ಕಲಾದಗಿ: ರೈಲ್ವೆ ಮಾರ್ಗದ ಅಂಡರ್ ಬ್ರಿಜ್ ರಸ್ತೆ ಮಾರ್ಗದ ರಸ್ತೆ ಕೆಸರಿನಲ್ಲಿ ಎತ್ತಿನ ಬಂಡಿ ಮಧ್ಯದಲ್ಲೇ ಎತ್ತು ಸಿಕ್ಕಿ ಹಾಕಿಕೊಂಡು ಎತ್ತಿನ ಕಾಲು(ಚಪ್ಪಿ) ಮುರಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬಾಗಲಕೋಟೆಯಿಂದ ಖಜ್ಜಿಡೋಣಿ ಯವರೆಗೂ ಮುಕ್ತಾಯಗೊಂಡ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗದ
ಕಾಮಗಾರಿಯಲ್ಲಿ ಖಜ್ಜಿಡೋಣಿ ರೈಲ್ವೆ ನಿಲ್ದಾಣ ಬಳಿ ಇರುವ ಅಂಡರ್ ಬ್ರಿಜ್‌ನಲ್ಲಿ ಬಂಡಿಯಲ್ಲಿ ರೈತ ರಮೇಶ ಹನಮಪ್ಪ ವಾಸನದ ತೆರಳುತ್ತಿದ್ದಾಗ ಘಟನೆ ನಡೆದಿದೆ.
ರೈಲ್ವೆ ಮಾರ್ಗ ಕಾಮಗಾರಿ ಅಧಿಕಾರಿ, ಗುತ್ತಿಗೆದಾರ ವಿರುದ್ಧ ರೈತ ರಂಗಪ್ಪ ವಾಸನದ, ತಿಮ್ಮಣ್ಣ ಬಟಕುರ್ಕಿ, ಸುಭಾಸ್ ಬಟಕುರ್ಕಿ, ಗಿರೀಶ ವಾಸನದ, ಶಂಕ್ರಪ್ಪ ವಾಸನದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತಿಭಟನೆಗೆ ನಿರ್ಧಾರ: ರೈಲ್ವೆ ಹಳಿ ಮಾರ್ಗದ ಕಾಮಗಾರಿಯಲ್ಲಿ ಮದ್ಯದಲ್ಲಿ ಅಲ್ಲಲ್ಲಿ ನಿರ್ಮಾಣವಾದ ಬ್ರಿಜ್ ಕೆಳಗಡೆ ರಸ್ತೆ ಸಂಚಾರ ಯೋಗ್ಯವಾಗುವಂತೆ ಮಾಡಲು ಆಗ್ರಹಿಸಿ ಖಜ್ಜಿಡೋಣಿ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ತಡೆದು ಪ್ರತಿಭಟಿಸುವುದಾಗಿ ಖಜ್ಜಿಡೋಣಿ ರೈತರು ತಿಳಿದ್ದಾರೆ.
ಇದನ್ನೂ ಓದಿ:ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಕೊಚ್ಚಿಯಲ್ಲಿ ಒಂದು ಮತ ಅಂತರದಿಂದ ಜಯ ಸಾಧಿಸಿದ ಬಿಜೆಪಿ