Advertisement
ಡಾಮರಿಲ್ಲಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ರಸ್ತೆ ಸುಮಾರು 3 ಕಿಮೀ. ಇದ್ದು ಎಂಟು ವರ್ಷಗಳ ಹಿಂದೆ ಮರು ಡಾಮರು ಭಾಗ್ಯ ಕಂಡಿದೆ. ಅದರ ನಂತರ ಈ ಕಡೆಗೆ ಡಾಮರೀಕರಣಕ್ಕೆ ಅನುದಾನ ಮಂಜೂರಾಗಿಲ್ಲ. ಹಾಕಿದ ಡಾಮರು ಅಲ್ಲಲ್ಲಿ ಕಿತ್ತು ಹೋಗಿದೆ. ರಸ್ತೆಯಲ್ಲಿ ಬಿದ್ದ ಹೊಂಡಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗಾಗಲೇ ಮಳೆಗಾಲ ಆರಂಭಗೊಂಡಿದ್ದು, ನೀರು ತುಂಬಿದ ಹೊಂಡಗಳಿಂದಾಗಿ ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೊಂಡಳ್ಳಿಯಲ್ಲಿ ಬಸ್ ನಿಲ್ದಾಣವಿದ್ದು ಬೈಲೂರಿಗೆ ರಸ್ತೆ ಮುಗಿಯುತ್ತದೆ. ನಂತರ ಹೊಳೆಯಿದೆ.
ಜನತಾ ಕಾಲನಿ, ಆಶ್ರಯ ಕಾಲನಿ, ನೂಜಿ, ನಾಯ್ಕರಬೆಟ್ಟು ಎಂದು ಈ ಭಾಗದಲ್ಲಿ ಪರಿಶಿಷ್ಟರ ಕಾಲನಿ ಮನೆಗಳಿವೆ. ಕಾಡುಪ್ರಾಣಿಗಳು ರಸ್ತೆ ದಾಟುವ ಕಾರಣ ಒಬ್ಬಿಬ್ಬರು ವಾಹನದಲ್ಲಿ ಓಡಾಡಲು ಭಯವಾಗುತ್ತದೆ. ಹಾಗಿರುವಾಗ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ದರೆ ಅನುಕೂಲ. ರಸ್ತೆ ಸಮಸ್ಯೆ ಸರಿ ಮಾಡದೇ ಇದ್ದರೆ ರಿಕ್ಷಾಗಳ ಚಾಲಕರು ಬಾಡಿಗೆಗೆ ಬರಲು ಒಪ್ಪುತ್ತಿಲ್ಲ. ಬಂದರೂ ಮರಳಿ ಹೋಗಲು ರಾತ್ರಿ ಸಂಚಾರ ಅವರಿಗೂ ಕಷ್ಟ. ಮಳೆಗಾಲ ಆರಂಭವಾದ ಹಿನ್ನೆಲೆ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದ್ದು, ರಿಕ್ಷಾ ಚಾಲಕರು ಇಲ್ಲಿಗೆ ಬರಲು ಒಪ್ಪುತ್ತಿಲ್ಲ. ಈ ಬಗ್ಗೆ ತುರ್ತು ಗಮನ ಹರಿಸುವ ಅಗತ್ಯವಿದೆ. ಬಾಡಿಗೆ ವಾಹನಗಳೇ ಗತಿ
ಈ ರಸ್ತೆ ನೂರಾರು ಮನೆಗಳು, ಶಾಲೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಇಲ್ಲಿ ಕೇವಲ 1 ಸರಕಾರಿ ಬಸ್ಸಿದೆ. ಕ್ರೋಢಬೈಲೂರಿನಲ್ಲಿ 8ನೇ ತರಗತಿವರೆಗೆ ಸರಕಾರಿ ಶಾಲೆ ಇದೆ. ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕು. ಕೊಂಡಳ್ಳಿಯಿಂದ 40 ರೂ., ಅಂಪಾರಿನಿಂದ 80 ರೂ., ಶಂಕರನಾರಾಯಣದಿಂದ 150 ರೂ. ರಿಕ್ಷಾ ಬಾಡಿಗೆ ಆಗುತ್ತದೆ. ಜನಸಾಮಾನ್ಯರಿಗೆ ಇದು ಹೊರೆಯಾಗಿದೆ. ಆದ್ದರಿಂದ ಸರಕಾರಿ ಬಸ್ಸಿನ ಓಡಾಟ ಹೆಚ್ಚಿಸಬೇಕೆಂಬ ಮನವಿ ಇದೆ.
Related Articles
ಸಂಜೆ ನಂತರ ಒಬ್ಬಿಬ್ಬರು ಓಡಾಡುವಂತಿಲ್ಲ. ರಿಕ್ಷಾಗಳು ಬಾಡಿಗೆ ತಂದರೆ ದೊಡ್ಡ ಮೊತ್ತದ ಬಾಡಿಗೆ ಪಾವತಿ ನಮಗೆ ಕಷ್ಟ . ಆದ್ದರಿಂದ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕ ಬಸ್ಸಿನ ಸಂಖ್ಯೆ ಹೆಚ್ಚಿಸಬೇಕು ಎನ್ನುವುದೇ ನಮ್ಮ ಬೇಡಿಕೆ.
– ಮುತ್ತ, ಸ್ಥಳೀಯ ನಿವಾಸಿ
Advertisement