Advertisement

ಶಿಕ್ಷೆಯಾಗಿ ಟಾಯ್ಲೆಟ್‌ ಕ್ಲೀನ್‌ ಮಾಡಿದ್ದ ಫೆಡರರ್‌!

06:20 AM Aug 09, 2018 | |

ಜ್ಯೂರಿಚ್‌: ವಿಶ್ವ ವಿಖ್ಯಾತ ಟೆನಿಸ್‌ ಆಟಗಾರ ಸ್ವಿಜರ್ಲೆಂಡ್‌ನ‌ ರೋಜರ್‌ ಫೆಡರರ್‌ ಬುಧವಾರ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇದೇ  ವೇಳೆ ಫೆಡರರ್‌ ತನ್ನ ಕುರಿತಾದ ಕುತೂಹಲಕರವಾದ ವಿಷಯವೊಂದನ್ನು ಹೊರಹಾಕಿದ್ದಾರೆ.

Advertisement

1997ನೇ ಇಸವಿ ಫೆಡರರ್‌ ಅವರ ಟೆನಿಸ್‌ ವೃತ್ತಿಜೀವನದ ಆರಂಭದ ದಿನಗಳು. ಆಗ ಫೆಡರರ್‌ ಬಿಸಿ ರಕ್ತದ ಯುವಕ. ಸ್ವಲ್ಪವೂ ತಾಳ್ಮೆಯಿರಲಿಲ್ಲ. ಮೂಗಿನ ತುದಿಯಲ್ಲೇ ಕೋಪ. ಒಂದು ದಿನ ಸ್ವಿಜರ್ಲೆಂಡ್‌ನ‌ ರಾಷ್ಟ್ರೀಯ ಟೆನಿಸ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದಾಗ ಫೆಡರರ್‌ ಯಾವುದೋ ಒಂದು ಕಾರಣಕ್ಕೆ ಸಿಟ್ಟಾಗಿದ್ದಾರೆ. ಮಾತ್ರವಲ್ಲ, ಕೈಯಲ್ಲಿದ್ದ ರ್ಯಾಕೆಟ್‌ ಅನ್ನು ಕ್ರೀಡಾಂಗಣದ ಬಳಿಯಿದ್ದ ಪರದೆಯೊಂದಕ್ಕೆ ಅಪ್ಪಳಿಸಿದ್ದರು. ಈ ಅಶಿಸ್ತಿನ ಕಾರಣದಿಂದಾಗಿ ಇವರು ಒಂದು ವಾರ ಟಾಯ್ಲೆಟ್‌ ಕ್ಲೀನ್‌ ಮಾಡಿದ್ದರಂತೆ! ಸ್ವತಃ ಇದನ್ನು ಸಂದರ್ಶನದಲ್ಲಿ ಸ್ವಿಸ್‌ ಆಟಗಾರ ಹೇಳಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next