Advertisement

ರಸ್ತೆ ಹಾಳು ಮಾಡಿದ ಜಲಮಂಡಳಿ

02:15 PM Jul 07, 2018 | Team Udayavani |

ಕೆ.ಆರ್‌.ಪುರ: ಕಾವೇರಿ ನೀರಿನ ಪೈಪ್‌ಲೈನ್‌ ಅಳವಡಿಸಲು ದೇವಸಂದ್ರ ವಾರ್ಡ್‌ನ  ಟೆಂಟ್‌ ಮುಖ್ಯ ರಸ್ತೆ ಅಗೆದ ಜಲಮಂಡಳಿ, ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್‌ ಮಾಡುವಂತಾಗಿದೆ.

Advertisement

ದೇವಸಂದ್ರ ವಾರ್ಡ್‌ನ ಚಿಕ್ಕ ವಿನಾಯಕ ದೇವಸ್ಥಾನದಿಂದ ಟೆಂಟ್‌ ರಸ್ತೆವರೆಗೆ ಹಾಗೂ ಸುತ್ತಮುತ್ತಲ ಬಡಾವಣೆಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ ಪೈಪ್‌ಲೈನ್‌ ಅಳವಡಿಸಲು ರಸ್ತೆ ನಡುವೆ ಗುಂಡಿ ತೆಗೆಯಲಾಗಿತ್ತು. ಪೈಪ್‌ಗ್ಳನ್ನು ಅಳವಡಿಸಿ ಗುಂಡಿ ಮುಚ್ಚಿದ ಬಳಿಕ ಆ ಸ್ಥಳವನ್ನು ಸಮತಟ್ಟು ಮಾಡುವ ಗೋಜಿಗೆ ಜಲಮಂಡಳಿ ಹೋಗಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ತೊದರೆ ಅನುಭವಿಸುತ್ತಿದ್ದಾರೆ.

ಮೊದಲು ಉತ್ತಮವಾಗಿದ್ದ ರಸ್ತೆಯನ್ನು ಜಲಮಂಡಳಿ ಹಾಳು ಮಾಡಿದೆ. ಈಗ ಹದಗೆಟ್ಟ ರಸ್ತೆಯಲ್ಲಿ ಧೂಳು ವ್ಯಾಪಕವಾಗಿದೆ. ಅಲ್ಲದೆ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪಾಲಿಕೆ ಸದಸ್ಯರು ಮತ್ತು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಪಾಲಿಕೆ ಧಿಕಾರಿಗಳು, ಸ್ಥಳೀಯ ಕಾರ್ಪೊರೇಟರ್‌ ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿಗೆ ಗಮನಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next