Advertisement

ಜನಾಕ್ರೋಶಕ್ಕೆ ರಸ್ತೆ ಸಂಚಾರ ಮತ್ತೆ ಶುರು

05:17 PM Jun 13, 2021 | Team Udayavani |

ಕಾಗವಾಡ: ತಾಲೂಕಿನಲ್ಲಿ ಶನಿವಾರ ಉಗಾರ ಖುರ್ದ ಮತ್ತು ಉಗಾರ ಬುದ್ರುಕ ಪಟ್ಟಣಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ಜಿಲ್ಲಾ ಧಿಕಾರಿಗಳ ಆದೇಶ ಮೇರೆಗೆ ಶನಿವಾರ ಉಗಾರ-ಐನಾಪುರ ಮತ್ತು ಉಗಾರ-ಕುಡಚಿ ರಸ್ತೆ ಸಂಚಾರ ಕಡಿತಗೊಳಿಸಿದ್ದರು. ಆದರೆ, ಆಕಸ್ಮಿಕವಾಗಿ ಸಂಚಾರ ಕಡಿತಗೊಳಿಸಿದ್ದರಿಂದ ಜನಾಕ್ರೋಶ ಮೇರೆಗೆ ಕಾಗವಾಡ ತಹಶೀಲ್ದಾರ್‌ ಪ್ರಮೀಳಾ ದೇಶಪಾಂಡೆ ಮತ್ತೆ ಸಂಜೆ ರಸ್ತೆ ಸಂಚಾರ ಪ್ರಾರಂಭಿಸಿದ್ದಾರೆ.

Advertisement

ಶನಿವಾರ ಉಗಾರ ಖುರ್ದ ಪಟ್ಟಣದಲ್ಲಿ ಒಂದೇ ದಿನ 10 ಸೋಂಕಿತರು ಪತ್ತೆಯಾಗಿದ್ದರಿಂದ ಜಿಲ್ಲಾ  ಧಿಕಾರಿಗಳ ಆದೇಶ ಮೇರಿಗೆ ಕೊರೊನಾ ನಿಯಂತ್ರಣಕ್ಕೆ ಉಗಾರ-ಐನಾಪುರ ಮತ್ತು ಉಗಾರ-ಕುಡಚಿ ಮಧ್ಯದ ಎರಡು ರಸ್ತೆಗಳ ಮೇಲೆ ಕಲ್ಲು-ಮಣ್ಣು ಹಾಕಿ ಸಂಚಾರ ಕಡಿತಗೊಳಿಸಲಾಗಿತ್ತು. ಆಕಸ್ಮಿಕವಾಗಿ ಒಮ್ಮೆಲೇ ಸಂಚಾರ ಸ್ಥಗಿತಗೊಳಿಸಿದ್ದರಿಂದ ಕಾಗವಾಡದಿಂದ ಉಗಾರ ಮಾರ್ಗವಾಗಿ ಜಮಖಂಡಿ, ಕುಡಚಿ, ರಾಯಬಾಗ ಹಾಗೂ ಅಥಣಿ, ಐನಾಪುರ ಗ್ರಾಮಗಳಿಗೆ ಸಂಚಾರಿಸುವ ಎಲ್ಲ ವಾಹನಗಳು ಸಾಲುಗಟ್ಟಿ ನಿಂತವು. ಅನೇಕ ಪ್ರಯಾಣಿಕರು ಆಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ಸಚಿವ ಶ್ರೀಮಂತ ಪಾಟೀಲ ಅವರಿಗೆ ಮಾಹಿತಿ ತಲುಪಿ ಅವರು ಅಧಿಕಾರಿಗಳ್ಳೋಂದಿಗೆ ಚರ್ಚಿಸಿದರು. ಜನರಿಗೆ ತೊಂದರೆಯಾಗುವಂತೆ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ಕೊರೊನಾ ಸೋಂಕಿತರು ಪತ್ತೆಯಾದ ಓಣಿಗಳಲ್ಲಿ ಬ್ಯಾರಿಕೇಡ್‌ ಹಾಕಿರಿ. ಮುಖ್ಯ ರಸ್ತೆ ಬಂದ್‌ ಮಾಡಬೇಡಿ ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಸಂಚಾರ ಆರಂಭಿಸಲಾಯಿತು. ಉಗಾರ ಪುರಸಭೆ ಅಧ್ಯಕ್ಷ ಮಂಜುನಾಥ ತೇರದಾಳೆ ಮಾಹಿತಿ ನೀಡುವಾಗ, ಉಗಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ಜಿಲ್ಲಾ ಧಿಕಾರಿಗಳ ಆದೇಶ ಮೇರೆಗೆ ತಹಶೀಲ್ದಾರ್‌ ಮತ್ತು ಉಗಾರ ಪುರಸಭೆ ವತಿಯಿಂದ ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next