Advertisement

ರಸ್ತೆಗೆ ಕಾಯಕಲ್ಪ ಕಲ್ಪಿಸಲು ಅಗತ್ಯ ಕ್ರಮ: ಶಾಸಕ

11:46 AM Oct 30, 2022 | Team Udayavani |

ಮಾಗಡಿ: ಮಾಗಡಿಯಿಂದ- ರಾಮನಗರ ದವರೆಗೆ ರಸ್ತೆಗೆ ಕಾಯಕಲ್ಪ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

Advertisement

ಪಟ್ಟಣದ ಹೊಸಪೇಟೆ ವೃತ್ತದ ಬಳಿ ಮಾಗಡಿ-ರಾಮನಗರದವರೆಗೆ 16 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಗಡಿ-ರಾಮನಗರ ರಸ್ತೆ ತುಂಬಾ ಗುಂಡಿ ಬಿದ್ದಿದ್ದವು. ಮಾಗಡಿ ಸುತ್ತಮುತ್ತಲಿನ ರೈತರು ಬೆಳೆದ ತರಕಾರಿ, ಹೂವು, ಹಣ್ಣು ರಾಮ ನಗರದ ಮಾರುಕಟ್ಟೆಗೆ ಮಾರಾಟಕ್ಕೆ ತೆರಳಲು ಉತ್ತಮ ರಸ್ತೆ ಬೇಕಾಗಿರುತ್ತದೆ. ಆದ್ದರಿಂದ, ಶಾಸಕರ ಅನುದಾನ ಬಳಸಿಕೊಂಡು ಸುಸಜ್ಜಿತ ವಾದ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿ ಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದರು.

ಎಚ್ಡಿಕೆ ಅವರಿಂದಲೇ ರಸ್ತೆ ಕಾಮಗಾರಿಗೆ ಪೂಜೆ ಮಾಡಿಸಬೇಕೆಂಬ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ನ.1ರಂದು ಜೆಡಿಎಸ್‌ ನ ಪಂಚರತ್ನ ಯಾತ್ರೆ ಸಂಬಂಧ ಅವರು ಬರಲಾಗಲಿಲ್ಲ, ಇದನ್ನೇ ತಪ್ಪಾಗಿ ಅನ್ಯತಾ ಭಾವಿಸಬಾರದು ಎಂದ ಅವರು, ಈಗಾಗಲೆ ಬೆಂಗಳೂರು ಮಾಗಡಿಗೆ ನಾಲ್ಕು ಪಥದ ರಸ್ತೆ, ಮತ್ತು ತಾಳೆಕರೆ ಹ್ಯಾಂಡ್‌ಫೋಸ್ಟ್‌ವರೆಗೆ ಹಾಗೂ ಸೋಮವಾರಪೇಟೆವರೆಗೆ ರಸ್ತೆ ಕಾಮಗಾರಿ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ರಸ್ತೆ, ಚರಂಡಿ ಮಾಡಿಸಲಾಗಿದೆ ಎಂದರು.

ರಿಂಗ್‌ ರೋಡ್‌: ಎಸ್‌ಟಿಆರ್‌ಆರ್‌ ರಸ್ತೆ- ದಾಬಸ್‌ಪೇಟೆಯಿಂದ ತುಮಕೂರು, ಹಾಸನದ ರಸ್ತೆಯಿಂದ ಮಾಗಡಿ, ರಾಮನಗರ, ಕನಕಪುರ ಆನೇಕಲ್‌, ಹೊಸೂರು, ದೇವನ ಹಳ್ಳಿ ರಸ್ತೆವರೆಗೆ ರಿಂಗ್‌ ರೋಡ್‌ ಆಗಲಿದೆ. ಇದನ್ನು ಸ್ಯಾಟ್‌ಲೆçಟ್‌ ಟೌನ್‌ ಎನ್ನಲಾಗುತ್ತದೆ. ಎಲಿವೆಟೆಡ್‌ ಕಾರಿಡಾರ್‌ ರಸ್ತೆಗೆ ಎನ್‌ಜಿಟಿ ಅವರು ವಿರೋಧಿಸಿದ್ದರು. ಆದರೂ ಕಾಡಿನ ಮಧ್ಯೆ ತರಳಲು ರಸ್ತೆ ಮಾಡಬೇಕಿದ್ದು, ಇದನ್ನು ಪ್ಲೇ ಒವರ್‌ ಕಾರಿಡಾರ್‌ ರೋಡ್‌ ಮಾಡ ಲಾಗುತ್ತಿದೆ ಎಂದರು.

ಕ್ಷೇತ್ರದ ಜನತೆ ಮರೆಯುವುದಿಲ್ಲ: 850 ಕೋಟಿ ರೂ.ವೆಚ್ಚದಲ್ಲಿ ಕ್ಷೇತ್ರಕ್ಕೆ ಮಂಜೂರಾತಿ ತಂದಿದ್ದೇನೆ. ಪ್ರತಿ ಮನೆ-ಮನೆಗೆ ಶುದ್ಧ ಕುಡಿವ ನೀರು ಕೊಡಬೇಕೆಂದು ಮಂಚನ ಬೆಲೆ, ವೈಜಿ ಗುಡ್ಡ, ಕಣ್ವದಿಂದ ಲಿಪ್ಟ್ ಮಾಡಿ ಸೋಲೂರು, ಕಸಬಾ, ಕೂಟಗಲ್‌, ಬಿಡದಿ, ಕೈಲಾಂಚ ಒಳಗೊಂಡಂತೆ 1,250 ಹಳ್ಳಿಗಳಿಗೆ ಶುದ್ಧ ನೀರು ಕೊಡಬೇಕೆಂದು ಕ್ರಮ ವಹಿ ಸಿದ್ದು, ಈ ಸಂಬಂಧ ಮಂತ್ರಿಗಳು ಸಹಕಾರ ಕೊಟ್ಟರು. ಸಚಿವರಾಗಿದ್ದ ಈಶ್ವರಪ್ಪ, ತಾಲೂಕಿಗೆ 850 ಕೋಟಿ ರೂ. ಹಣ ಕುಡಿಯುವ ನೀರಿಗೆ ಬಿಜೆಪಿ ಸರ್ಕಾರ ಕೊಟ್ಟಿದೆ ಎಂದರೆ ಇತಿಹಾಸ. ಕ್ಷೇತ್ರದ ಜನತೆ ಮರೆಯುವುದಿಲ್ಲ ಎಂದರು.

Advertisement

ಬೃಹತ್‌ ಸಮಾವೇಶದ ಚಿಂತನೆ: ಡಾ. ಶಿವ ಕುಮಾರ ಸ್ವಾಮೀಜಿ ಹೆಸರಿನಲ್ಲಿ ಇನ್‌ ಡೋರ್‌, ಆಡಿಟೊರಿಯಂ ವಿದ್ಯುತ್‌ ಚಿತಾ ಗಾರ, ಹೈಟೆಕ್‌ ಲೈಬ್ರರಿ, ಮಾರುಕಟ್ಟೆ 850 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ಕೊಡಬೇಕಿದೆ. ಪ್ರಸಿದ್ಧ ಕೆಂಪೇಗೌಡ ಕೋಟೆ ಮೈದಾನಕ್ಕೆ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಎಚ್ಡಿಕೆ ಕರೆಸಿ ಪೂಜೆ ನೆರವೇರಿ ಸುವ ಬೃಹತ್‌ ಸಮಾವೇಶ ಮಾಡಲು ಚಿಂತಿಸ ಲಾಗಿದೆ ಎಂದು ಹೇಳಿದರು.

ರೈತರೇ ತಾಳ್ಮೆ ಕಳೆದುಕೊಳ್ಳಬೇಡಿ: ಮರೂರು ಬಳಿ ಕೈಗಾರಿಕೆ ಸ್ಥಾಪನೆ ವಿರೋಧಿಸಿರುವ ರೈತರು ಎಚ್ಡಿಕೆ ಭೇಟೆ ಮಾಡಲು ಬಂದಿದ್ದಾರೆ. ಎಚ್ಡಿಕೆ ಮುಂದೆ ನಿವೇದನೆ ಹೇಳಿಕೊಳ್ಳಲಿ. ಅವ ರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಸಹಕರಿಸಿದರೆ ನನ್ನದೇನು ತಕರಾರಿಲ್ಲ. ತಾಳ್ಮೆ ಇರಲಿ ಎಂದು ರೈತರಿಗೆ ಕೈಮುಗಿದು ಮನವಿ ಮಾಡಿದರು.

ಪುರಸಭಾಧ್ಯಕ್ಷೆ ವಿಜಯಾ ರೂಪೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಕಾಂತರಾಜು, ಸದಸ್ಯ ಕೆ.ವಿ.ಬಾಲರಘು, ಅನಿಲ್‌ಕುಮಾರ್‌, ಅಶ್ವಥ್‌, ಹೇಮಲತಾ, ರೇಖಾ ನವೀನ್‌, ಜೆಡಿ ಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ಯುವ ಜೆಡಿಎಸ್‌ ಅಧ್ಯಕ್ಷ ವಿಜಯಕುಮಾರ್‌, ಮಹಿಳಾಧ್ಯಕ್ಷೆ ಶೈಲಜಾ, ಮಂಜುನಾಥ್‌, ಕೆಂಪೇ ಗೌಡ, ಚಿಕ್ಕಣ್ಣ, ದವಳಗಿರಿ ಚಂದ್ರಣ್ಣ ಕಲ್ಕೆರೆ ಶಿವಣ್ಣ ರೂಪೇಶ್‌, ಗುಡ್ಡೇಗೌಡ, ರಾಮಣ್ಣ, ವೆಂಕಟೇಶ್‌ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next