Advertisement

ಜಂತ್ರ ರಸ್ತೆ ದುರಸ್ತಿ: ಅಪಾಯಕಾರಿ ರಸ್ತೆಗೆ ಮುಕ್ತಿ

11:53 PM Dec 11, 2022 | Team Udayavani |

ಬೆಳ್ಮಣ್‌: ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿದ್ದ ತಿರುವು ರಸ್ತೆಯಿಂದ ಕೂಡಿದ ಶಿರ್ವ-ಬೆಳ್ಮಣ್‌ ರಸ್ತೆ ಜಂತ್ರ ಬಳಿ ವಿಸ್ತರಣೆ ಜತೆ ದುರಸ್ತಿಯಾಗುತ್ತಿದ್ದು ಕೊನೆಗೂ ಲೋಕೋಪಯೋಗಿ ಇಲಾಖೆ ಸಮಸ್ಯೆಗೆ ಮುಕ್ತಿ ನೀಡಿದೆ.

Advertisement

ಬೆಳ್ಮಣ್‌ನಿಂದ ಶಿರ್ವ ಸಾಗುವ ರಸ್ತೆ ಅಲ್ಲಲ್ಲಿ ತಿರುವಿನಿಂದ ಕೂಡಿದ್ದು ಜಂತ್ರ ಪರಿಸರದಲ್ಲಿ ತಿರುವಿನ ಜತೆಯಲ್ಲಿ ಇಳಿಜಾರಿನಿಂದ ಕೂಡಿದ ರಸ್ತೆಯಾಗಿತ್ತು. ಉದಯವಾಣಿ ನಿರಂತರವಾಗಿ ಜನಪರ ಕಾಳಜಿ ವಿಭಾಗದಲ್ಲಿ ವರದಿ ಪ್ರಕಟಿಸಿತ್ತು. ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 3.25 ಕೊ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇಳಿಜಾರಿನಿಂದ ಕೂಡ ರಸ್ತೆಯನ್ನು ಸಂಪೂರ್ಣ ಅಗೆದು ಸಮತಟ್ಟು ಮಾಡುವ ಕಾಮಗಾರಿ ನಡೆದು ಇಳಿಜಾರಿನ ಜತೆ ತಿರುವನ್ನು ತಪ್ಪಿಸಿ ಅಪಘಾತಗಳ ಸಂಖ್ಯೆಯನ್ನು ತಡೆಯುವ ಉದ್ದೇಶದಿಂದ ನೇರವಾದ ರಸ್ತೆ ನಿರ್ಮಿಸಲು ರೂಪುರೇಖೆ ನಡೆದು ಕಾಮಗಾರಿ ಭರದಿಂದ ನಡೆಯುತ್ತಿದೆ.

ಅಪಘಾತಗಳ ತಾಣ
ಶಿರ್ವದಿಂದ ಬೆಳ್ಮಣ್‌ಗೆ ಸಾಗುವ ವೇಳೆ ರಸ್ತೆಯ ತಿರುವು ಹಾಗೂ ಇಳಿಜಾರಿನಿಂದ ಕೂಡಿದ್ದು ಬರುವ ವಾಹನಗಳು ಅತೀ ವೇಗವಾಗಿ ಬಂದು ಬೆಳ್ಮಣ್‌ ಕಡೆಯಿಂದ ಮೇಲೇರಿ ಹೋಗುವ ವಾಹನಗಳ ಗಮನಕ್ಕೆ ಬಾರದೇ ಭಾರೀ ಪ್ರಮಾಣದಲ್ಲಿ ಅಪಘಾತಗಳು ನಡೆದಿದ್ದು ಜೀವಹಾನಿಯ ಜತೆ ಮಾರಣಾಂತಿಕ ಗಾಯಗಳಾದ ಪ್ರಕರಣ ನಡೆಯುತ್ತಿತ್ತು. ಹಲವು ವರ್ಷಗಳ ಹಿಂದೆ ಬಸ್ಸೊಂದು ಅಪಘಾತಕೀಡಾಗಿ ಹಲವರು ಗಾಯಗೊಂಡಿದ್ದರು. ಬೆ„ಕಿನಲ್ಲಿದ್ದ ಪೊಲೀಸ್‌ ಪೇದೆಯೊಬ್ಬರ ಸಹೋದರ ಕಾರು ಆಪಘಾತಕೀಡಾಗಿ ಸ್ಥಳದಲ್ಲೇ ಮƒತ ಪಟ್ಟ ಘಟನೆಯೂ ಇದೇ ಜಾಗದಲ್ಲಿ ನಡೆದಿತ್ತು.

