Advertisement

ಬಂಟ್ವಾಳ: ದೈಕಿನಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿ ದರೋಡೆ, 70 ಸಾವಿರ ರೂ. ಲೂಟಿ

11:22 AM Sep 04, 2020 | keerthan |

ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆಯ ದೈಕಿನಕಟ್ಟೆಯಲ್ಲಿರುವ ಧರ್ಮಶ್ರೀ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ.

Advertisement

ಬಂಕ್ ನಲ್ಲಿ ಕಳ್ಳರು ಶಟರ್ ನ ಬೀಗ ಮುರಿದು ಗಾಜು ಒಡೆದು ಒಳನುಗ್ಗಿದ್ದು, ಸುಮಾರು 70 ಸಾವಿರ ರೂ. ನಗದು ದೋಚಿದ್ದಾರೆ. ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ.ಹಾಗೂ ಪುಂಜಾಲಕಟ್ಟೆ ಪಿಎಸ್ಐ ಸೌಮ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹೈಪ್ರೊಫೈಲ್ ಡ್ರಗ್ಸ್ ಜಾಲ: ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಶಕ್ಕೆ

Advertisement

Advertisement

Udayavani is now on Telegram. Click here to join our channel and stay updated with the latest news.

Next