ಹುಣಸೂರು: ತಾಲೂಕಿನ 3 ಗ್ರಾಮಗಳ ರಸ್ತೆ ಅಭಿವೃದ್ಧಿಗೆ 1.48 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿಯ ತಟ್ಟೆಕೆರೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾಲೋನಿ ರಸ್ತೆಗೆ 40 ಲಕ್ಷ ರೂ., ಕೊಯಮುತ್ತೂರು ಕಾಲೋನಿಗೆ 48 ಲಕ್ಷ ರೂ., ವಿನೋಬಾ ಕಾಲೋನಿ ಅಭಿವೃದ್ಧಿಗೆ 70 ಲಕ್ಷ ರೂ. ಬಿಡು ಗಡೆಯಾಗಿದೆ. ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಒತ್ತುವರಿ ತೆರವುಗೊಳಿ ಸಲುಮನವೊಲಿಸಬೇಕು ಎಂದರು.
ಸಕ್ಕಿಂಗ್ ಯಂತ್ರ ಖರೀದಿಸಿ: ತಾಲೂಕಿನ ಎಲ್ಲ 41 ಗ್ರಾಪಂಗಳವರು ತಲಾ 2 ಲಕ್ಷ ರೂ. ಮೀಸಲಿಟ್ಟು, ಎರಡು-ಮೂರು ಗ್ರಾಪಂ ಗಳಿಗೆ ಒಂದರಂತೆ ಸಕ್ಕಿಂಗ್‌ಯಂತ್ರ ಖರೀ ದಿಸಿ ಸ್ವತ್ಛತೆಗೆ ಆದ್ಯತೆ ನೀಡಬೇಕೆಂದರು.
ಅಂಬೇಡ್ಕರ್ ಭವನ: ತಟ್ಟೆಕೆರೆಯಲ್ಲಿ ನಿವೇಶನವಿದ್ದು, 25 ಲಕ್ಷ ರೂ. ವೆಚ್ಚದಲ್ಲಿ ಅಂಬೇ ಡ್ಕರ್ ಭವನ ನಿರ್ಮಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ತಹಶೀಲ್ದಾರ್ ಬಸವರಾಜ್, ತಾಪಂ ಅಧ್ಯಕ್ಷೆ ಪದ್ಮಮ್ಮ, ಸ್ಥಾಯಿಸಮಿತಿಅಧ್ಯಕ್ಷ ರವಿಪ್ರಸನ್ನ, ತಾಪಂ ಮಾಜಿ ಸದಸ್ಯ ನಾಗರಾಜ್, ಗ್ರಾಪಂ ಅಧ್ಯಕ್ಷ ಕುಮಾರ್, ಸದಸ್ಯ ನವೀನ, ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಆರ್.ಐ.ಪ್ರಶಾಂತ್, ಸೀಮಾ ಬಾನು, ಎಂಜಿನಿಯರ್‌ಗಳಾದ ಭೋಜರಾಜ್, ಪ್ರಭಾಕರ್, ಮುಖಂಡರಾದ ರಾಮೇಗೌಡ, ರಾಘು, ನವೀನ, ಮಹದೇವ ಇತರರಿದ್ದರು.