Advertisement

ಹಟ್ಟಿಯಂಗಡಿ-ಜಾಡಿ: ಸುಗಮ ವಾಹನ ಸಂಚಾರಕ್ಕೆ ಅಡ್ಡಿ

08:02 PM Nov 27, 2021 | Team Udayavani |

ವಂಡ್ಸೆ: ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಶಿಫಾರಸಿನಂತೆ ಹಟ್ಟಿಯಂಗಡಿ-ಜಾಡಿ ರಸ್ತೆ 4 ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ವಿಸ್ತರಣೆಗೊಂಡು ಡಾಮರು ಕಾಮಗಾರಿ ಆಗಿದ್ದರೂ ನಡುವಿನ ಅಂತರದ ಒಂದಿಷ್ಟು ರಸ್ತೆ ವ್ಯಾಪ್ತಿ ಪೂರ್ಣಗೊಳ್ಳದಿರುವುದು ವಾಹನ ಚಾಲಕರಿಗೆ ಕಿರಿ-ಕಿರಿ ಉಂಟುಮಾಡಿದೆ.

Advertisement

ಕೊಲ್ಲೂರು ಕ್ಷೇತ್ರಕ್ಕೆ ಸನಿಹದ ಮಾರ್ಗ
ರಾ. ಹೆದ್ದಾರಿ ತಲ್ಲೂರಿನಿಂದ ಸುಮಾರು 2 ಕಿ.ಮೀ. ದೂರ ವ್ಯಾಪ್ತಿ ಸಾಗಿದರೆ ಹಟ್ಟಿಯಂಗಡಿ ಕ್ರಾಸ್‌ನಿಂದ ಜಾಡಿ ಮಾರ್ಗವಾಗಿ ಕೊಲ್ಲೂರಿಗೆ ಸಾಗಲು ಸುಮಾರು 4 ಕಿ.ಮೀ. ಸನಿಹದ ಮಾರ್ಗ ವಾಗಿದೆ. ಶಾಸಕರ ಶಿಫಾರಸಿನ ಮೇರೆಗೆ ಇದು ಸಂಪೂರ್ಣ ಡಾಮರುಗೊಂಡಿದೆ.

ಅವೈಜ್ಞಾನಿಕವಾಗಿ ನಿರ್ಮಾಣ
ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿ ಸಲಾದ ಅಪಘಾತ ಆಹ್ವಾನಿಸುವ ಕಿರುಸೇತುವೆ ಸಹಿತ ಅದರ ಸನಿಹದ 500 ಮೀ. ಉದ್ದದ ರಸ್ತೆ ದುರಸ್ತಿಯಾಗದೆ ಹೊಂಡದಿಂದ ಕೂಡಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಮಾರ್ಗವಾಗಿ ಸಾಗುವ ಘನ , ಲಘು ವಾಹನವಲ್ಲದೇ ದ್ವಿಚಕ್ರ ವಾಹನದವರು, ಸ್ಥಳೀಯರು ರಸ್ತೆ ದುಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಸರಕಾರ: ಭವಿಷ್ಯ ನುಡಿದ ಅಠಾವಳೆ

ಟೆಂಡರ್‌ ವಿಳಂಬ
ಕಿರುಸೇತುವೆ ತೆರವುಗೊಳಿಸಿ ನೂತನ ಸೇತುವೆಯೊಡನೆ ಮಿಕ್ಕುಳಿದ ರಸ್ತೆ ಮಾರ್ಗ ಪೂರ್ಣಗೊಳಿಸಲು ಶಾಸಕರ ಶಿಫಾರಸಿ ನಂತೆ ಇಲಾಖೆ ಮೂಲಕ ಸರಕಾರಕ್ಕೆ ಮಾಹಿತಿ ನೀಡಲಾಗಿದ್ದರೂ ಈವರೆಗೆ ಟೆಂಡರ್‌ ಕರೆಯದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಕೊಲ್ಲೂರು, ಹಟ್ಟಿಯಂಗಡಿ ದೇಗುಲಕ್ಕೆ ಈ ಮಾರ್ಗವಾಗಿ ಯಾತ್ರಾರ್ಥಿಗಳು ಹರಸಾಹಸಪಟ್ಟು ಸಾಗಬೇಕಾದ ಪರಿಸ್ಥಿತಿ ಇದೆ. ರಾತ್ರಿ ಸಂಚಾರವಂತೂ ಹೇಳತೀರದು.

Advertisement

ಶೀಘ್ರ ಕಾಮಗಾರಿ ಪೂರ್ಣ
ಹಟ್ಟಿಯಂಗಡಿ ಕ್ರಾಸ್‌ನಿಂದ ಸಾಗುವ ಜಾಡಿ ಮಾರ್ಗದ ಮಧ್ಯದಲ್ಲಿರುವ ಸೇತುವೆ ನಿರ್ಮಾಣ ಹಾಗೂ ಮಿಕ್ಕುRಳಿದ ರಸ್ತೆಯ ಡಾಮರಿಗೆ ಇಲಾಖೆಗೆ ಸೂಚಿಸಲಾಗಿದೆ. ಅತಿ ಶೀಘ್ರದಲ್ಲೇ ಕಾಮಗಾರಿ ಪೂರ್ಣ ಗೊಳಿಸಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ,
ಶಾಸಕರು, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next