Advertisement
ಕಂಪ್ಯೂಟರ್ ಬರುತ್ತಂತೆ. ಅದರಲ್ಲಿ ಎಲ್ಲಾ ಕೆಲಸವನ್ನೂ ಫಾಸ್ಟ್ ಆಗಿ ಮಾಡಬಹುದಂತೆ, ಯಾವ ಭಾಷೆ ಬೇಕಾದ್ರೂ ಅದರಲ್ಲಿ ಬರುತ್ತಂತೆ ಎಂದೆಲ್ಲಾ ಅಚ್ಚರಿಯಿಂದ ಹೇಳುತ್ತಿದ್ದ ಕಾಲವೊಂದಿತ್ತು. ಈಗ ಕಂಪ್ಯೂಟರ್ ಇಲ್ಲದ ಮನೆ- ಕಚೇರಿಯೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅದು ಎಲ್ಲ ಕಡೆಗಳಲ್ಲೂ ಆವರಿಸಿಕೊಂಡಿದೆ. ಕಾರ್ಖಾನೆಗಳಲ್ಲಿ ಏಳೆಂಟು ಗಂಟೆಗಳ ಕಾಲ ತುಂಬಾ ವೇಗವಾಗಿ ಕೆಲಸ ಮಾಡಲು ಮನುಷ್ಯರಿಂದ ಸಾಧ್ಯವಾಗುತ್ತಿಲ್ಲ. ಆ ಕೆಲಸವನ್ನು ಯಂತ್ರಮಾನವರಿಂದ ಮಾಡಿಸಿದರೆ ಹೇಗೆ ಎಂಬ ಯೋಚನೆ ಶುರುವಾಗಿದೆ. ಅಷ್ಟೇ ಅಲ್ಲ, ಮನುಷ್ಯನ ಸೂಚನೆಯಂತೆ ಕೆಲಸ ಮಾಡುವ ರೊಬೊಟ್‌ಗಳ ಸೃಷ್ಟಿ ಕಾರ್ಯವೂ ಶುರುವಾಗಿದೆ. ಅದು ಅಲ್ಪಮಟ್ಟದ ಯಶಸ್ಸನ್ನೂ ಕಂಡಿದೆ. ಈ ರೊಬೊಟ್‌ಗಳನ್ನು ನಿರ್ಮಿಸುವವರೇ ರೊಬೊಟಿಕ್ ಎಂಜಿನಿಯರ್‌ಗಳು.
ಪಿಯು ವಿದ್ಯಾಭ್ಯಾಸದ ಬಳಿಕ ಜಾಯಿಂಟ್ ಎಕ್ಸಲೆನ್ಸ್ ಎಕ್ಸಾಮಿನೇಷನ್ (ಜೆಇಇ) ಜೊತೆಗೆ ಪದವಿಯಲ್ಲಿ ಬಿ.ಇ/ ಬಿ.ಟೆಕ್ ಅಭ್ಯಾಸ ಮಾಡಿ, ಬಳಿಕ ಸ್ನಾತಕೋತ್ತರ ಪದವಿಯಲ್ಲಿ ಎಂ.ಇ, ಎಂ,ಟೆಕ್, ಪಿಎಚ್.ಡಿ ಮಾಡಿದರೆ ರೊಬೊಟಿಕ್ ಎಂಜಿನಿಯರ್ ಆಗಬಹುದು. ಜೊತೆಗೆ ತಾಂತ್ರಿಕ, ಗಣಕ ಸಂಬಂಧಿತ ಕೌಶಲ್ಯಗಳನ್ನು ಬಳಸಿಕೊಳ್ಳಬೇಕಾದ್ದು ಅತ್ಯಗತ್ಯ.
Related Articles
– ರೊಬೊಟ್ ಮಾದರಿಗಳು, ಅವುಗಳ ಡಿಸೈನ್ ಮತ್ತು ಪ್ರೋಗ್ರಾಮ್‌ಗಳ ಅಧ್ಯಯನ.
– ರೊಬೊಟ್‌ನ ಹಳೇ ಮಾದರಿಗಳನ್ನು ಉನ್ನತೀಕರಿಸುವ ಕೌಶಲ್ಯ.
