Advertisement

ನೋಟಿಸ್‌ ನೀಡದೇ ರಸ್ತೆ ಅಗಲ: ಆದೇಶ ಉಲಂಘನೆ?

05:03 PM Aug 10, 2017 | |

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯನ್ನು 100 ಅಡಿಗೆ ಅಗಲೀಕರಣ ಮಾಡಲು ಕಟ್ಟಡದ ಮಾಲಿಕರಿಗೆ ನೋಟಿಸ್‌ ಜಾರಿ ಮಾಡಿ, ಭೂಸ್ವಾಧೀನ ನಡಾವಳಿ ನಡೆಸಿ ಪರಿಹಾರ ನೀಡಿ ಕಾಮಗಾರಿ ಆರಂಭಿಸಬೇಕು ಎಂದು ರಾಜ್ಯ ಉತ್ಛ ನ್ಯಾಯಾಲಯ ಆದೇಶಿಸಿದೆ. ಆದರೆ ಅದೆಲ್ಲವನ್ನೂ ಗಾಳಿಗೆ ತೂರಿ ಏಕಾಏಕಿ ಕಾಮಗಾರಿ ಆರಂಭಿಸಲಾಗುತ್ತಿದೆ. ಇದು ನ್ಯಾಯಾಂಗ
ನಿಂದನೆಯಾಗುತ್ತದೆ ಎಂದು ಜೋಡಿ ರಸ್ತೆಯ ಕಟ್ಟಡಗಳ ಮಾಲಿಕರು ತಿಳಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ತಕರ ಸಂಘದ ನಿರ್ದೇಶಕ ಡಿ.ನಾಗರಾಜು, ಶಾಸಕ ಸಿ.ಪುಟ್ಟರಂಗಶೆಟ್ಟಿ ಜೋಡಿ ರಸ್ತೆ ಯನ್ನು 100 ಅಡಿಗೆ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಜೋಡಿ ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡಗಳ ಮಾಲಿಕರು ರಾಜ್ಯ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಈ ಕಾಮಗಾರಿ
ಮುಂದುವರಿಸಲು ತಡೆಯಾಜ್ಞೆ ನೀಡಿದೆ. 2016ರ ಜನವರಿ 22 ರಂದು ಕಟ್ಟಡದ ಮಾಲಿಕರ ಅರ್ಜಿಯನ್ನು ಉತ್ಛ ನ್ಯಾಯಾಲಯ ಪುರಸ್ಕರಿಸಿದೆ ಎಂದರು. ಆದೇಶ ಉಲ್ಲಂಘನೆಯಾಗಲಿದೆ: ಉತ್ಛ ನ್ಯಾಯಾಲಯವು, ಬಿ. ರಾಚಯ್ಯ ಜೋಡಿ ರಸ್ತೆಯ ಇಕ್ಕೆಲಗಳಲ್ಲಿರುವ ಒಡೆದು ಹಾಕಬಾರದು. ಕರ್ನಾಟಕ ಪುರಸಭೆ ಕಾಯ್ದೆ ಕಲಂ 175-179-187ರ ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ರಸ್ತೆಯ
ಅಗಲೀಕರಣ ಮಾಡುವಾಗ ಕಟ್ಟಡದ ಮಾಲಿಕರಿಗೆ ಕಾನೂನು ಬದ್ಧವಾಗಿ ನೋಟಿಸ್‌ ಜಾರಿ ಮಾಡಬೇಕು. ಅವರ ಆಸ್ತಿಗಳನ್ನು ಕ್ರಮ ಮಾಡಿಕೊಡುವಂತೆಯೂ, ಅದಕ್ಕೆ ಮಾಲಿಕರು ಒಪ್ಪದಿದ್ದಲ್ಲಿ ಕಾನೂನು ಪ್ರಕಾರ ಭೂಸ್ವಾಧೀನ ನಡಾವಳಿ ನಡೆಸಿ ಕಟ್ಟಡಗಳನ್ನು
