Advertisement

ಸುಳ್ಯ: ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

01:40 PM Apr 01, 2021 | Team Udayavani |

ಸುಳ್ಯ: ಪಟ್ಟಣದ ಖಾಸಗಿ ಬಸ್ಸು ನಿಲ್ದಾಣ ಬಳಿ ಇರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳ್ಳರು ನುಗ್ಗಿ ಚಿನ್ನ, ನಗದು ಕಳವು ಮಾಡಿದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಜ್ಯುವೆಲ್ಲರಿ ಅಂಗಡಿಯ ಬೀಗ ಒಡೆದ ಕಳ್ಳರು ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಸುಮಾರು ಐವತ್ತು ಸಾವಿರ ರೂಪಾಯಿ ಕಳವುಗೈದಿದ್ದಾರೆನ್ನಲಾಗಿದೆ.

ಇದನ್ನೂ ಓದಿ:ಸುರತ್ಕಲ್: ತಡರಾತ್ರಿ ರೈಲಿನಡಿ ಸಿಲುಕಿ 13 ಎಮ್ಮೆಗಳು ಸಾವು!

ಪತ್ರಿಕಾ ವಿತರಕರು ಅಂಗಡಿಗೆ ಪತ್ರಿಕೆ ಹಾಕುವ ಸಂದರ್ಭದಲ್ಲಿ ಬೀಗ ಒಡೆದಿರುವುದು ಕಂಡುಬಂತು. ವಿಷಯ ತಿಳಿದ ಅಂಗಡಿ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರ ಇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next