Advertisement

ಹಿಂದೂಗಳ ಮಾರಣಹೋಮ

06:00 AM May 24, 2018 | |

ಮ್ಯಾನ್ಮಾರ್‌: ಕಳೆದ ವರ್ಷ ಮ್ಯಾನ್ಮಾರ್‌ನ ರಖೈನ್‌ನಲ್ಲಿ ನೂರಾರು ಹಿಂದೂಗಳನ್ನು ರೊಹಿಂಗ್ಯಾ ಬಂಡುಕೋರರು ಮಾರಣಹೋಮ ನಡೆಸಿರುವುದನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಖಚಿತಪಡಿಸಿದೆ. ಈ ಹಿಂದೆಯೇ ಈ ಮಾರಣಹೋಮದ ಬಗ್ಗೆ ವರದಿಯಾಗಿತ್ತಾದರೂ, ದೃಢಪಟ್ಟಿರಲಿಲ್ಲ. 2017 ಆ.25ರಂದು ಹತ್ಯೆ ನಡೆದಿದೆ ಎಂದು ಅಮ್ನೆಸ್ಟಿ ವರದಿ ಹೇಳಿದೆ.

Advertisement

ಮೌಂಗ್ಡ್ ಎಂಬ ಒಂದೇ ಪ್ರದೇಶದಲ್ಲಿ 53 ಹಿಂದೂಗಳನ್ನು ಹತ್ಯೆಗೈಯಲಾಗಿದ್ದು, ಈ ಪೈಕಿ ಹೆಚ್ಚಿನವರು ಮಕ್ಕಳು ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ವಿಪತ್ತು ಪ್ರತಿಕ್ರಿಯೆ ವಿಭಾಗದ ನಿರ್ದೇಶಕಿ ತಿರಾನಾ ಹಸನ್‌ ಹೇಳಿದ್ದಾರೆ. ಇನ್ನೊಂದೆಡೆ, ಯೆ ಬೌಕ್‌ ಕ್ಯಾರ್‌ ಎಂಬ ಹಳ್ಳಿ ಯಲ್ಲಿ 46 ಜನ ಒಂದೇ ದಿನ ನಾಪತ್ತೆಯಾಗಿದ್ದಾರೆ. ಅವರನ್ನೂ ಬಂಡುಕೋರರು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಆಗಸ್ಟ್‌ನಲ್ಲಿ ದೇಶಾದ್ಯಂತ ರೊಹಿಂಗ್ಯಾ ಬಂಡುಕೋರರು ಪೊಲೀಸ್‌ ಠಾಣೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಇದಕ್ಕೆ ಮ್ಯಾನ್ಮಾರ್‌ ಸೇನೆ ತೀವ್ರ ಪ್ರತಿದಾಳಿ ನಡೆಸಿ, ಸುಮಾರು 7 ಲಕ್ಷ ರೊಹಿಂಗ್ಯಾಗಳನ್ನು ಗಡೀಪಾರು ಮಾಡಿತ್ತು. 

ಹತ್ಯೆ ಮಾಡಿದ್ದು ಹೇಗೆ?: ಉತ್ತರ ರಖೈನ್‌ ಪ್ರಾಂತ್ಯದಲ್ಲಿ ಹಳ್ಳಿಗಳ ಜನರನ್ನು ಸುತ್ತುವರಿದು, ಕಣ್ಣಿಗೆ ಬಟ್ಟೆ ಕಟ್ಟಿ ಮೆರವಣಿಗೆ ಮಾಡಿಸಲಾಗುತ್ತಿತ್ತು. ಅನಂತರ ಅವರನ್ನು ಬಹಿರಂಗವಾಗಿ ಶಿರಚ್ಛೇದ ಮಾಡಲಾಗುತ್ತಿತ್ತು ಎಂದು ಅಮ್ನೆಸ್ಟಿ ವರದಿ ವಿವರಿಸಿದೆ. ರಖೈನ್‌ ಪ್ರಾಂತ್ಯವು ಹೆಚ್ಚಾಗಿ ಬೌದ್ಧರು ಮತ್ತು ಮುಸ್ಲಿಮರು ವಾಸಿಸುವ ಪ್ರದೇಶವಾಗಿದ್ದು, ಇಲ್ಲಿ ಹಿಂದೂಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next