Advertisement

ಮನೆಗಳ್ಳತನ: 4 ವರ್ಷ ಕಾರಾಗೃಹ ಶಿಕ್ಷೆ

03:09 PM Apr 13, 2022 | Team Udayavani |

ಹೊಸಪೇಟೆ: ಮನೆಗಳ್ಳತನ ಆರೋಪಿಗೆ ನಗರದ ಪ್ರಧಾನ ಸಿ.ಜೆ.(ಕಿ.ವಿ) ಮತ್ತು ಜೆ.ಎಂ. ಎಫ್‌.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕಿಶನ್‌ ಬಿ. ಮಾಡಲಗಿ ಅವರು 4 ವರ್ಷ ಕಾರಾಗೃಹ ಶಿಕ್ಷೆ ಮತ್ತು 3 ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದರು.

Advertisement

ನಗರದ ನಿವಾಸಿ ಗಿಡ್ಡ ಜಂಬಯ್ಯ ಜೈಲು ಶಿಕ್ಷೆಗೆ ಗುರಿಯಾದ ಮನೆಗಳ್ಳತನ ಆರೋಪಿ. 2013ರಲ್ಲಿ ನಗರದ ಬಳ್ಳಾರಿ ರಸ್ತೆಯಲ್ಲಿರುವ ಎಂ.ಬಿ.ಟಿ. ಪೆಟ್ರೋಲ್‌ ಬಂಕ್‌ ಎದುರುಗಡೆ ಎಳವರ ಓಣಿಯಲ್ಲಿ ವಾಸವಿರುವ ಎಂ.ಜೆ.ಜ್ಞಾನೇಶ್ವರ್‌ರಾವ್‌ ಎಂಬುವವರ ಮನೆ ಬಾಗಿಲು ಮುರಿದು ಮನೆಯಲ್ಲಿದ್ದ 1,50000 ಬೆಲೆಬಾಳುವ ಬೆಳ್ಳಿ, ಬಂಗಾರದ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು. ಹೊಸಪೇಟೆ ಪಟ್ಟಣ ಪೋಲಿಸ್‌ ಠಾಣೆ ಆರಕ್ಷಕ ನಿರೀಕ್ಷಕ ಶ್ರೀಧರ ದೊಡ್ಡಿ ಅವರು ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡ ನಂತರ ಹೊಸಪೇಟೆಯ ಪ್ರಧಾನ ಸಿ.ಜೆ.(ಕಿ.ವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕಿಶನ್‌ ಬಿ.ಮಾಡಲಗಿ ವಿಚಾರಣೆ ನಡೆಸಿ ಆರೋಪಿ ಗಿಡ್ಡ ಜಂಬಯ್ಯನಿಗೆ 4 ವರ್ಷ ಕಾರಾಗೃಹ ಶಿಕ್ಷೆ ಮತ್ತು 3 ಸಾವಿರ ದಂಡ ಕಟ್ಟತಕ್ಕದ್ದು. ಆರೋಪಿತನು ದಂಡ ಕಟ್ಟಲು ವಿಫಲವಾದರೆ 2 ತಿಂಗಳು ಸಾದಾ ಶಿಕ್ಷೆಯನ್ನು ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ಎಸ್‌. ಮಿರಜಕರ ಅವರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next