Advertisement

ಹೈವೇ ರಿಪೇರಿಗೆ ರೋಬೋ 

08:44 AM Jan 25, 2018 | Team Udayavani |

ಹೊಸದಿಲ್ಲಿ: ಸದ್ಯದಲ್ಲೇ ನೀವು ಹೈವೇ ಗಳಲ್ಲಿ ಸಂಚರಿಸುವಾಗ  ರಸ್ತೆ ರಿಪೇರಿ ನಡೆ ಯುತ್ತಿದೆ.”ಬದಿಯಲ್ಲಿ ಸಂಚರಿಸಿ’ ಎಂದು  ರೋಬೋಟ್‌ ಸೂಚಿಸಿದರೆ ಅಚ್ಚರಿಯೇನಿಲ್ಲ! ಏಕೆಂದರೆ, ಈಗಾಗಲೇ ಹೈವೇ ನಿರ್ಮಾಣ, ರಿಪೇರಿ ಗುತ್ತಿಗೆ ಪಡೆದಿರುವ ಕೆಲ ನಿರ್ಮಾಣ ಸಂಸ್ಥೆಗಳು ಈ “ಫ್ಲಾಗ್‌ಮನ್‌’ ಕೆಲಸ ನಿಭಾಯಿಸಲು ಯಂತ್ರಮಾನವರನ್ನು ಅಳವಡಿಸಿವೆ. 

Advertisement

ಇದಕ್ಕಿನ್ನೂ ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ ಇನ್ನು ದೇಶದ ಹಲವಾರು ಹೈವೆಗಳಲ್ಲಿ ಯಾವುದಾದರೂ ಕಾಮಗಾರಿ ಕಣ್ಣಿಗೆ ಬೀಳುವ ಮೊದಲೇ ನಿಮಗೆ ರೋಬೋ ದರುಶನವಾಗಲಿದೆ!

ಹೇಗಿವೆ ಈ ರೋಬೋಗಳು?: ಈ ರೋಬೋಗಳನ್ನು ಪ್ಲಾಸ್ಟಿಕ್‌ ಹಾಗೂ ಭಾರವಿಲ್ಲದ ಲೋಹಗಳಿಂದ ತಯಾರಿಸಲಾ ಗಿರುತ್ತದೆ. ಹಗುರ ಲೋಹದ ಅಸ್ಥಿಪಂಜರ ಮೇಲೆ ಪ್ಲಾಸ್ಟಿಕ್‌ ಮಾದರಿಯ ಪದರದ ಮಾಂಸಖಂಡ, ಚರ್ಮ ಇರುವ ರೋಬೋಗಳಿವು.  ಈ ಮಾದರಿಯ ರೋಬೋಗಳು ಸ್ಥಾನಿಕವಾಗಿದ್ದರೆ, ಮತ್ತೆ ಕೆಲವಕ್ಕೆ ಚಕ್ರಗಳನ್ನು ಅಳವಡಿಸಲಾಗಿದೆ. 

ರೋಬೋಟ್‌ ಯಾಕೆ?: ಹೆದ್ದಾರಿಯಲ್ಲಿ ಕೆಲವೊಮ್ಮೆ ವೇಗವಾಗಿ ಬರುವ ವಾಹನಗಳು ಫ್ಲಾಗ್‌ಮನ್‌ಗಳಿಗೆ ಢಿಕ್ಕಿ ಹೊಡೆದು ಅವರನ್ನು ಗಾಯಗೊಳಿಸಿರುವ ಘಟನೆಗಳು ಸಾಕಷ್ಟು ನಡೆದಿದ್ದು, ಹೀಗಾಗಿಯೇ, ಮನುಷ್ಯರ ಬದಲಿಗೆ ರೋಬೋಗಳನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸದ್ಯಕ್ಕೆ ಈ ಮಾದರಿಯ ರೋಬೋಗಳನ್ನು ಉಪಯೋ ಗಿಸುತ್ತಿರುವ ಪ್ರಮುಖ ಕಂಪೆನಿಗಳು ಹೇಳಿವೆ ಎಂದು “ಬ್ಯುಸಿನೆಸ್‌ ಸ್ಟಾಂಡರ್ಡ್‌’ ಹೇಳಿದೆ.

ಮಾನವ ಫ್ಲಾಗ್‌ಮನ್‌ಗಳ ಬದಲಿಗೆ ಯಂತ್ರ ಮಾನವರು
ಹೆದ್ದಾರಿ ಕಾಮಗಾರಿ, ರಿಪೇರಿ ವೇಳೆ ಗುರುತರ ಸಹಾಯ
ಸಂಭಾವ್ಯ ಅಪಘಾತಗಳನ್ನು ತಪ್ಪಿಸಲು ಈ ಕ್ರಮ

Advertisement
Advertisement

Udayavani is now on Telegram. Click here to join our channel and stay updated with the latest news.

Next