Advertisement
ದಾಖಲೆ ಎಂಟನೇ ವಿಂಬಲ್ಡನ್ ಪ್ರಶಸ್ತಿಯ ನಿರೀಕ್ಷೆ ಇಟ್ಟುಕೊಂಡಿರುವ ಫೆಡರರ್ ಉತ್ತಮ ಆರಂಭ ಪಡೆದಿದ್ದರು. ಮೊದಲ ಸೆಟ್‌ನ ಎಂಟನೇ ಗೇಮ್‌ನಲ್ಲಿ ತನ್ನ ಬಾಳ್ವೆಯ 10 ಸಾವಿರದ ಏಸ್ ಸಿಡಿಸಿದ್ದ ಫೆಡರರ್ 6-3, 3-0 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದಾಗ ಅವರ ಎದುರಾಳಿ ಅಲೆಕ್ಸಾಂಡರ್ ಡೊಲ್ಗೊಪೊಲೋವ್ ಗಾಯದ ಸಮಸ್ಯೆಯಿಂದ ಪಂದ್ಯ ತ್ಯಜಿಸಿದರು. ವಿಂಬಲ್ಡನ್‌ನಲ್ಲಿ 85ನೇ ಪಂದ್ಯ ಗೆದ್ದು ದಾಖಲೆ ಮಾಡಿರುವ ಫೆಡರರ್ ಇಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದಾರೆ.
Related Articles
Advertisement
ಅಗ್ರ ಶ್ರೇಯಾಂಕದ ಕೆರ್ಬರ್ ಅಮೆರಿಕದ ಅರ್ಹತಾ ಆಟಗಾರ್ತಿ ಐರಿನಾ ಫಾಲ್ಕೋನಿ ಅವರನ್ನು 6-4, 6-4 ಸೆಟ್‌ಗಳಿಂದ ಕೆಡಹಿದರೆ ಮಾಜಿ ನಂಬರ್ ವನ್ ಕ್ಯಾರೋಲಿನ್ ವೋಜ್ನಿಯಾಕಿ ಅವರು ಟಿಮಿಯಾ ಬಾಬೋಸ್ ಅವರನ್ನು 6-4, 4-6, 6-1 ಸೆಟ್‌ಗಳಿಂದ ಕೆಡಹಿ ಮುನ್ನಡೆದರು. ಇನ್ನೊಂದು ಪಂದ್ಯದಲ್ಲಿ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ ರಶ್ಯದ ಏಕ್ತರೀನಾ ಅಲೆಕ್ಸಾಂಡ್ರೋವಾ ಅವರನ್ನು 6-2, 6-4 ಸೆಟ್‌ಗಳಿಂದ ಉರುಳಿಸಿದರು.
ಆಸ್ಟ್ರೀಯದ ಎಂಟನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಅವರು ವಾಸೆಕ್ ಪೊಸ್ಪಿಸಿಲ್ ಅವರನ್ನು 6-4, 6-4, 6-3 ನೇರ ಸೆಟ್‌ಗಳಿಂದ ಸೋಲಿಸಿದರೆ 2010ರ ವಿಂಬಲ್ಡನ್ ರನ್ನರ್ ಅಪ್ ಥಾಮಸ್ ಬೆರ್ಡಿಶ್ ಅವರು ಜೆರೆಮಿ ಚಾರ್ಡಿ ಅವರನ್ನು 6-3, 3-6, 7-6 (7-4), 6-4 ಸೆಟ್‌ಗಳಿಂದ ಪರಾಭವಗೊಳಿಸಿದರು.