Advertisement

ರಸ್ತೆ ಕಾಮಗಾರಿ ವಿಳಂಬ: ಬನ್ನಿಗೋಳ ಗ್ರಾಮಸ್ಥರ ಆಕ್ರೋಶ

11:55 AM Jul 15, 2020 | Suhan S |

ಮುದಗಲ್ಲ: ಚಿಕ್ಕೆಸರೂರು- ಮುಂಡರಗಿ ರಸ್ತೆ ಡಾಂಬರೀಕರಣ ಕಾಮಗಾರಿ ಮುಕ್ತಾಯವಾಗಿದ್ದು, ಗ್ರಾಮಗಳ ಮಧ್ಯೆ ಸಿಸಿ ರಸ್ತೆ, ಅಲ್ಲಲ್ಲಿ ಸಿಡಿ ಕಾಮಗಾರಿಗಳನ್ನು ನಿಧಾನ ಗತಿಯಲ್ಲಿ ನಿರ್ವಹಿಸುತ್ತಿರುವುದನ್ನು ಖಂಡಿಸಿ ಬನ್ನಿಗೋಳ ಗ್ರಾಮಸ್ಥರು ಇತ್ತೀಚೆಗೆ ಸಿಸಿ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿದರು.

Advertisement

ಕಾಲಮಿತಿಯಲ್ಲಿ ಲೋಕೋಪ ಯೋಗಿ ಇಲಾಖೆ ಅಧಿಕಾರಿ ಗಳು ಕಾಮಗಾರಿ ಮಾಡಿಲ್ಲ. ಮಳೆಗಾಲ ದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆಎಂದು ಆರೋಪಿಸಿ ರಸ್ತೆ ನಿರ್ಮಾಣಕ್ಕೆ ತಡೆದು ಪ್ರತಿಭಟನೆ ನಡೆಸಿದರು. ಲಿಂಗಸುಗೂರು ಲೋಕೋಪಯೋಗಿ ಇಲಾಖೆ ಅಧಿಕಾರಿ, ಪೊಲೀಸ್‌ ಇಲಾಖೆ, ಪಂಚಾಯತ್‌ಅ ಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಸಿದರು.

ಇನ್ನು ಕೆಲವರು ಗುತ್ತಿಗೆದಾರ ಎನ್‌.ಮಲ್ಲಿಕಾರ್ಜುನ ಹಾಗೂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಜಗದೇವಯ್ಯ ಮಾತನಾಡಿ, ಗ್ರಾಮದಲ್ಲಿ ರಸ್ತೆಗೆ ಹೊಂದಿಕೊಂಡಿರುವ ಕೆಲ ಮನೆಗಳನ್ನು ತೆರವುಗೊಳಿಸಿದರೆ, ರಸ್ತೆ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ರಸ್ತೆ ಸರಿಯಾಗಿ ನಿರ್ಮಾಣವಾದರೆ ಗ್ರಾಮ ಅಂದವಾಗಿರುತ್ತದೆ ಎಂದು ವಸ್ತುಸ್ಥಿತಿ ವಿವರಿಸಿದರು.

ಆಗ ಗ್ರಾಮಸ್ಥರು ಕುಲಂಕೂಶವಾಗಿ ಚರ್ಚಿಸಿ ಅಗಲವಾದ ರಸ್ತೆ ನಿರ್ಮಿಸಲು ಒಪ್ಪಿಗೆ ನೀಡಿದರು. ಜೂನಿಯರ್‌ ಇಂಜಿನಿಯರ್‌ ಹುಸೇನ್‌ ಭಾಷಾ, ಬಸವರಾಜ ವಸ್ತ್ರದ, ಮುದಗಲ್ಲ ಪಿಎಸ್‌ಐ ಡಾಕೇಶ, ಗ್ರಾಮಸ್ಥರಾದ ಶರಣಪ್ಪ ತೋಟದ, ಚಿನ್ನಪ್ಪ ವಡ್ಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next