ಬೆಂಗಳೂರು: ನಗರದಲ್ಲಿ ನಡೆದ ಎರಡು ರಸ್ತೆ ಅಪಘಾತ ಪ್ರಕರಣಗಳಲ್ಲಿ 2 ವರ್ಷದ ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಬಾವಿಯ ಟೀಚರ್ಸ್ ಲೇಔಟ್ ನಿವಾಸಿ ಭವಾನಿಸಿಂಗ್ ಪುತ್ರಿ ಝಾನ್ಸಿ(2) ಮೃತ ಬಾಲಕಿ. ಈ ಸಂಬಂಧ ಪಶುವೈದ್ಯ ಉಪೇಂದ್ರ(64) ಎಂಬವರನ್ನು ಬಂಧಿಸಲಾಗಿದೆ.
ಡಿ.25ರಂದು ಸಂಜೆ ಝಾನ್ಸಿ, ತಾಯಿ ಹಾಗೂ ಚಿಕ್ಕಮ್ಮನ ಜತೆ ನಾಗರಬಾವಿ ವಿಲೇಜ್‌ನಲ್ಲಿರುವ ಅಂಗಡಿಗೆ ಹೋಗಿದ್ದರು. ಝಾನ್ಸಿ ಚಿಕ್ಕಮ್ಮನ ಜತೆ ಅಂಗಡಿಯೊಂದರ ಬಳಿ ನಿಂತಿದ್ದಳು. ಆಕೆ ತಾಯಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಜುವೆಲ್ಲರಿ ಶಾಪ್ ಕಡೆಯ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದರು. ಅದನ್ನು ಗಮನಿಸಿದ ಝಾನ್ಸಿ, ತಾಯಿ ಬಳಿ ಹೋಗಲು ಏಕಾಏಕಿ ರಸ್ತೆ ಮಧ್ಯೆ ಓಡಿ ಬಂದಿದ್ದಾಳೆ. ಇದೇ ವೇಳೆ ಯೂನಿವರ್ಸಿಟಿ ಕಡೆಯಿಂದ ನಾಗರಬಾವಿ ವಿಲೇಜ್ ಕಡೆ ಹೋಗಲು ಅತಿವೇಗವಾಗಿ ಬಂದ ಉಪೇಂದ್ರ ಕಾರನ್ನು ಬಲ ತಿರುವು ಪಡೆದಾಗ ಮಗುವಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಆಕೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾಳೆ ಎಂದು ತಿಳಿಸಿರುವುದಾಗಿ ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬ ಂಧ ಕಾರು ಚಾಲಕನನ್ನು ಬಂಧಿಸಲಾಗಿದೆ. ಬ್ಯಾಟರಾ ಯನಪುರ ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.