2019ರ ಫೆಬ್ರವರಿ 23ರಂದು ನಡೆದ ಖಾಸಗಿ ಬಸ್ಸು ಹಾಗೂ ಟಿಪ್ಪರ್‌ ಮುಖಾಮುಖೀಯಾಗಿ ಢಿಕ್ಕಿ ಹೊಡೆದು ಯುವತಿಯೊಬ್ಬಳು ಸ್ಥಳದಲ್ಲೆ ಮƒತ ಪಟ್ಟಿದ್ದು, ಸಂಕಲಕರಿಯದ ಎರಡು ಪುಟ್ಟ ಮಗುವೊಂದು ತಾಯಿಯ ಸಮೇತ ಗಂಭೀರವಾಗಿ ಗಾಯಗೊಂಡಿದ್ದರು. ಹಲವರನ್ನು ಆಸ್ಪತ್ರೆಗೆ ಸೇರಿ ಗುಣಮುಖರಾದ ಘಟನೆ ನಡೆದಿತ್ತು. ಅಪಘಾತದಲ್ಲಿ ಬಸ್‌ ಚಾಲಕ ರವಿ ಎಂಬವರು ಕಾಲು ಕಳೆದುಕೊಂಡು ಹಾಸಿಗೆ ಹಿಡಿಯುವಂತಾಗಿತ್ತು. 2019ರ ಮೇ 28ರಂದು ನಡೆದ ಬೆ„ಕುಗಳೆರಡರ ಮುಖಾಮುಖೀ ಢಿಕ್ಕಿಯಲ್ಲಿ ಬೆ„ಕ್‌ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಸ್ಸಿನಡಿಗೆ ಬಿದ್ದು ಪಳ್ಳಿ ಅಡಪಾಡಿ ನಿವಾಸಿಯೊಬ್ಬರು ಸ್ಥಳದಲ್ಲೇ ಮƒತರಾಗಿದ್ದರು. ಬೆ„ಕ್‌ಗಳ ಅಪಘಾತ, ಟಿಪ್ಪರ್‌ ಬಸ್ಸು ಢಿಕ್ಕಿ ಹೀಗೆ ನಿರಂತರ ಭೀಕರ ಅಪಘಾತಗಳು ಜಂತ್ರ ರಸ್ತೆಯಲ್ಲಿ ನಡೆದಿತ್ತು.

ಸುದಿನ ವರದಿ
ಜಂತ್ರ ರಸ್ತೆಯಲ್ಲಿ ನಿರಂತರ ಅಪಘಾತವನ್ನು ತಪ್ಪಿಸಲು ರಸ್ತೆಯ ತಿರುವು ಸರಿಪಡಿಸಬೇಕಾಗಿದ್ದು ರಸ್ತೆಯ ಕಾಮಗಾರಿ ನಡೆದು ಸುಂದರವಾದ ಹಾಗೂ ನೇರವಾಗಿರುವ ವಾಹನ ಸವಾರರಿಗೆ ಯೋಗ್ಯವಾದ ರಸ್ತೆಯ ನಿರ್ಮಾಣವಾಗಬೇಕು. ಅಪಘಾತಗಳ ಸಂಖ್ಯೆಯನ್ನು ತಪ್ಪಿಸಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉದಯವಾಣಿ ಸುದಿನ ನಿರಂತರವಾಗಿ ವರದಿ ಪ್ರಕಟಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಚಿವ ವಿ.ಸುನಿಲ್‌ ಕುಮಾರ್‌ ಅವರ ವಿಶೇಷ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಇದೀಗ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಇದೀಗ ರಸ್ತೆಯು ಸುಮಾರು ಶೇ. 80 ತಿರುವು ಮುಕ್ತವಾಗಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ಯೋಗ್ಯವಾಗುವಂತಿದೆ. ಇಳಿಜಾರಿನ ಜತೆಯಲ್ಲಿ ತಿರುವುನ್ನು ಸಂಪೂರ್ಣ ಅಗೆದು ಸಮತಟ್ಟು ಮಾಡಲಾಗಿದೆ.

Advertisement

ಅಗತ್ಯ ಕಾಮಗಾರಿಯೊಂದು ನಡೆಯುತ್ತಿದೆ. ಎಚ್ಚರಿಸಿದ ಉದಯವಾಣಿಗೆ ಅಭಿನಂದನೆಗಳು.
-ರಘುನಾಥ ನಾಯಕ್‌ ಪುನಾರು, ಗ್ರಾಮಸ್ಥರು

ಅಪಾಯಕಾರಿಯಾದ ರಸ್ತೆ ಯನ್ನು ಸರಿಪಡಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ.
-ಸತೀಶ್‌ ಪಿಲಾರ್‌, ರಿಕ್ಷಾ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next