Advertisement
ಬಾಯಂಬಾಡಿ- ಮಾಡಾವು ಕಟ್ಟೆ ರಸ್ತೆಈ ರಸ್ತೆ ಕೊಳ್ತಿಗೆ ಗ್ರಾಮದ ಬಾಯಂಬಾಡಿಯಿಂದ ಅಡ್ಯಾರ್‌ಗುಂಡ- ಕಳಾಯಿ ಮೂಲಕ ಮಾಡಾವು ಕಟ್ಟೆಯನ್ನು ಸಂಪರ್ಕಿಸುತ್ತದೆ. ಪಾರ್ಲದ ವರೆಗಿನ ರಸ್ತೆಗೆ 20 ವರ್ಷಗಳ ಹಿಂದೆ ಡಾಮರು ಹಾಕಲಾಗಿದೆ. ಈಗ ಅದು ಪೂರ್ಣ ಮಾಯವಾಗಿದೆ. ಈ ರಸ್ತೆಯ ಮೂಲಕ ಸಾಗಿದರೆ ಪೆರ್ಲಂಪಾಡಿ ನಿವಾಸಿಗಳು ಮಾಡಾವು ಕಟ್ಟೆ ಬಳಿಯಿಂದ ಪುತ್ತೂರಿಗೆ ನೇರವಾಗಿ ಸಂಪರ್ಕ ಸಾಧಿಸಬಹುದು. ಹೊಂಡ-ಗುಂಡಿಗಳಿರುವ ಮಣ್ಣಿನ ರಸ್ತೆಯಾಗಿದ್ದರಿಂದ ಯಾವುದೇ ವಾಹ ನಗಳು ತೆರಳುವಂತಿಲ್ಲ. ಸುಮಾರು 6 ಕಿ.ಮೀ. ಉದ್ದದ ರಸ್ತೆ ಈಗಲೂ ಗ್ರಾಪಂ ಸುಪರ್ದಿಯಲ್ಲೇ ಇದ್ದು ಇನ್ನೂ ಜಿ.ಪಂ. ರಸ್ತೆಯಾಗಿ ಮೇಲ್ದರ್ಜೆಗೇರಿಲ್ಲ. ಇದಕ್ಕಾಗಿ ಯಾರೂ ಮುತುವರ್ಜಿ ವಹಿಸಿಲ್ಲ ಎಂಬು ದು ಗ್ರಾಮಸ್ಥರ ಆರೋಪ.
– ಮುಚ್ಚಿ ನಡ್ಕ ರಸ್ತೆ
ಪೆರ್ಲಂಪಾಡಿಯಿಂದ ಪಾಂಬಾರು- ಅಮಲ- ಮುಚ್ಚಿನಡ್ಕ ರಸ್ತೆ 5 ಕಿ.ಮೀ. ಉದ್ದವಿದೆ. ಜಿ.ಪಂ. ವ್ಯಾಪ್ತಿಗೊಳಪಡುವ ರಸ್ತೆಗೆ 20 ವರ್ಷಗಳ ಹಿಂದೆ 2 ಕಿ.ಮೀ. ದೂರದವರೆಗೆ ಡಾಮರು ಹಾಕಲಾಗಿದೆ. ಉಳಿದಂತೆ ರಸ್ತೆಯ ಸ್ಥಿತಿ ಅಯೋಮ ಯವಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೂಲಕ ಸಾಗಬೇಕಾದರೆ ಹರಸಾಹಸ ಪಡಬೇಕಾದ ಸನ್ನಿವೇಶ ಇದೆ. ಮೊಗಪ್ಪೆ-ಕುಲ್ಲಂಪಾಡಿ
– ಐವರ್ನಾಡು ರಸ್ತೆ
ಮೊಗಪ್ಪೆಯಿಂದ- ಕುಲ್ಲಂಪಾಡಿ ಮೂಲಕ ಐವರ್ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ 3 ಕಿ.ಮೀ. ಉದ್ದವಿದ್ದು, ಜಿ.ಪಂ. ವ್ಯಾಪ್ತಿಯಲ್ಲಿದೆ. ಸುಳ್ಯ ತಾಲೂಕಿನ ಐವರ್ನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯೂ ಡಾಮರು ಕಾಮಗಾರಿಯಾಗಿಲ್ಲ. ಮಾವಿನಕಟ್ಟೆಯಿಂದ ದುಗ್ಗಳಕ್ಕೆ ತೆರಳುವ ರಸ್ತೆಯೂ ಹೀನಾಯ ಸ್ಥಿತಿಯಲ್ಲಿದ್ದು, ಸಂಚಾರಕ್ಕೆ ದುರ್ಗಮವಾಗಿದೆ. ಪೆರ್ಲಂ ಪಾಡಿ- ಆನಡ್ಕ- ಕಣಿಯಾರ್ ರಸ್ತೆ ದುರಸ್ತಿ ಕಾಣದೇ ಅದೆಷ್ಟೋ ವರ್ಷಗಳು ಕಳೆದಿವೆ. ಮಳೆಗಾಲದಲ್ಲಿ ಇಲ್ಲಿ ವಾಹನಗಳ ಸಂಚಾರ ಸಾಧ್ಯವೇ ಇಲ್ಲ. ಬೇಸಗೆಯಲ್ಲಿ ಮಾತ್ರ ಕಷ್ಟ ಪಟ್ಟು ಸಂಚರಿಸುತ್ತವೆ.
Related Articles
Advertisement
ಡಾಮರು ಪೂರ್ಣಗೊಂಡಿಲ್ಲಗ್ರಾಮದ ಅಭಿವೃದ್ಧಿಗೆ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಂಸದ ನಳಿನ್‌ಕುಮಾರ್ ಕಟೀಲು ಅನುದಾನ ನೀಡಿದ್ದಾರೆ. ನೆಟ್ಟಾರಿನಿಂದ ಪೆರ್ಲಂಪಾಡಿಗೆ ತೆರಳುವ ಮುಖ್ಯ ರಸ್ತೆಗೆ ಶಾಸಕರ ನಿಧಿಯಿಂದ 1.70 ಕೋಟಿ ರೂ. , ಪಾಂಬಾರು ರಸ್ತೆಗೆ 1.70 ಕೋಟಿ ರೂ., ಗೋಳಿತ್ತಡಿ ರಸ್ತೆಗೆ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಸಂಸದರ ನಿಧಿಯಿಂದ ಆನಡ್ಕ ರಸ್ತೆ 600 ಅಡಿ ಕಾಂಕ್ರೀಟ್ ಕಾಮಗಾರಿ ಮತ್ತು ಕಲಾಯಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಮೋರಿ ರಚನೆ ಮತ್ತಿತರ ಕಾಮಗಾರಿಗಳು ಸಾಗಿವೆ. ಈ ಅನುದಾನಗಳಿಂದ ಯಾವುದೇ ರಸ್ತೆಗಳಿಗೆ ಸಂಪೂರ್ಣವಾಗಿ ಡಾಮರು ಹಾಕಲಾಗಿಲ್ಲ. ಪ್ರವೀಣ್ ಚೆನ್ನಾವರ