Advertisement

ಕಜೆ: ಮಂಜಲ್ಪಡು-ಕೊಡಿಪ್ಪಾಡಿ ರಸ್ತೆ ಕುಸಿತ, ಸಂಚಾರ ಆತಂಕಿತ

12:01 PM Jul 08, 2018 | Team Udayavani |

ಕೊಡಿಪ್ಪಾಡಿ: ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಮಂಜಲ್ಪಡ್ಪು  -ಕೊಡಿಪ್ಪಾಡಿ ಜಿ.ಪಂ. ರಸ್ತೆ ಮಧ್ಯ ಭಾಗದಿಂದಲೇ ಕುಸಿದು ಬಿದ್ದಿರುವ ಕಾರಣ, ವಾಹನ ಸಂಚಾರಕ್ಕೆ ತೊಡಕಾಗಿದೆ. ಪುತ್ತೂರು ನಗರಸಭೆ ವ್ಯಾಪ್ತಿಯ ಮಂಜಲ್ಪಡ್ಪು ಹತ್ತಿರದ ಕಜೆ ಎಂಬಲ್ಲಿ ಈ ರಸ್ತೆ ಕುಸಿತ ಉಂಟಾಗಿದೆ. ಘನ ವಾಹನಗಳ ಸಂಚಾರ ಅಸಾಧ್ಯವಾಗಿರುವ ಈ ರಸ್ತೆಯಲ್ಲಿ ಕಾರು, ಆಟೋ ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವಷ್ಟು ಮಾತ್ರ ಜಾಗ ಉಳಿದಿದೆ. ಆದರೆ, ರಸ್ತೆ ನಿರಂತರ ಕುಸಿಯುತ್ತಿರುವ ಕಾರಣ, ಸಂಪರ್ಕ ಸಂಪೂರ್ಣ ಮುಚ್ಚಿಹೋಗುವ ಭೀತಿ ಎದುರಾಗಿದೆ.

Advertisement

ಮಾಣಿ – ಮೈಸೂರು ಹೆದ್ದಾರಿಯಿಂದ ಮಂಜಲ್ಪಡ್ಪು ಮೂಲಕ ಕೊಡಿಪ್ಪಾಡಿ ಜನಾರ್ದನ ದೇವಸ್ಥಾನ, ಕೊಡಿಪ್ಪಾಡಿ ಗ್ರಾ.ಪಂ. ಕಚೇರಿ ಹಾಗೂ ಕೊಡಿಪ್ಪಾಡಿ ಸರಕಾರಿ ಶಾಲೆ ವರೆಗೆ ತಲುಪಲು ಇದು ಎಕೈಕ ಸಂಪರ್ಕ ರಸ್ತೆಯಾಗಿದೆ. ದಿನ ನಿತ್ಯ ಶಾಲಾ ಕಾಲೇಜು ಮತ್ತಿತರ ಕೆಲಸ ಕಾರ್ಯಗಳಿಗೆ ತೆರಳುವ ನೂರಾರುಜನರು ಇದೇ ರಸ್ತೆಯನ್ನು ಅವಲಂಬಿಸಿದಾರೆ. ಇದೇ ರಸ್ತೆಯಲ್ಲಿ ಕುಸಿತ ಉಂಟಾದಲ್ಲಿಂದ ಕೊಂಚ ದೂರದಲ್ಲಿ ಮರವೊಂದು ಬರೆಯ ಮಣ್ಣಿನ ಸಮೇತ ರಸ್ತೆಗೆ ಉರುಳಿದೆ.

ಈ ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು, ಇತರ ವಾಹನಗಳು ನಿತ್ಯ ಸಂಚರಿಸುತ್ತಿವೆ. ಏಕೈಕ ಸಂಪರ್ಕ ರಸ್ತೆ ಕುರಿತ ಉಂಟಾದಲ್ಲಿ ಸ್ಥಳೀಯರು ತೊಂದರೆ ಎದುರಿಸಲಿದ್ದಾರೆ. ಈ ಜನರಿಗೆ ಪುತ್ತೂರಿನಿಂದ ಕಬಕಕ್ಕೆ ಬಂದು, ಕುಳ ಗ್ರಾಮದ ಕುಂಡಡ್ಕ ಸಂಪರ್ಕದ ಜಿ.ಪಂ. ರಸ್ತೆ ಮೂಲಕ ಅರ್ಕ ಗ್ರಾಮವನ್ನು ಬಳಸಿ ಕೊಡಿಪ್ಪಾಡಿಗೆ ತಲುಪಬೇಕಾಗಿದೆ. ಇದು ಸುಮಾರು 10 ಕಿ.ಮೀ. ಸುತ್ತು ಬಳಸಿನ ದಾರಿ.

ಈ ಮೊದಲು ಜಿ.ಪಂ. ಅಧಿಕಾರಿಯೊಬ್ಬರು ಆಗಮಿಸಿ, ವೀಕ್ಷಣೆ ಮಾಡಿದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಶನಿವಾರ ಬೆಳಗ್ಗೆಯೇ ರಸ್ತೆ ಮಧ್ಯೆ ಕುಸಿತ ಉಂಟಾಗಿದ್ದರೂ ಅಧಿಕಾರಿಗಳು ಸಂಜೆ ವರೆಗೂ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿಲ್ಲ. ವಾಹನಗಳ ಸುರಕ್ಷತೆ ದೃಷ್ಟಿಯಿಂದ ಕುಸಿತದ ಸ್ಥಳದ ಸುತ್ತ ಬೇಲಿಯನ್ನು ಅಳವಡಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next