಯಿಂದ ಅಗ್ನಿ ಬೇಲ್ ಯತ್ನ
ಪೊಲೀಸ್ ದಾಳಿ ಹಿನ್ನೆಲೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿರುವು ಪತ್ರಕರ್ತ ಅಗ್ನಿ ಶ್ರೀಧರ್ ಆಸ್ಪತ್ರೆಯಿಂದಲೇ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸಿದ್ದಾರೆ. ಅಗ್ನಿಶ್ರೀಧರ್ ಪರ ವಕೀಲ ಹನುಮಂತರಾಯಪ್ಪ ನಿರೀಕ್ಷಣಾ ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಶೂಟೌಟ್ ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡಿದ ಆರೋಪಕ್ಕಾಗಿ ಅಗ್ನಿಶ್ರೀಧರ್ ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರೌಡಿಗಳ ಆಸ್ತಿ ಮೇಲೆ ಪೊಲೀಸ್ ಕಣ್ಣು
ರೌಡಿ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರು ಇನ್ನು ಮುಂದೆ ಅವರ ಅಕ್ರಮ ಆಸ್ತಿಯ ಬಗ್ಗೆಯೂ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಫಿಯಾ, ಗಾಬೇಜ್ ಮಾಫಿಯಾ ಹೀಗೆ ಸಂಬಂಧವಿಲ್ಲದ ವಿಚಾರಗಳಲ್ಲಿ ತಲೆ ಹಾಕುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಗುಂಪು ಕಟ್ಟಿಕೊಂಡು ಬೆದರಿಕೆ ಹಾಕುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಅನಾವಶ್ಯಕ ವಿಚಾರಗಳ ಬಗ್ಗೆ ತಲೆಹಾಕಿದರೆ ಕ್ರಮ ಕೈಗೊಳ್ಳಲಾಗುವುದು. ರೌಡಿಗಳು, ರೌಡಿ ಶೀಟರ್‌ಗಳ ಅಕ್ರಮ ಆಸ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾವುದು ರೌಡಿಗಳ ಬೆದರಿಕೆ ಕರೆ ಬಂದರೆ ಸಮೀಪದ ಠಾಣೆಯಲ್ಲಿ ದೂರು ನೀಡಿ ಎಂದು ಮನವಿ ಮಾಡಿದರು.