Advertisement

ಎರಡೇ ವರ್ಷದಲ್ಲಿ ಕಿತ್ತು ಹೋದ ಬೊಮ್ಮನಹಳ್ಳಿ ಮಾರ್ಗ ರಸ್ತೆ

06:05 PM Jan 10, 2021 | Team Udayavani |

ದೇವದುರ್ಗ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಾರ್ಗವಾಗಿ ಹತ್ತಾರು ದೊಡ್ಡಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಎರಡೇ
ವರ್ಷದಲ್ಲಿ ಕಿತ್ತು ಹೋಗಿದೆ. ಐದು ವರ್ಷಗಳ ನಿರ್ವಹಣೆ ಅವಧಿ ಇದ್ದರೂ ಗುತ್ತಿಗೆದಾರರು ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳೂ ಮೌನಕ್ಕೆ ಶರಣಾಗಿದ್ದಾರೆ ಎಂದು ಇಲ್ಲಿನ ದೊಡ್ಡಿಗಳ ನಿವಾಸಿಗಳು ಆರೋಪಿಸಿದ್ದಾರೆ.

Advertisement

ಸಮೀಪದ ಬೊಮ್ಮನಹಳ್ಳಿ ಗ್ರಾಮದ ಮಾರ್ಗವಾಗಿ ಹತ್ತಾರೂ ದೊಡ್ಡಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಎರಡೇ ವರ್ಷದಲ್ಲಿ
ಸಂಪೂರ್ಣ ಕಿತ್ತು ಹೋಗಿರುವುದು ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತಾಗಿದೆ. “ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆ’ ಅಡಿ ರಸ್ತೆ
ಕಾಮಗಾರಿ ಕೈಗೊಳ್ಳಲಾಗಿದೆ. 568.27 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಉದ್ದಕ್ಕೂ ಎಲ್ಲೆಂದರಲ್ಲಿ ರಸ್ತೆ ಕಿತ್ತಿದ್ದು,
ಎದ್ದು, ಬಿದ್ದು ಸಂಚಾರ ಸಂಚರಿಸಬೇಕಾದ ಅನಿವಾರ್ಯತೆ ಬಂದೋಗಿದೆ. ಈ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ
ಗಮನ ತಂದರೂ ಪ್ರಯೋಜನವಾಗಿಲ್ಲ ಎಂಬ ದೂರು ಜನರದ್ದು.

ಇದನ್ನೂ ಓದಿ:ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಚಾಲನೆ : ಯೋಜನೆಯ ಮೊದಲ ಹಂತದ ಕಾಮಗಾರಿಗೆ ಟೆಂಡರ್‌

ನಿರ್ವಹಣೆ ಹಿಂದೇಟು: ಯಾವುದೇ ಕಾಮಗಾರಿ ಕೈಗೊಂಡರೇ ಅದರ ನಿರ್ವಹಣೆ ಅವಧಿ ಜವಾಬ್ದಾರಿ ಗುತ್ತಿಗೆದಾರರು
ನಿರ್ವಹಿಸಲಾಗುತ್ತದೆ. ಬೊಮ್ಮನಹಳ್ಳಿ ಗ್ರಾಮದಿಂದ ನಿರ್ಮಿಸಲಾದ ರಸ್ತೆ ಐದು ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿ
ಗುತ್ತಿಗೆದಾರರ ಮೇಲಿದೆ. ಎರಡೂ ವರ್ಷದಲ್ಲಿ ಅಲ್ಲಲ್ಲಿ ರಸ್ತೆ ಕಿತ್ತು ತೆಗ್ಗು ದಿನ್ನಿಗಳು ಬಿದ್ದಿವೆ. ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಕ್ಯಾರೇ ಎನ್ನುತ್ತಿಲ್ಲ. ನಿರ್ವಹಣೆಗೆ ಅನುದಾನ ಮೀಸಲಿದ್ದರೂ ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಂಪು ಬಸ್‌ ಇಲ್ಲ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಾರ್ಗವಾಗಿ ಅಮರಯ್ಯದೊಡ್ಡಿ, ಕರ್ನಾಳದೊಡ್ಡಿ, ಗಡ್ಡಯ್ಯನದೊಡ್ಡಿ, ಕುರುಬುರದೊಡ್ಡಿ, ಕಂಬಾರದೊಡ್ಡಿ, ಬಸಾಪುರ ಸೇರಿ ಇತರೆ ದೊಡ್ಡಿಗಳ ನಿವಾಸಿಗಳು ಕೆಂಪು ಬಸ್‌
ಕಾಣದಂತಾಗಿದೆ. ಕೆಲ ದೊಡ್ಡಿಯ ಗ್ರಾಮಸ್ಥರು ಕಾಲ್ನಡಿಗೆಯಲ್ಲಿ ಬೊಮ್ಮನಹಳ್ಳಿಗೆ ಬರಬೇಕು. ಇಲ್ಲಿಂದಲೇ ಜಾಲಹಳ್ಳಿ, ದೇವದುರ್ಗಕ್ಕೆ ಹೋಗಲು ಅನುಕೂಲವಿದೆ. ಸ್ವಾತಂತ್ರ್ಯ ಸಿಕ್ಕು ದಶಕಗಳೇ ಗತಿಸಿದರೂ ಇಲ್ಲಿನ ಗ್ರಾಮಸ್ಥರಿಗೆ ಕೆಂಪು ಬಸ್ಸಿನ ಭಾಗ್ಯ ಕಾಣದಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಟಂಟಂ ವಾಹನಗಳೇ ಆಸರೆ ಎಂಬಂತಾಗಿದೆ ಎಂದು ಲಚಮ್ಮಯ್ಯ, ವೆಂಕೋಬ ನೋವು ತೊಡಿಕೊಂಡರು.

Advertisement

– ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next