– ಹೊಸ ತಂತ್ರಾಂಶ, ಡಿಸೈನ್‌ಗಳನ್ನು ರಚಿಸುವ, ಹಳೇ ಮಾದರಿಗಳನ್ನು ವಿಮರ್ಶೆ ಮಾಡುವ ಜ್ಞಾನ.
– ನ್ಯಾನೋ ತಂತ್ರಜ್ಞಾನ, ರೋಬೋಟ್ ಮೋಷನ್ ಪ್ಲಾನಿಂಗ್, ಸಿಗ್ನಲ್‌ಗಳ ಜೋಡಣೆ ಇತ್ಯಾದಿಗಳ ಬಳಕೆ ಬಗೆಗೆ ಜ್ಞಾನ
– ಉತ್ತಮ ಮೆಕಾನಿಕಲ್ ಸ್ಕಿಲ್, ಸಮಸ್ಯೆಗಳನ್ನು ನಿವಾರಿಸುವ ಕೌಶಲ್ಯ ಅಗತ್ಯ
Advertisement
ಅವಕಾಶಗಳು ಎಲ್ಲೆಲ್ಲಿ?ಕೃಷಿ ಯಂತ್ರಗಳ ಉತ್ಪಾದಕ ವಲಯ, ಮೈನಿಂಗ್ ಕಾರ್ಖಾನೆಗಳು, ನ್ಯೂಕ್ಲಿಯರ್ ಪವರ್ ಪ್ಲಾಂಟ್, ಮೆಕಾನಿಕಲ್/ಎಲೆಕ್ಟ್ರಿಕಲ್ ಸಂಶೋಧನಾ ವಲಯ, ಸಮುದ್ರ ಪರಿಶೋಧನಾ ಘಟಕ, ಬಾಹ್ಯಾಕಾಶ ಸಂಶೋಧನಾ ಸಂಘಟನೆ, ಬಯೋಮೆಡಿಕಲ್ ಎಕ್ವಿಪ್‌ಮೆಂಟ್ ಉತ್ಪಾದಕ ವಲಯ, ಗೇಮಿಂಗ್ ಇಂಡಸ್ಟ್ರಿ, ಭಾರತ್ ಆಟೋಟೆಕ್ ಸಂಶೋಧನಾ ಕೇಂದ್ರ, ಟಾಟಾ ಆಟೋಮೋಟಿವ್ಸ್ ಸಂಬಳ ಎಷ್ಟ್ ಸಿಗುತ್ತೆ?
ರೊಬೊಟಿಕ್ ಎಂಜಿನಿಯರ್‌ಗಳಿಗೆ ಅವರು ಕಾರ್ಯನಿರ್ವಹಿಸುವ ಕ್ಷೇತ್ರದ ಆಧಾರದ ಮೇಲೆ ವೇತನವನ್ನು ನಿರ್ಧರಿಸಲಾಗುತ್ತದೆ. ಪ್ರಾರಂಭದ ಹಂತದಲ್ಲಿ ವಾರ್ಷಿಕವಾಗಿ 3 ಲಕ್ಷ ರೂ. ಮತ್ತು ಅನುಭವಿ ರೊಬೊಟಿಕ್ ಎಂಜಿನಿಯರ್‌ಗಳಿಗೆ ವಾರ್ಷಿಕವಾಗಿ 11 ಲಕ್ಷ ರೂ.ಗೂ ಹೆಚ್ಚು ವೇತನವನ್ನು ಪಾವತಿಸಲಾಗುತ್ತದೆ. ಈ ಕಾಲೇಜುಗಳು ಆ ಕೋರ್ಸ್ ಇದೆ…
– ಆಚಾರ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
– ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೆ„ಡ್ ಸೈನ್ಸ್, ಬೆಂಗಳೂರು
– ಬಿ.ವಿ. ಭೂಮರೆಡ್ಡಿ ಕಾಲೇಜ್ ಆಫ್ ಎಂಜಿನಿಯರಿಂಗ್, ಹುಬ್ಬಳ್ಳಿ
– ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ದಾವಣಗೆರೆ
– ಅಣ್ಣಾ ಯೂನಿವರ್ಸಿಟಿ, ಚೆನ್ನೈ ಅನಂತನಾಗ್ ಎನ್.