Advertisement

ರಸ್ತೆ ಪ್ರಜ್ಞೆ ಬೆಳೆಸಿಕೊಳ್ಳಿ: ಡಾ|ಮುರಳಿ ಮೋಹನ್‌ ಚೂಂತಾರು

12:35 AM Feb 09, 2019 | |

ಬದಿಯಡ್ಕ: ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ರಸ್ತೆ ನಿಯಮಗಳನ್ನು ಪಾಲಿಸಬೇಕು. ರಸ್ತೆಯಲ್ಲಿ ವಾಹನ ಚಲಾಯಿಸುತ್ತಿರುವಾಗ ರಸ್ತೆ ಸುರಕ್ಷಾ ನಿಯಮಗಳನ್ನು ಪೊಲೀಸರ ಭಯಕ್ಕಾಗಿ ಬಳಸದೆ ಸ್ವಂತ ಸುರಕ್ಷತೆಯ ದೃಷ್ಟಿಯಿಂದ ಅನುಸರಿಸಬೇಕು ಎಂದು ದಕ್ಷಿಣ ಕನ್ನಡ ಗೃಹ ರಕ್ಷಕ ದಳದ ಕಮಾಂಡೆಂಟ್‌ ಡಾ| ಮುರಳಿ ಮೋಹನ್‌ ಚೂಂತಾರು ಹೇಳಿದರು. 

Advertisement

ಇತ್ತೀಚೆಗೆ ತಲಪಾಡಿ ಟೋಲ್‌ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ ಪಾಧಿಕಾರ ಮತ್ತು ನವಯುಗ ಕಂಪೆನಿ   ವತಿಯಿಂದ  ನಡೆದ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ರಸ್ತೆ ಸುರಕ್ಷಾ ಮತ್ತು ರಸ್ತೆ ಸಂಯಮ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ಯಾರೂ ನಮ್ಮನ್ನು ಗಮನಿಸದೆ ಇರುವಾಗ ನಮ್ಮ ನಡೆವಳಿಕೆಯೇ ನಮ್ಮ ಸಂಸ್ಕಾರವಾಗಿರುತ್ತದೆ. ಸುರಕ್ಷೆಯ ದೃಷ್ಟಿಯಿಂದ ರಸ್ತೆ ನಿಯಮಗಳನ್ನು ಪಾಲಿಸಿ ತಮ್ಮ ಹಾಗೂ ಇತರರ ಜೀವವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಮತ್ತು ಹೊಣೆಗಾರಿಕೆ ಎಲ್ಲಾ ವಾಹನ ಚಾಲಕರ ಮೇಲಿರುತ್ತದೆ ಎಂದು ನುಡಿದರು. ನವಯುಗ ಕಂಪೆನಿ ಪ್ರಾಜೆಕ್ಟ್ ಮ್ಯಾನೇಜರ್‌ ವಿಜಯ್‌ ಕುಮಾರ್‌, ರೆಸಿಡೆಂಟ್‌ ಇಂಜಿನಿಯರ್‌ ರಾಮಚಂದ್ರ ಹಾಗೂ ಬಾಲಚಂದ್ರ, ಭಾನುಪ್ರಕಾಶ್‌, ಅಸಿಸ್ಟೆಂಟ್‌ ಇನ್‌ಸ್ಪೆಕ್ಟರ್‌ ಬಾಲಕೃಷ್ಣ, ಸಿಸ್ಟರ್‌ ಮೇರಿ ಪಿಂಟೊ, ಗ್ರಾ.ಪಂ ಸದಸ್ಯರಾದ ವೈಭವ್‌ ಶೆಟ್ಟಿ, ಗೀತಾ ಮೊದಲಾದವರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next