ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಕ್ಕಿದೆ. ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಆಯಾ ಸ್ಟಾರ್ ನಟನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗಬೇಕು ಎಂದು ಕಾಯುತ್ತಿದ್ದಾರೆ.
ಈ ಸಾಲಿನಲ್ಲಿ ದರ್ಶನ್ ಅಭಿಮಾನಿಗಳು ಮುಂಚೂಣಿಯಲ್ಲಿದ್ದಾರೆ ಎಂದರೆ ತಪ್ಪಲ್ಲ. ಅದಕ್ಕೆ ಕಾರಣ “ರಾಬರ್ಟ್’ ಚಿತ್ರ. ಕೋವಿಡ್ ಲಾಕ್‌ಡೌನ್ ಇಲ್ಲದಿದ್ದರೆ ದರ್ಶನ್ ನಾಯಕರಾಗಿರುವ “ರಾಬರ್ಟ್’ ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣಬೇಕಿತ್ತು. ಸಿನಿಮಾದ ಚಿತ್ರೀಕರಣದಿಂದ ಹಿಡಿದು ಬಹುತೇಕ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ.ಹಾಗಾಗಿ,ತೆರೆಗೆಬರಲುಸಿದ್ಧವಾಗಿರುವ ಸ್ಟಾರ್‌ಸಿನಿಮಾಗಳಲ್ಲಿ ದರ್ಶನ್ ಅವರ “ರಾಬರ್ಟ್’ ಮುಂಚೂಣಿಯಲ್ಲಿದೆ. ಹಾಗಾಗಿ, ಅಭಿಮಾನಿಗಳು ಆ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು, ಮೊದಲು ಸ್ಟಾರ್ ಸಿನಿಮಾವೊಂದು ರಿಲೀಸ್ ಆದರೆ, ಒಳ್ಳೆಯ ಓಪನಿಂಗ್ ಕೂಡಾ ಸಿಗುತ್ತದೆ ಎಂಬ ಲೆಕ್ಕಾಚಾರಕೂಡಾ ಅಭಿಮಾನಿಗಳದ್ದು.
ದರ್ಶನ್ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ “ರಾಬರ್ಟ್’ ಹಲವು ವಿಚಾರಗಳಲ್ಲಿ ಭಿನ್ನ ಎನ್ನಬಹುದು. ಅದು ಚಿತ್ರೀಕರಣದ ಅವಧಿಯಿಂದ ಹಿಡಿದು ಗೆಟಪ್‌ವರೆಗೂ. ಮುಖ್ಯವಾಗಿ ದರ್ಶನ್ ಈ ಚಿತ್ರದಲ್ಲಿ ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡಬಿಡುಗಡೆ ಮಾಡಿರುವ ಸಖತ್ ರಗಡ್ ಆಗಿರುವ ಗೆಟಪ್‌ವೊಂದಾದರೆ, ಹನುಮನ ಗೆಟಪ್ ಮತ್ತೂಂದು. ಅಷ್ಟಕ್ಕೂ ಹನುಮನ ಗೆಟಪ್‌ಗ್ೂ ಕಥೆಗೂ ಏನು ಲಿಂಕ್ ಎಂದು ನೀವು ಕೇಳಬಹುದು. ಈ ಪ್ರಶ್ನೆಯನ್ನು ದರ್ಶನ್ ಮುಂದಿಟ್ಟರೆ ಅವರು ಕೂಡಾ ಇದಕ್ಕೆ ಉತ್ತರಿಸೋದಿಲ್ಲ. “ಎಲ್ಲವನ್ನು ಈಗಲೇ ಹೇಳಿದರೆ ಹೇಗೆ. ಸಿನಿಮಾದಲ್ಲಿ ನೋಡಿದರೇನೇ ಮಜಾ’ ಎಂದು ಹೇಳುತ್ತಾರೆ ದರ್ಶನ್. ಚಿತ್ರದ ಟೀಸರ್ ಕೂಡಾ ವೈರಲ್ ಆಗಿದೆ.
ಸಾಮಾನ್ಯವಾಗಿ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದು ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿರುತ್ತದೆ. ಆದರೆ, “ರಾಬರ್ಟ್’ ಚಿತ್ರ ಅತಿ ದೊಡ್ಡ ಹಬ್ಬವಾಗುವ ಲಕ್ಷಣಗಳನ್ನು ತೋರುತ್ತಿದೆ. ಈಗಾಗಲೇ ಈ ಚಿತ್ರದ ಪ್ರೀರಿಲೀಸ್ ಬಿಝಿನೆಸ್ ವಿಚಾರಗಳು ಕೂಡಾ ದೊಡ್ಡ ಮೊತ್ತದಲ್ಲೇ ಕೇಳಿಬರುತ್ತಿದೆ.
ಜೊತೆಗೆ ಸ್ಯಾಟ್‌ಲೈಟ್, ಡಿಜಿಟಲ್ ರೈಟ್ಸ್‌ಗಳು ಕೂಡಾ ದಾಖಲೆ ಬೆಲೆಗೆ ಮಾರಾಟವಾಗಿವೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿಕೇಳಿಬರುತ್ತಿದೆ. ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ನಿರ್ಮಿಸಿದ್ದಾರೆ. ಚಿತ್ರದ ಬಿಡುಗಡೆ ಕುರಿತಂತೆ ಮಾತನಾಡುವ ತರುಣ್, “ನಮ್ಮ “ರಾಬರ್ಟ್’ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಿದ್ಧವಿದೆ. ಆದರೆ, ಚಿತ್ರಮಂದಿರ ಓಪನ್ ಆದ ನಂತರ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕೂಡಾ ಮಖ್ಯವಾಗುತ್ತದೆ. ಎಲ್ಲವೂ ನಾರ್ಮಲ್ ಆಗಿದ್ದರೆ ಖಂಡಿತಾ ನಾವು ಚಿತ್ರ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ.