Advertisement
ಹೆದ್ದಾರಿ ಅಭಿವೃದ್ಧಿ: ಮೈಸೂರು – ಬೆಂಗಳೂರು ಹೆದ್ದಾರಿ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಈ ನಗರಗಳ ನಡುವೆ ದಶಪಥದ ರಸ್ತೆ ನಿರ್ಮಾಣ ಮಾಡುವ 7 ಸಾವಿರ ಕೋಟಿ ಮೊತ್ತದ ಯೋಜನೆ ಯನ್ನು 2018ರ ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಘೋಷಿಸಿದ್ದರು. ಈ ಯೋಜನೆಯ ಶಿಲಾನ್ಯಾಸವಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ. ನಗರದ ವರ್ತುಲ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 44 ಕೋಟಿ ಅನುದಾನ ನೀಡಿದೆ. ಮೈಸೂರು ನಗರದ ಸುತ್ತಲಿನ 42 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆಯ ಬದಿಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿ, 6 ಸಾವಿರ ಹೆಬ್ಬೇವು, 8 ಸಾವಿರ ಹಣ್ಣಿನ ಗಿಡಗಳನ್ನು ನೆಡಲಾಗಿದೆ.
Related Articles
Advertisement
ಕೊಡಗಿಗೆ ರೈಲು: ರೈಲು ಸಂಪರ್ಕವಿಲ್ಲದ ಏಕೈಕ ಜಿಲ್ಲೆ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಸಾಗಣೆಯ ಅನುಕೂಲಕ್ಕಾಗಿ 667 ಕೋಟಿ ರೂ. ಮೊತ್ತದ ಮೈಸೂರು-ಕುಶಾಲನಗರ (ಪಿರಿಯಾ ಪಟ್ಟಣದ ಕೊಪ್ಪ) ನಡುವೆ ನೂತನ ರೈಲು ಮಾರ್ಗ ಮಂಜೂರಾಗಿದೆ. ಕೇಂದ್ರ ರಸ್ತೆ ನಿಧಿಯಡಿ ಕೊಡಗಿನ ಎರಡು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ 34 ಕೋಟಿ ಮಂಜೂರಾಗಿದೆ.
ವಿಮಾನಯಾನ: ಗಣ್ಯರ ವಿಮಾನಗಳ ಹಾರಾಟ ಕ್ಕಷ್ಟೇ ಸೀಮಿತವಾಗಿದ್ದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಒತ್ತು ನೀಡಿದ್ದು, ಉಡಾನ್ ಯೋಜನೆಯಡಿ ಮೈಸೂರು- ಚೆನ್ನೈ ನಡುವೆ ವರ್ಷದ ಹಿಂದೆ ವಿಮಾನಯಾನ ಆರಂಭವಾಗಿದ್ದು, ಸದ್ಯದಲ್ಲೇ ಇನ್ನೂ ಆರು ನಗರಗಳಿಗೆ ವಿಮಾನ ಯಾನ ಆರಂಭವಾಗಲಿದೆ.
ಪಾಸ್‌ಪೋರ್ಟ್ ಸೇವಾ ಕೇಂದ್ರ: ದೇಶ ದಲ್ಲಿಯೇ ಮೊಟ್ಟ ಮೊದಲು ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗಿದ್ದು, ಮೈಸೂರಿನಲ್ಲಿ. ನಗರದ ಕೆಆರ್‌ಎಸ್ ರಸ್ತೆಯಲ್ಲಿ ರುವ ಮೇಟಗಳ್ಳಿಯ ಅಂಚೆಕಚೇರಿಯಲ್ಲಿ ಕಾರ್ಯಾರಂಭ ಮಾಡಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಈವರೆಗೆ 4 ಸಾವಿರ ಜನರು ಪಾಸ್‌ಪೋರ್ಟ್ ಮಾಡಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣ: ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಮೈಸೂರಿನ ಮೊದಲ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣಕ್ಕೆ ಅಮೃತ್ ಯೋಜನೆಯಡಿ 19 ಕೋಟಿ ರೂ. ನೀಡಲಾಗಿದೆ.
•ಘನತ್ಯಾಜ್ಯ ಸಂಗ್ರಹಣಾ ಘಟಕ: ಮೈಸೂರು ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವಿದ್ಯಾರಣ್ಯನಲ್ಲಿ ಒಂದೇ ಕಡೆ ವಿಲೇವಾರಿ ಮಾಡು ತ್ತಿದ್ದರಿಂದ ಉಂಟಾಗಿದ್ದ ಸಮಸ್ಯೆ ನಿವಾರಿಸಲು ಕೆಸರೆ ಮತ್ತು ರಾಯನಕೆರೆಗಳಲ್ಲಿ ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಸ್ವಚ್ಛ ಭಾರತ್ ಮಿಷನ್‌ನಡಿ 53.7 ಕೋಟಿ ಮಂಜೂರಾಗಿದೆ. ನಗರದ ಲಿಂಗಾಂಬುಧಿ ಕೆರೆಯನ್ನು 1.4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಮೈಸೂರು ನಗರದ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ವಿಜಯನಗರ ಮೊದಲ ಹಂತದಲ್ಲಿ 29 ಕೋಟಿ ವೆಚ್ಚದಲ್ಲಿ 3 ಕೋಟಿ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಬೃಹತ್ ಟ್ಯಾಂಕ್ ನಿರ್ಮಾಣ. ಮೈಸೂರು ಜಿಲ್ಲಾಧಿಕಾರಿಗಳ ನೂತನ ಕಚೇರಿ ನಿರ್ಮಾಣಕ್ಕೆ ಸಿದ್ಧಾರ್ಥ ನಗರ ಬಡಾವಣೆಯಲ್ಲಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಜರ್ಮನ್ ಪ್ರಸ್ ಆವರಣದಲ್ಲಿ 15 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ಬಿಟ್ಟುಕೊಟ್ಟಿದೆ.
ಕೆಆರ್‌ಎಸ್ ರಸ್ತೆಯಲ್ಲಿ 9 ಕೋಟಿ ವೆಚ್ಚದಲ್ಲಿ ಕಾರ್ಮಿಕರ ವಿಮಾ ಆಸ್ಪತ್ರೆ, 35 ಭಾರತೀಯ ಜನೌಷಧಿ ಕೇಂದ್ರಗಳ ಸ್ಥಾಪನೆ, ಮೈಸೂರು ನಗರದಲ್ಲಿ 25 ಕೋಟಿ ವೆಚ್ಚದಲ್ಲಿ ಎಸ್‌ಟಿಪಿಐ ಕೇಂದ್ರ ಆರಂಭ ಮಾಡಲಾಗಿದೆ.
ತಂಬಾಕು ರೈತರಿಗೆ ಅನುಕೂಲ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕುಗಳ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆಗಾರರ ಅನುಕೂಲಕ್ಕಾಗಿ ಎಸ್‌ಒಪಿ ರಸಗೊಬ್ಬರವನ್ನು ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲಾಗಿದೆ.