Advertisement

ಬೆಂಗ್ಳೂರಲ್ಲ, ದಿಲ್ಲಿಯ ರಸ್ತೆಗಳೂ ಹದಗೆಟ್ಟಿವೆ

11:56 AM Oct 29, 2017 | |

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರಿನ ರಸ್ತೆಗಳು ಹೊಂಡಗಳಿಂದ ತುಂಬಿ ಹೋಗಿದೆ. ಭಾರತದ ರಾಜಧಾನಿ ನವದೆಹಲಿಯ ರಸ್ತೆಗಳೂ ಬಿಟ್ಟೇನೂ ಉಳಿದಿಲ್ಲ. ಬುಧವಾರದ ವರೆಗೆ ನಡೆದ ಬೆಳವಣಿಗೆ ಯಲ್ಲಿ ಉದ್ಯಮಿಯೊಬ್ಬರು ಸೇರಿದಂತೆ ಒಂದು ತಿಂಗಳ ಅವಧಿಯಲ್ಲಿ ನಾಲ್ವರು ಅಸುನೀಗಿದ್ದಾರೆ.

Advertisement

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ರಸ್ತೆ ಗುಂಡಿಗಳಿಗೆ ಮೂವರು ಬಲಿಯಾಗಿದ್ದರು. ಆದರೆ ಪೊಲೀಸರಿಗೆ ಈ ಪ್ರಕರಣ ತೀವ್ರ ತಲೆನೋವಿನ ವಿಚಾರವಾಗಿ ಪರಿಣಮಿಸಿದೆ. ನವದೆಹಲಿಯ ಮೆಟ್‌ಕಫೆ ಎಂಬ ಸ್ಥಳದ ಸಮೀಪ 61 ವರ್ಷದ ವೃದ್ಧರೊಬ್ಬರು ರಸ್ತೆಯಲ್ಲಿನ ಗುಂಡಿಗೆ ಬಲಿಯಾಗಿದ್ದರು.

ಈ ಸ್ಥಳದಲ್ಲಿ ಸಿಸಿಟಿವಿ ಇಲ್ಲದೇ ಇರುವುದರಿಂದ ಸರಿಯಾದ ರೀತಿಯ ಕಾರಣ ಪತ್ತೆ ಹಚ್ಚಲು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಖಂಜವಾಲಾ ಎಂಬ ಪ್ರದೇಶದಲ್ಲಿ ಶಾಲಾ ಶಿಕ್ಷಕರೊಬ್ಬರ ಮೇಲೆ ವಾಟರ್‌ ಟ್ಯಾಂಕರ್‌ ಹರಿದು ಮೃತಪಟ್ಟಿದ್ದರು. ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ 2015ರಲ್ಲಿ ರಸ್ತೆ ದುರಂತಗಳಲ್ಲಿ ಬಲಿಯಾದವರ ಸಂಖ್ಯೆ 28.

ಆ ವರ್ಷ ಲಭ್ಯವಾಗಿರುವ ದುರಂತಗಳ ಸಂಖ್ಯೆ 132. ಇದೇ ವೇಳೆ ಉತ್ತರ ದೆಹಲಿ ಪಾಲಿಕೆಗೆ ರಸ್ತೆ ದುರಸ್ತಿ ಮಾಡಲು ಹಣಕಾಸಿನ ಕೊರತೆ ಎದುರಾಗಿದೆ. ಈಗಾಗಲೇ ಹಲವು ಗುತ್ತಿಗೆದಾರರಿಗೆ 418 ಕೋಟಿ ರೂ.ಗಳಷ್ಟು ಬಿಲ್‌ ಪಾವತಿ ಮಾಡಬೇಕಾಗಿದ್ದು, ಬಾಕಿ ಉಳಿದಿದೆ. ಹೀಗಾಗಿ ಕಾಮ  ಗಾರಿಗಳು ಪೂರ್ತಿಯಾಗದೆ ಅಥವಾ ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಒಪ್ಪಿಕೊಳ್ಳುತ್ತಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next