Advertisement
ರಸ್ತೆ ದುರಸ್ತಿಗಾಗಿ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಲಾಗಿದ್ದು, ಕೆಲಸ ಪ್ರಾರಂಭವಾಗಿದೆ. ಕೆಸರಿನಲ್ಲಿ ಹೂತು ನಡೆಯಲು ಸಾಧ್ಯವಾಗದ ರಸ್ತೆಯನ್ನು 25 ಸಾವಿರ ರೂ. ವೆಚ್ಚದಲ್ಲಿ ಕಲ್ಲುಗಳನ್ನು ಜೋಡಿಸಿ ಸರಿಪಡಿಸಲಾಗುತ್ತಿದೆ.ಬಿಂದಾನಗರದ 5ನೇ ಓಣಿರಸ್ತೆ ಪ್ರಾರಂಭದಿಂದ ಅಂದಾಜು 150-200 ಮೀ. ರಸ್ತೆ ಸಂಪೂರ್ಣ ಹದೆಗಟ್ಟಿದ್ದು ಸಂಚರಿಸಲು ತೊಂದರೆಯಾಗುತ್ತಿದೆ. 12 ಮನೆಗಳಿರುವ ಈ ರಸ್ತೆಯಲ್ಲಿ ದಿನ ನಿತ್ಯದ ಓಡಾಟ ಬಹಳ ಕಷ್ಟವಾಗಿತ್ತು.
ಈಗಾಗಲೇ ಪಾದಚಾರಿಗಳು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇದರ ಬಗ್ಗೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದರೂ ಏನು ಪ್ರಯೋಜನವಾಗಲಿಲ್ಲ. ಹಿಂದೆ ಆಡಳಿತದಲ್ಲಿ ಇದ್ದ ಅಧಿಕಾರಿಗಳು ಬಂದು ನೋಡಿದ್ದರು. ಇತ್ತೀಚೆಗೆ ಪುರಸಭೆಯ ಮುಖ್ಯಾಧಿಕಾರಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಸದ್ಯ ನೀವೇ ಏನಾದರೂ ಮಾಡಿ ಎಂದಿದ್ದಾರೆ. ನಾವೇ ಕೆಲಸ ಮಾಡಿಸುವುದಾದರೆ ತೆರಿಗೆ ಏನಕ್ಕೆ ಕಟ್ಟಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಡೆದಾಡಲೂ ಸಾಧ್ಯವಿಲ್ಲ
ಮಳೆಗಾಲ ಬಂದಾಗ ಪ್ರತೀ ಬಾರಿ ಈ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಿಲ್ಲ. ಈ ಬಾರಿಯೂ ಸಮಸ್ಯೆ ಉಂಟಾಗಿದೆ. ಸಂಬಂಧಿಸಿದವರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವೇ ಸ್ಥಳೀಯರು ಸೇರಿ ಸ್ವಂತ ಖರ್ಚಿನಲ್ಲಿ ರಸ್ತೆ ಸರಿಪಡಿಲು ಮುಂದಾಗಿದ್ದೇವೆ.
– ಶರೀಟಾ ನೊರೋನ್ಹಾ, ಸ್ಥಳೀಯರು