Advertisement

ನನೆಗುದಿಗೆ ಬಿದ್ದ ನಾಲ್ಕು ಪಥ ರಸ್ತೆ ಕಾಮಗಾರಿ

03:49 PM Mar 07, 2022 | Team Udayavani |

ಬಾಗೇಪಲ್ಲಿ: ಪಟ್ಟಣದಿಂದ ಚಿಂತಾಮಣಿ ಮಾರ್ಗವಾಗಿ ತಮಿಳುನಾಡಿನ ಹೊಸೂರು ನಗರಕ್ಕೆಸಂಪರ್ಕ ಕಲ್ಪಿಸುವ ನಾಲ್ಕು ಪಥದ ರಸ್ತೆ ಕಾಮಗಾರಿನನೆಗುದಿಗೆ ಬಿದ್ದಿದ್ದು, ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಸಂಚಾರ ದುಸ್ತರವಾಗಿದೆ. ಕೂಡಲೇ ಸಂಸದ ಬಿ.ಎನ್‌.ಬಚ್ಚೇಗೌಡ, ಸಚಿವ ಡಾ.ಕೆ.ಸುಧಾಕರ್‌ ಮಧ್ಯಪ್ರವೇಶ ಮಾಡಿ, ನಾಲ್ಕು ಪಥದ ರಸ್ತೆ ನಿರ್ಮಾಣ ಕಾರ್ಯ ಶೀಘ್ರಪೂರ್ಣಗೊಳಿಸಲು ತಾಲೂಕಿನ ಮಿಟ್ಟೇಮರಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Advertisement

ಈ ಏಕಪಥ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಮುಗª ವಾಹನ ಸವಾರರು ಅಪಘಾತಕ್ಕೆ ಸಿಲುಕುವಂತಾಗಿದೆ. ಆಂಧ್ರ,ಕರ್ನಾಟಕ ಹಾಗೂ ತಮಿಳುನಾಡು ಸಂಪರ್ಕಕೊಂಡಿಯಂತಿರುವ ಈ ರಸ್ತೆ ಅಂತಾರಾಜ್ಯ ರಸ್ತೆಯಾಗಿದೆ. ಈ ಹಿಂದೆ ನಾಲ್ಕು ಪಥ ರಸ್ತೆ ನಿರ್ಮಾಣ ಮಾಡಲು ಟೆಂಡರ್‌ ಕರೆದು ಟೋಲ್‌ ಪ್ಲಾಜಾನಿರ್ಮಾಣ ಮಾಡಲು ಪ್ರಸ್ತಾವನೆಯಲ್ಲಿಉದ್ದೇಶಿಸಲಾಗಿತ್ತು. ಆದರೆ, ಟೆಂಡರ್‌ನಲ್ಲಿಭಾಗವಹಿಸಲು ಯಾವ ಸಂಸ್ಥೆಯೂ ಮುಂದೆ ಬಾರದ ಕಾರಣ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಅಪಘಾತಗಳಿಗೆ ಕಾರಣ: ಆಂಧ್ರಪ್ರದೇಶದಿಂದಬಾಗೇಪಲ್ಲಿ ಮಾರ್ಗವಾಗಿ ಮಿಟ್ಟೇಮರಿ, ಸಾದಲಿ,ದಿಬ್ಬೂರಹಳ್ಳಿ ಚಿಂತಾಮಣಿ ಮೂಲಕ ತಮಿಳುನಾಡಿನಹೊಸೂರು ತಲುಪುವ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಬಸ್‌, ಟ್ರಕ್‌, ಲಾರಿ, ಕಾರು ಹಾಗೂದ್ವಿಚಕ್ರ, ಇತರೆ ವಾಹನಗಳು ಭಾರೀ ಸಂಖ್ಯೆಯಲ್ಲಿ ಸಂಚಾರ ಮಾಡುತ್ತವೆ. ಏಕಪಥದ ಈ ರಸ್ತೆಯಲ್ಲಿಡಾಂಬರು ಕಿತ್ತು ಹೋಗಿ ಹಳ್ಳ ಮತ್ತು ಗುಂಡಿಗಳು ಬಿದ್ದಿವೆ. ಇದು ಅಪಘಾತಗಳಿಗೆ ಕಾರಣವಾಗಿದೆ.

ಎಚ್ಚರ ತಪ್ಪಿದರೆ ಅಪಾಯ: ಯಲ್ಲಂಪಲ್ಲಿ, ಮಿಟ್ಟೇಮರಿ ಹಾಗೂ ಸಾದಲಿ ಬಳಿ ಕೆರೆಕಟ್ಟೆಗಳ ಮೇಲೆವಾಹನಗಳು ಹಾದು ಹೋಗಬೇಕಾಗಿದ್ದು, ಚಾಲಕರುಎಚ್ಚರ ತಪ್ಪಿದರೆ ಅಪಾಯ ಕಟ್ಟಟ್ಟ ಬುತ್ತಿ, ಈಗಾಗಲೇಹಲವು ಅಪಘಾತಗಳಲ್ಲಿ ವಾಹನ ಸವಾರರುಮೃತಪಟ್ಟಿದ್ದು, ಸಾವಿರಾರು ಸಂಖ್ಯೆಯ ಗಾಯಾಳುಗಳಾಗಿ ಆಸ್ಪತ್ರೆಗಳ ಪಾಲಾಗಿದ್ದಾರೆ.

ವಾಹನ ಸಂಚಾರಕ್ಕೆ ಕಿರಿಕಿರಿ: 20-30 ವರ್ಷಗಳಿಂದಲೂ ಈ ರಸ್ತೆಯನ್ನು ನಾಲ್ಕು ಪಥವಾಗಿ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.ಆದರೆ, ಜನಪ್ರತಿನಿ ಧಿಗಳ, ಅಧಿ ಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ಈ ರಸ್ತೆಯಲ್ಲಿ ನೂರಾರು ಹಳ್ಳಿಗಳ ಜನರು ಕೆಲಸಗಳನಿಮಿತ್ತ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆತೆರಳಲು ಬಾಗೇಪಲ್ಲಿ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಕಿರಿದಾದ ರಸ್ತೆಯಿಂದ ವಾಹನಗಳ ಸಂಚಾರಕ್ಕೆ ಕಿರಿಕಿರಿಯಾಗಿದೆ.

Advertisement

ಈ ರಸ್ತೆಗೆ ಟಾರ್‌ ಹಾಕಿ ಹಲವು ದಶಕ ಕಳೆದಿದ್ದು,ಪಿಡಬ್ಲ್ಯೂಡಿ ಅಧಿಕಾರಿಗಳು 8 ವರ್ಷದಿಂದ ಮಾರ್ಚ್‌ತಿಂಗಳಲ್ಲಿ ಮಾತ್ರ ಕಾಟಾಚಾರಕ್ಕೆ ಗುಂಡಿ ಮುಚ್ಚುವ,ತೇಪೆ ಹಾಕುವ ಕಾಮಗಾರಿ ಮಾಡುತ್ತಿದ್ದಾರೆ.ಮಳೆಗಾಲದಲ್ಲಿ ತೇಪೆ ಹಾಕಿರುವ ಟಾರ್‌ ಸಹ ಕಿತ್ತುಹೋಗಿದೆ. ಆದ್ದರಿಂದ ರಾಜ್ಯ ಸರ್ಕಾರ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆಆಗುತ್ತಿರುವ ಕಿರಿಕಿರಿ ತಪ್ಪಿಸಬೇಕೆಂದು ಮಿಟ್ಟೇಮರಿ ಗ್ರಾಮಸ್ಥರು ಸಂಸದರು, ಸಚಿವರಲ್ಲಿ ಮನವಿ ಮಾಡಿದ್ದಾರೆ.

ಹಲವು ದಶಕಗಳ ಹಿಂದೆನಿರ್ಮಿಸಿರುವ ಏಕಪಥ ರಸ್ತೆಯನ್ನು ರಾಜ್ಯ ಹೆದ್ದಾರಿ ಆಗಿ ಮೇಲ್ದರ್ಜೇಗೇರಿಸಿ ಆದೇಶ ಮಾಡಿದ್ದರೂ ನಿರ್ಮಾಣ ಕಾರ್ಯ ನಡೆದಿಲ್ಲ. ದಿನೇ ದಿನೆ ಮಿಟ್ಟೇಮರಿ ರಸ್ತೆಯಲ್ಲಿವಾಹನ ಸಂಚಾರ ಹೆಚ್ಚಾಗುತ್ತಿರುವುದರಿಂದಅಪಘಾತಗಳು ನಡೆದು ಅನೇಕ ಜನರು ಬಲಿಯಾಗಿದ್ದಾರೆ. ಸಂಸದರು, ಸಚಿವರು ಇತ್ತಗಮನ ಹರಿಸಿ, ನಾಲ್ಕು ಪಥದ ರಸ್ತೆನಿರ್ಮಾಣಕ್ಕೆ ಆದ್ಯತೆ ನೀಡಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಎಂ.ಬಿ.ಎಲ್‌.ನರಸಿಂಹಯ್ಯ, ಅಧ್ಯಕ್ಷ, ಮಿಟೇಮರಿ ಗ್ರಾಪಂ.

ಆಂಧ್ರ ಪ್ರದೇಶ, ತಮಿಳುನಾಡು,ಕರ್ನಾಟಕ ಸೇರಿ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಂತಿರುವ ರಸ್ತೆಯನ್ನುಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ರಸ್ತೆಅಗಲೀಕರಣಕ್ಕೆ ಮುಂದಾಗುತ್ತಿಲ್ಲ, ಮೀತಿಮೀರಿದ ವಾಹನ ಸಂಚಾರದಿಂದ ರಸ್ತೆಸಂಪೂರ್ಣ ಹದಗೆಟ್ಟು ಗುಂಡಿಮಯವಾಗಿದೆ. ಈ ಹಿಂದೆ ನಾಲ್ಕುಪಥದ ರಸ್ತೆ ನಿರ್ಮಾಣ ಮಾಡಬೇಕುಎಂದು ಸರ್ಕಾರ ಪ್ರಸ್ತಾವನೆಯಲ್ಲಿ ಇದ್ದರೂ,ಅಧಿಕಾರಿಗಳ ನಿರ್ಲಕ್ಷ್ಯವೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಟೈಲರ್‌ ಬಾಬು, ಮಿಟ್ಟೇಮರಿ ಗ್ರಾಮಸ್ಥ 

Advertisement

Udayavani is now on Telegram. Click here to join our channel and stay updated with the latest news.

Next