Advertisement

ಹಣಕಾಸು ಅಕ್ರಮ: ಮೂರನೇ ಬಾರಿ ED ತನಿಖೆಗೆ ಹಾಜರಾದ ರಾಬರ್ಟ್‌ ವಾದ್ರಾ

07:11 AM Feb 09, 2019 | udayavani editorial |

ಹೊಸದಿಲ್ಲಿ : ರಾಜಕೀಯ ಪ್ರಭಾವದ ಪರಿಣಾಮವಾಗಿ ಕೇವಲ ಹತ್ತೇ ವರ್ಷಗಳಲ್ಲಿ ಒಂದು  ಸಾವಿರ ಕೋಟಿ ರೂ. ಆಸ್ತಿಪಾಸ್ತಿಯ ಒಡೆಯರಾಗಿದ್ದಾರೆ ಎನ್ನಲಾಗಿರುವ ರಾಬರ್ಟ್‌ ವಾದ್ರಾ (ಪ್ರಿಯಾಂಕಾ ಗಾಂಧಿ ಅವರ ಪತಿ) ಮೂರನೇ ಬಾರಿಯಾಗಿ ಇಂದು ಬೆಳಗ್ಗೆ 10.45ರ ಸುಮಾರಿ ಜಾರಿ ನಿರ್ದೇಶನಾಲಯದ (ED) ಎದುರು ತನಿಖೆಗೆ ಹಾಜರಾದರು. 

Advertisement

ವಾದ್ರಾ ಅವರು ಮಧ್ಯ ದಿಲ್ಲಿಯಲ್ಲಿನ ಜಾಮ್‌ ನಗರ್‌ ಹೌಸ್‌ ನಲ್ಲಿರುವ ಇಡಿ ಕಾರ್ಯಾಲಯಕ್ಕೆ ಇಂದು ಶನಿವಾರ ಬೆಳಗ್ಗೆ 10.45ರ ಹೊತ್ತಿಗೆ ಖಾಸಗಿ ವಾಹನದಲ್ಲಿ ಆಗಮಿಸಿದರು. 

ಲಂಡನ್‌ ನಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಖರೀದಿಸುವಲ್ಲಿ ನಡೆಸಿರುವ ವ್ಯಾಪಕ ಹಣಕಾಸು ಅಕ್ರಮಗಳಿಗಾಗಿ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿರುವ ವಾದ್ರಾ, ಫೆ.6 ಮತ್ತು 7ರಂದು ಇಡಿ ಕಾರ್ಯಾಲಯಕ್ಕೆ ಹೋಗಿದ್ದರು. ಆ ಬಳಿಕದಲ್ಲಿ ಇಂದು ಶನಿವಾರ ಮತ್ತೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಅಲ್ಲಿಗೆ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next