Advertisement

ಗುರುವಾಯನಕೆರೆ ಜಂಕ್ಷನ್‌ನಲ್ಲಿ ರಸ್ತೆ ಕಾಮಗಾರಿ; ಟ್ರಾಫಿಕ್‌ ಕಿರಿಕಿರಿ

12:33 PM May 20, 2018 | |

ಬೆಳ್ತಂಗಡಿ : ರಸ್ತೆ ದುರಸ್ತಿ ಸಲುವಾಗಿ ಗುರುವಾಯನಕೆರೆ ಜಂಕ್ಷನ್‌ನಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸುತ್ತಿದ್ದು, ಶುಕ್ರವಾರ ರಾತ್ರಿ ರಸ್ತೆ ಮೇಲಿನ ಡಾಮರು ಕಿತ್ತು, ಮತ್ತೆ ಹಾಕಲಾಗಿದೆ. ಇದರಿಂದ ಜಂಕ್ಷನ್‌ನಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದು, ಟ್ರಾಫಿಕ್‌ ಬಿಸಿ ಅನುಭವಿಸುವಂತಾಯಿತು. 

Advertisement

ಬೆಳಗ್ಗಿನಿಂದಲೇ ಟ್ರಾಫಿಕ್‌
ರಸ್ತೆ ಡಾಮರು ಅಗೆದು ಹಾಕಿದ್ದು, ದ್ವಿಚಕ್ರ ಹಾಗೂ ಕಾರು ಚಾಲಕರು ಸರಾಗವಾಗಿ ಚಲಿಸಲು ಅಡ್ಡಿಯಾಯಿತು. ಜತೆಗೆ ಗುರುವಾಯನಕೆರೆ ಜಂಕ್ಷನ್‌ ಬಳಿಯಿಂದ ಉಪ್ಪಿನಂಗಡಿ, ಮಂಗಳೂರು, ಮೂಡಬಿದಿರೆ, ವೇಣೂರು, ಕಾರ್ಕಳ ಮೊದಲಾದೆಡೆ ತೆರಳುವ ವಾಹನಗಳು ತಿರುವು ಪಡೆಯುವುದರಿಂದ ಹಾಗೂ ಮತ್ತೂಂದು ವಾಹನ ಚಲಿಸುವವರೆಗೆ ಕಾಯಬೇಕಾಗವುದರಿಂದ ಸಮಸ್ಯೆ ಎದುರಾಗಿದೆ.

ಟ್ರಾಫಿಕ್‌ ಸಿಬಂದಿ ಪರದಾಟ
ಬೆಳಗ್ಗಿನಿಂದಲೇ ಟ್ರಾಫಿಕ್‌ ಸಿಬಂದಿ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು. ಆದರೆ ಕೆಲವರು ನಿಯಮ ಉಲ್ಲಂಘನೆಯಿಂದ ಹಾಗೂ ಗುರುವಾಯನಕೆರೆ ಜಂಕ್ಷನ್‌ನಲ್ಲಿ ಬಸ್‌ಗಳು ಹಾಗೂ ಇತರ ವಾಹನಗಳು ಪ್ರಯಾಣಿಕರನ್ನು ಹತ್ತಿಸಲು, ಇಳಿಸಲು ನಿಲ್ಲಿಸುತ್ತಿದ್ದುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಯಿತು. ಬಳಿಕ ಸಿಬಂದಿಯು ಬೇರೆಡೆ ಪ್ರಯಾಣಿಕರಿಗಾಗಿ ನಿಲುಗಡೆ ಮಾಡಲು ಸೂಚಿಸಿದ್ದರಿಂದ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆಯಾಯಿತು. ಟ್ರಾಫಿಕ್‌ ಠಾಣೆ ಹಾಗೂ ಗೃಹರಕ್ಷಕ ದಳದ 8 ಮಂದಿ ಸಿಬಂದಿ ಕಾರ್ಯನಿರ್ವಹಿಸಿದರೂ ಪರದಾಡಬೇಕಾಯಿತು.

ಇನ್ನೂ ಎರಡು ದಿನ ಕಾಮಗಾರಿ
ವಾರಂತ್ಯವಾಗಿರುವುರಿಂದ  ಜನಸಂದಣಿ ಹೆಚ್ಚಾಗಿದೆ. ಜತೆಗೆ ಶಿರಾಡಿ ಘಾಟಿ ಬ್ಲಾಕ್‌ ಆಗಿರುವುದರಿಂದ ಚಾರ್ಮಾಡಿ ಮೂಲಕ ವಾಹನಗಳು ಬರುತ್ತಿವೆ. ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿ ರುವುದರಿಂದ ಸಮಸ್ಯೆ ಉಂಟಾಗುತ್ತಿದೆ.

ಶನಿವಾರ ಬೆಳಗ್ಗೆ ಬೆಳ್ತಂಗಡಿಯಿಂದ ಗುರುವಾಯನ ಕೆರೆಗೆ ಅಗಮಿಸುವ ವಾಹನಗಳು ಸುಮಾರು 1 ಕಿ.ಮೀ. ದೂರದವರೆಗೂ ಸಾಲುಗಟ್ಟಿ ನಿಂತಿದ್ದು ಕಂಡುಬಂತು. ರಸ್ತೆ ಸರಿಯಾಗಲು ಇನ್ನೂ ಎರಡು ದಿನಗಳ ಅವಧಿ ಬೇಕಿದೆ ಎಂದು ಅಭಿಯಂತರು ತಿಳಿಸಿದ್ದು, ವಾರಾಂತ್ಯದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚುವ ಸಾಧ್ಯತೆ ನಿಚ್ಚಳವಾಗಿದೆ.

