Advertisement

ರಸ್ತೆ ಸುರಕ್ಷತಾ ಮಾಹಿತಿ

12:45 AM Feb 23, 2019 | Team Udayavani |

ಕುಂದಾಪುರ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಹಾಗೂ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ನಡೆದ ಸ್ಕೌಟ್ಸ್‌, ಗೈಡ್ಸ್‌ ಮತ್ತು ಕಬ್ಸ್ ಬುಲ್‌ಬುಲ್‌ ಮಕ್ಕಳ ಹಬ್ಬದಲ್ಲಿ ರಸ್ತೆ ಸುರಕ್ಷತಾ ಮಾಹಿತಿ ನೀಡಲಾಯಿತು. 

Advertisement

ಇಲ್ಲಿನ ಸಂಚಾರಿ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಪುಷ್ಪಾ ಮಾತನಾಡಿ, ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಕಡ್ಡಾಯ
ವಾಗಿ ಪಾಲಿಸಿ ಅಪಘಾತಗಳನ್ನು ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು. 

ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರಮೇಶ ಅಡಿಗ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪ್ರಮೀಳಾ  ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next