Advertisement
ಸ್ಮಾರ್ಟ್ ನಗರಿಯಾಗಿರುವ ನಮ್ಮ ಮಂಗಳೂರಿನ ರಸ್ತೆ ಬದಿಗಳನ್ನು ಯಾಕೆ ಸುಂದರಗೊಳಿಸಬಾರದು. ರಸ್ತೆ ಬದಿಗಳನ್ನೂ ಪ್ರವಾಸಿಗರಿಗೆ, ಮಂಗಳೂರಿನಲ್ಲಿ ನಿತ್ಯವೂ ಸಂಚರಿಸುವ ಜನರಿಗೆ ಖುಷಿ ನೀಡುವಂತೆ ನಿರ್ಮಿಸಿದರೆ ಸ್ವಚ್ಛ, ಸುಂದರ ಮಂಗಳೂರು ನಮ್ಮದಾಗುವುದರಲ್ಲಿ ಸಂದೇಹವಿಲ್ಲ. ರಸ್ತೆ ಬದಿಗಳೆಂದರೆ ಯಾವುದಕ್ಕೂ ಉಪಯೋಗವಿಲ್ಲ ಎಂದು ಭಾವಿಸದೆ ಇವುಗಳ ಸೌಂದರ್ಯ ವೃದ್ಧಿಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬಹುದು. ವಿಸ್ತಾರವಾದ ಜಾಗ ಇರುವಲ್ಲಿ ಗಿಡ, ಮರಗಳನ್ನು ಬೆಳೆಸಬಹುದು. ಕಡಿಮೆ ಜಾಗವಿದ್ದರೆ ಕುರು ಚಲು ಗಿಡಗಳನ್ನು ಬೆಳೆಯಬಹುದು. ಅಲಲ್ಲಿ ಕುಳಿತುಕೊಳ್ಳಲು ಬೆಂಚುಗಳನ್ನು ಇಟ್ಟರೆ ನಡೆದುಕೊಂಡು ಹೋಗುವವರಿಗೆ, ವಾಕಿಂಗ್ ಹೋಗುವವರಿಗೆ ಅನುಕೂಲವಾಗುವುದು. ಒಂದು ವೇಳೆ ಜಾಗವೇಇಲ್ಲ ಎಂದಾದರೆ ಹತ್ತಿರದಲ್ಲಿ ಇರುವ ಗೋಡೆಗಳ ಮೇಲೆ ಚಿತ್ತಾರ ಬರೆದು ಸುಂದರಗೊಳಿಸಬಹುದು.