Advertisement

ಬೇಕಿದೆ ಶಾಶ್ವತ ಪರಿಹಾರ
ಸಮಸ್ಯೆ ಮರು ಕಳಿಸು ತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರುವುದರಿಂದ ಶಾಶ್ವತ ಪರಿಹಾರ ರೂಪಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಇಲ್ಲವಾದಲ್ಲಿ ಪಟ್ಟಣ ಬೆಳೆಯುತ್ತಿರುವುದರಿಂದ ನಿತ್ಯ ಪರದಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ. 

ಬಸ್‌ ನಿಲ್ದಾಣ  ಬದಲಾಯಿಸಬೇಕಿದೆ
ಬಸ್‌ ತಂಗುದಾಣ ಬದಲಾಯಿಸಿದ್ದ ವೇಳೆ ಕೊಂಚ ಮಟ್ಟಿಗೆ ಟ್ರಾಫಿಕ್‌ ನಿಯಂತ್ರಣಕ್ಕೆ ಬಂದಿತ್ತು. ಆದರೆ ಎಲ್ಲ ಭಾಗಗಳಿಂದ ಆಗಮಿಸುವ ಬಸ್‌ ಚಾಲಕರು ಗುರುವಾಯನಕೆರೆ ಜಂಕ್ಷನ್‌ ಬಳಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಈ ಹಿಂದೆ ಇದ್ದಂತಹಾ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿದಲ್ಲಿ ಕೊಂಚ ಮಟ್ಟಿಗೆ ಗೊಂದಲ ಪರಿಹಾರವಾಗಬಹುದು ಎನ್ನುವ ಭಾವನೆ ಸಾರ್ವಜನಿಕರಲ್ಲಿ
ಮೂಡಿದೆ.

ಚತುಷ್ಪಥ ರಸ್ತೆಯಾಗಲಿ
ಪುಂಜಾಲಕಲಟ್ಟೆಯಿಂದ ಉಜಿರೆವರೆಗೂ ಟ್ರಾಫಿಕ್‌ ಸಮಸ್ಯೆಯಿದೆ. ಚತುಷ್ಪಥ ರಸ್ತೆಯಿಂದ ಮಾತ್ರ ಕೊಂಚ ಈ ಸಮಸ್ಯೆ ನಿವಾರಣೆ ಮಾಡಲು ಸಾಧ್ಯ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಫ್ಲೆ$ç ಓವರ್‌ ನಿರ್ಮಾಣ ಹಾಗೂ ಅಂಡರ್‌ಪಾಸ್‌ ನಿರ್ಮಾಣ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕಲಿದೆ.ಮಾದರಿಯಲ್ಲಿ ವಾಹನಗಳು ತೆರಳಲು ಅನುಕೂಲ ಮಾಡಿಕೊಟ್ಟಲ್ಲಿ ಈ ಸಮಸ್ಯೆ ಪರಿಹಾರವಾಗಲು ಸಾಧ್ಯ.
– ಪೀತಾಂಬರ ಹೆರಾಜೆ, ನಿವೃತ್ತ ಎಸ್ಪಿ

ಎರಡು ದಿನಗಳ ಕಾಲ ಜನತೆಗೆ ಸಮಸ್ಯೆ
ಮಳೆಗಾಲದಲ್ಲಿ ರಸ್ತೆ ಹಾಳಾಗುವುದರಿಂದ ಸರಿಪಡಿಸಲಾಗುತ್ತಿದೆ. ಇಲ್ಲಿ ವಾಹನಗಳು ತಿರುವು ಪಡೆದುಕೊಳ್ಳುತ್ತವೆ. ಜತೆಗೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಹೊಂಡಗಳು ಸೃಷ್ಟಿಯಾಗುತ್ತಿದ್ದವು. ಇದೀಗ ವೆಟ್‌ ಮಿಕ್ಸ್‌ ಹಾಕಿ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಲಾಗುವುದು. ಕಾಮಗಾರಿ ಬೇಗನೆ ಆರಂಭಿಸಬೇಕಿತ್ತು, ಆದರೆ ಚುನಾವಣೆಯಿಂದ ತಡವಾಗಿದೆ. ಎರಡು ದಿನಗಳ
ಕಾಲ ಜನತೆಗೆ ಸಮಸ್ಯೆಯಾಗಲಿದೆ. ಬಳಿಕ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದ್ದರಿಂದ ಜನತೆ ಸಹಕರಿಸಬೇಕಿದೆ.
– ಯಶವಂತ್‌, ರಾ.ಹೆ. ಪ್ರಾ. ಸ.
ಕಾರ್ಯಪಾಲಕ ಅಭಿಯಂತ

Advertisement

Udayavani is now on Telegram. Click here to join our channel and stay updated with the latest news.

Next