Advertisement

ರಸ್ತೆ ಅಭಿವೃದ್ದಿಗೆ ಆದ್ಯತೆ: ತಿಪ್ಪಾ ರೆಡ್ಡಿ

03:58 PM Mar 29, 2022 | Team Udayavani |

ಚಿತ್ರದುರ್ಗ: ನಗರೋತ್ಥಾನ ಯೋಜನೆಯಡಿ ಚಿತ್ರದುರ್ಗಕ್ಕೆ 40 ಕೋಟಿ ರೂ. ಅನುದಾನ ಲಭ್ಯವಾಗಿದ್ದು, ಇದರಲ್ಲಿ 22 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದೇವೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಶೃಂಗೇರಿ ಮಠದ ಬಳಿ ಅಮೃತ ಯೋಜನೆಯಡಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ನಗರೋತ್ಥಾನ ಯೋಜನೆಯ 40 ಕೋಟಿ ರೂ.ಗಳಲ್ಲಿ ಉಳಿದ 11 ಕೋಟಿ ರೂ.ಗಳನ್ನು ಪಾರ್ಕ್‌ ಅಭಿವೃದ್ಧಿಗೆ, 2 ಕೋಟಿ ರೂ. ದ್ವಿಪಥ ರಸ್ತೆಯ ಮಧ್ಯೆ ಹೂವಿನ ಗಡಿಗಳನ್ನು ನೆಡಲು ಹಾಗೂ ಬಡವರಿಗೆ ಮನೆ ನಿರ್ಮಾಣಕ್ಕಾಗಿ 5 ಕೋಟಿ ರೂ.ಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಅಮೃತ ಯೋಜನೆಯಲ್ಲಿ 144 ಕೋಟಿ ರೂ. ಅನುದಾನ ನೀಡಿದ್ದು, ಅದರಲ್ಲಿ 112 ಕೋಟಿ ರೂ.ಗಳನ್ನು ವಿವಿ ಸಾಗರ ಮತ್ತು ಶಾಂತಿ ಸಾಗರದಿಂದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ನೀಡಲಾಗಿದೆ ಎಂದರು.

ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣಕ್ಕೆ, ಕಾಮಗಾರಿ ವಿಳಂಬವಾಗಿತ್ತು. ಇದರಿಂದ ಜನರಿಗೆ ಕಿರಿಕಿರಿಯಾಗಿದೆ. ಈಗ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಮಾನವಾಗಿದ್ದು, ಕೆಲ ದಿನಗಳಲ್ಲೇ ಫುಟ್‌ಪಾತ್‌, ಚರಂಡಿ ಮತ್ತಿತರೆ ಕಾಮಗಾರಿಗಳು ಮುಗಿದು ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದರು.

ಈ ವೇಳೆ ನಗರಸಭೆ ಸದಸ್ಯರಾದ ಶ್ರೀನಿವಾಸ್‌, ಪರಮೇಶ್‌, ಭಾಸ್ಕರ್‌, ವೆಂಕಟೇಶ್‌, ಶ್ವೇತಾ ವೀರೇಶ್‌, ನಾಗಮ್ಮ, ಹರೀಶ್‌, ಮಂಜುನಾಥ್‌, ಕೃಷ್ಣ, ತಿಮ್ಮಣ್ಣ, ರಾಜು, ಮುಖಂಡರಾದ ದಿನೇಶ್‌, ಸಿ.ಟಿ. ಕೃಷ್ಣಮೂರ್ತಿ, ದೇವರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next