Advertisement

ದಂಡಿನ ಮಾರಮ್ಮ ದೇಗುಲ ಹುಂಡಿ ದರೋಡೆ

07:01 PM Dec 19, 2020 | Suhan S |

ಗುಂಡ್ಲುಪೇಟೆ: ತಾಲೂಕಿನ ಚನ್ನವಡೆಯನಪುರ ಗ್ರಾಮದ ದಂಡಿನ ಮಾರಮ್ಮ ದೇವಸ್ಥಾನ ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ನಗನಾಣ್ಯ ದರೋಡೆ ಮಾಡಿರುವ ಘಟನೆ ಜರುಗಿದೆ.

Advertisement

ಗ್ರಾಮದ ಹೊರವಲಯದಲ್ಲಿರುವ ದಂಡಿನ ಮಾರಮ್ಮನವರ ದೇವಸ್ಥಾನದ ಹುಂಡಿಯನ್ನು ವರ್ಷಕ್ಕೊಮ್ಮೆ ತೆರೆಯುವ ಪದ್ಧತಿಯಿದ್ದು, ಪ್ರತಿ ವರ್ಷವೂ ಲಕ್ಷಾಂತರ ರೂ.ನಗದು ಸಂಗ್ರಹವಾಗು ತ್ತದೆ. ಅಲ್ಲದೆ ಭಕ್ತರು ಚಿನ್ನದ ತಾಳಿ ಹಾಗೂ ಆಭರಣಗಳನ್ನು ಗೋಲಕದೊಳಗೆ ಹಾಕಿ ತಮ್ಮ ಹರಕೆ ತೀರಿಸುವುದು ಇಲ್ಲಿನ ವಾಡಿಕೆಯಾಗಿದೆ.

ಕಳೆದ ಒಂದು ವರ್ಷದಿಂದಲೂ ಗೋಲಕ ತೆರೆಯದ ಬಗ್ಗೆ ಮಾಹಿತಿ ಪಡೆದ ಕಳ್ಳರು ಹುಂಡಿ ಯನ್ನು ಒಡೆದು ನಗನಾಣ್ಯಗಳನ್ನು ದೋಚಿದ್ದಾರೆಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬೇಗೂರು ಠಾಣೆಯ ಪಿಎಸ್‌ಐ ಕೃಷ್ಣಕಾಂತಕೋಳಿ, ಎಎಸ್‌ಐ ದೊರೆರಾಜ್‌, ಮುಖ್ಯಪೇದೆ ಮಲ್ಲಿಕಾರ್ಜುನ ಭೇಟಿ ನೀಡಿಪರಿಶೀಲಿಸಿದರು. ಸ್ಥಳಕ್ಕೆ ತಜ್ಞರನ್ನು ಕರೆಸಿ ಬೆರಳಚ್ಚುಗುರುತುಗಳನ್ನು ಸಂಗ್ರಹಿಸಲಾಗಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಮದ್ಯ ವಶ, ಇಬ್ಬರ ಬಂಧನ :

ಯಳಂದೂರು: ಪಟ್ಟಣದ ಹಳೆ ಉಪಖಜಾನೆಕಾರ್ಯಾಲಯದ ಮುಂಭಾಗ ಗುರುವಾರ ರಾತ್ರಿ ಅಕ್ರಮವಾಗಿ ಸಾಗಿ ಸುತ್ತಿದ್ದ ಇಬ್ಬರನ್ನು ಪೊಲೀಸರುಬಂಧಿಸಿ, ಮದ್ಯ ವಶಪಡಿಸಿಕೊಂಡಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ 209ರ ಗೌತಮ್‌ ಬಡಾ ವಣೆಯ ಬಳಿ ಇರುವ ಹಳೆ ಉಪಖಜಾನೆ ಮುಂಭಾಗ ಸ್ಕೂಟರ್‌ನಲ್ಲಿ ತಾಲೂಕಿನ ಚಂಗಚಹಳ್ಳಿಯ ಶಿವರಾಜು ಹಾಗೂ ಪ್ರಕಾಶ್‌ ಯಳಂದೂರು ಪಟ್ಟಣದಿಂದತಮ್ಮ ಗ್ರಾಮಕ್ಕೆ ಮದ್ಯ ಸಾಗಿಸುತ್ತಿದ್ದರು. ಖಚಿತ ಮಾಹಿತಿಮೇರೆಗೆ ಡಿವೈಎಸ್‌ಪಿ ಜಿ. ನಾಗರಾಜು ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ9 ಲೀಟರ್‌ನ96 ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಪಿಎಸ್‌ಐ ಎನ್‌.ಕರಿಬಸಪ್ಪ, ಎಎಸ್‌ಐ ಪರಶಿಮೂರ್ತಿ, ರಂಗಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next