Advertisement

ಕೇದಿಗೆ ಹಿ.ಪ್ರಾ. ಶಾಲೆ: ಶ್ರಮದಾನದಿಂದ ರಸ್ತೆ ದುರಸ್ತಿ 

01:02 PM Aug 01, 2018 | |

ಪುಂಜಾಲಕಟ್ಟೆ: ನಾವೂರು ಗ್ರಾ.ಪಂ. ವ್ಯಾಪ್ತಿಯ ದೇವಸ್ಯ ಪಡೂರು ಗ್ರಾಮದ ಕೇದಿಗೆ ಸರಕಾರಿ ಹಿ.ಪ್ರಾ. ಶಾಲೆಗೆ ತೆರಳುವ ರಸ್ತೆ ಸಮರ್ಪಕವಾಗಿಲ್ಲದೆ ಸಂಚಾರಕ್ಕೆ ತೊಡಕನ್ನುಂಟು ಮಾಡಿದ್ದು, ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.

Advertisement

ಸುಮಾರು ನೂರು ವರ್ಷ ಇತಿಹಾಸ ಇರುವ ಈ ಶಾಲೆಗೆ ಪರಿಸರದ ಕೇದಿಗೆ ಬೈಲು, ಪರಿಯಾರ್‌ ದೋಟ, ಮಾಂಗಾಜೆ, ಮರೈದೊಟ್ಟು ಪ್ರದೇಶದ ವಿದ್ಯಾರ್ಥಿಗಳು ಹೋಗುತ್ತಿದ್ದು, ರಸ್ತೆ ಸರಿಯಾಗಿಲ್ಲದ ಕಾರಣ ನಡೆದಾಡಲು ಕಷ್ಟಕರವಾಗುತ್ತಿದ್ದುದನ್ನು ಕಂಡು ಕಳೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದರು.

ಗ್ರಾಮಸಭೆಯ ಲೆಕ್ಕಪತ್ರದಲ್ಲಿ ಕೇದಿಗೆ ಪಾಣಂತಬೈಲು, ಬಾರಂತಬೈಲು ರಸ್ತೆ ಬದಿ ಸ್ವಚ್ಛತೆಗೆ 49 ಸಾವಿರ ರೂ. ಖರ್ಚು ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ರಸ್ತೆ ಬದಿಯ ಪೊದೆ ತೆಗೆಯದೆ ಹಾಗೂ ರಸ್ತೆ ದುರಸ್ತಿಗೊಳಿಸದೆ ಸುಮಾರು 4 ವರ್ಷಗಳೇ ಆಗಿವೆ. ಆದರೆ ಈವರೆಗೆ ಪಂ. ಈ ರಸ್ತೆಯ ಬಗ್ಗೆ ಯಾವುದೇ ಅನುದಾನ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸ್ಥಳೀಯ ಯುವಕರು ಸೇರಿ ನಮ್ಮ ಶಾಲೆ ನಮ್ಮ ರಸ್ತೆ ಎಂಬ ಧ್ಯೇಯದೊಂದಿಗೆ ರಸ್ತೆ ದುರಸ್ತಿಗೆ ಮುಂದಾಗಿದ್ದು, ಶ್ರಮದಾನದ ಮೂಲಕ ರಸ್ತೆ ಬದಿಯ ಪೊದೆಗಳನ್ನು ಹುಲ್ಲು ತೆಗೆಯುವ ಯಂತ್ರಗಳಿಂದ ಕಡಿದು ಮತ್ತು ರಸ್ತೆಗೆ ಬಿದ್ದ ಮಣ್ಣನ್ನು ಜೆ.ಸಿ.ಬಿ. ಯಂತ್ರದ ಮೂಲಕ ತೆಗೆದು ಸ್ವಚ್ಛಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next