ಸ್ವಾಧೀನಪಡಿಸಿಕೊಂಡು, ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಬೇಕೆಂದು ಆದೇಶಿಸಿದೆ ಎಂದು ತಿಳಿಸಿದರು. ಮಾಲಿಕರು ಭೂ ಸ್ವಾಧೀನಕ್ಕೆ ಒಪ್ಪಿದ್ದಾರೆಂದಿರುವುದುಸುಳ್ಳು: ಹುತ್ಛ ನ್ಯಾಯಾಲಯದ ಆದೇಶವಿದ್ದರೂ ಕಟ್ಟಡದ ಮಾಲಿಕರಿಗೆ ಯಾವುದೇ ರೀತಿಯ ತಿಳಿವಳಿಕೆ ಪತ್ರವನ್ನು ಅಥವಾ ಭೂ ಸ್ವಾಧೀನಪಡಿಸಿಕೊಳ್ಳಲು ನೋಟಿಸ್‌ ನೀಡಿಲ್ಲ. ಹೀಗಿದ್ದರೂ ಶಾಸಕರು ಕಟ್ಟಡದ ಮಾಲಿಕರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವುದು ಸತ್ಯಕ್ಕೆ
ದೂರವಾಗಿದೆ. ಇದುವರೆಗೂ ಶಾಸಕರಾಗಲೀ, ಜಿಲ್ಲಾಧಿಕಾರಿಯವರಾಗಲೀ, ನಗರಸಬೆ ಆಯುಕ್ತರಾಗಲೀ ಜೋಡಿ ರಸ್ತೆ ಕಟ್ಟಡಗಳ
ಮಾಲೀಕರನ್ನು ಕರೆದು ಚರ್ಚೆ ಮಾಡಿಲ್ಲ. ಲಿಖೀತ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದರು. ನ್ಯಾಯಾಂಗ ನಿಂದನೆ: ಹೈಕೋರ್ಟ್‌ ಆದೇಶ ನೀಡಿ ಒಂದು ವರ್ಷವಾಗಿದ್ದರೂ ಜೋಡಿ ರಸ್ತೆ ಅಗಲೀಕರಣ ಮಾಡುವ ಮೊದಲು ನ್ಯಾಯಾಲಯ
ನೀಡಿರುವ ಆದೇಶ ಪಾಲಿಸಿಲ್ಲ. ಈಗ ಗುರುವಾರ ಮುಖ್ಯಮಂತ್ರಿಯವರು ಕಾಮಗಾರಿಗೆ ಶಿಲಾನ್ಯಾಸ ಮಾಡುತ್ತಾರೆ ಎಂದು ಶಾಸಕರು ತಿಳಿಸಿರುವುದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಒಂದು ವೇಳೆ ರಸ್ತೆ ಅಗಲೀಕರಣ ಮಾಡಬೇಕಾದಲ್ಲಿ, ಉತ್ಛ ನ್ಯಾಯಾಲಯದ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ರಸ್ತೆ ಅಗಲೀಕರಣ ಮಾಡಿದಲ್ಲಿ,
ಅದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಎಚ್ಚರಿಸಿದರು. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ಕಾನೂನಿನಂತೆ 120 ಅಡಿ ಇದೆ. ಅದನ್ನು 80 ಅಡಿ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ನ್ಯಾಯಾಲಯದ ರಸ್ತೆ 60 ಅಡಿಗೆ ಅಗಲೀಕರಣಗೊಳಿಸಲು ಅಂದಾಜು ಮಾಡಲಾಗಿತ್ತು. ಈಗ ಅದನ್ನು 53 ಅಡಿಗೆ ಸೀಮಿತಗೊಳಿಸಲಾಗಿದೆ. ಆದರೆ ಜನದಟ್ಟಣೆ ಕಡಿಮೆ ಇರುವ, ಯಾವುದೇ ಅಂತಾರಾಜ್ಯ ರಸ್ತೆ ಅಲ್ಲದ ಜೋಡಿ ರಸ್ತೆಯನ್ನು ಮಾತ್ರ 100 ಅಡಿ ಮಾಡಲು ಮುಂದಾಗಿದ್ದಾರೆ. ಇದು ದುರುದ್ದೇಶದಿಂದ ಕೂಡಿದೆ
ಎಂದು ಅವರು ಆರೋಪಿಸಿದರು. ವರ್ತಕರಾದ ರಾಜೇಂದ್ರಕುಮಾರ್‌, ಫ‌ಣೀಂದ್ರಪ್ಪ, ಮಹದೇವಸ್ವಾಮಿ, ಶಿವಕುಮಾರ್‌, ಗಣೇಶ್‌
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next