Advertisement

ದರ್ಶನ್‌ ಅಭಿನಯದ ‘ರಾಬರ್ಟ್’‌ ಇಂದು ತೆರೆಗೆ

08:15 AM Mar 11, 2021 | Team Udayavani |

ನಟ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರ ಇಂದು (ಮಾ. 11) ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ “ರಾಬರ್ಟ್‌’ ಏಕಕಾಲಕ್ಕೆ ತೆರೆ ಕಾಣುತ್ತಿದೆ. ಇನ್ನು ಕರ್ನಾಟಕ ರಾಜ್ಯಾದ್ಯಂತ ಸುಮಾರು 656 ಚಿತ್ರಮಂದಿರಗಳಲ್ಲಿ, 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ “ರಾಬರ್ಟ್‌’ ಚಿತ್ರ ತೆರೆಕಾಣುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Advertisement

ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಅಂಕಿ-ಅಂಶಗಳ ಪ್ರಕಾರ, ಕನ್ನಡ ಸಿನಿಮಾವೊಂದು ಕರ್ನಾಟಕ ರಾಜ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಥಿಯೇಟರ್‌ಗಳಲ್ಲಿ ಬಿಡುಗಡೆ ಕಾಣುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಇದನ್ನೂ ಓದಿ:ಸಾರಿಗೆ ನೌಕರರಿಗೆ ಶಿವರಾತ್ರಿ ಸಂಭ್ರಮ! ಅಂತರ್‌ ನಿಗಮಗಳ ವರ್ಗಾವಣೆಗೆ ಅಸ್ತು

“ರಾಬರ್ಟ್‌’ ಚಿತ್ರತಂಡದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನ ಎಲ್ಲ ಸ್ಕ್ರೀನ್‌ಗಳೂ ಸೇರಿ 2786 ಶೋಗಳಲ್ಲಿ “ರಾಬರ್ಟ್‌’ ಸಿನಿಮಾ ಪ್ರದರ್ಶನ ಕಾಣಲಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಅಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ “ರಾಬರ್ಟ್‌’ ಹವಾ ಜೋರಾಗಿದ್ದು, ಮೊದಲ ದಿನ ಆಂಧ್ರದಲ್ಲಿ 433 ಶೋಗಳು, ತೆಲಂಗಾಣದಲ್ಲಿ 407 ಶೋಗಳನ್ನು “ರಾಬರ್ಟ್‌’ ಪಡೆದುಕೊಂಡಿದೆ. ಒಟ್ಟಾರೆ ಮೂರು ರಾಜ್ಯಗಳಿಂದ ಮೊದಲ ದಿನ 3723 ಶೋ ಆಯೋಜನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next