Advertisement

ರಸ್ತೆ ನಿರ್ಮಾಣ ಕಾಮಗಾರಿ ಅನಧಿಕೃತ: ಶಾಸಕ

11:14 AM Sep 09, 2020 | Suhan S |

ಅನಗೊಂಡನಹಳ್ಳಿ: ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ರಸ್ತೆ ಕಾಮಗಾರಿ ಮಾಡುತ್ತಿದ್ದು ಕಾನೂನು ಉಲ್ಲಂಘನೆ ಜತೆ ಸಾರ್ವಜನಿಕ ಆಸ್ತಿ ಹಾಳುಮಾಡಲಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಆರೋಪಿಸಿದರು.

Advertisement

ತಾಲೂಕಿನ ತಿರುಮಶಟ್ಟಿಹಳ್ಳಿ ಠಾಣೆ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು. ಊರಿನಲ್ಲಿ ಇತ್ತೀಚೆಗಷ್ಟೇ ನಿರ್ಮಾಣ ಮಾಡಿದ್ದ ಹಾಗೂ ಉತ್ತಮವಾಗಿದ್ದ ರಸ್ತೆಯನ್ನು ಅನವಶ್ಯಕವಾಗಿ ಕಿತ್ತು ಅದಕ್ಕೆ ಮತ್ತೆ ಕಾಂಕ್ರೀಟ್‌ ಹಾಕುವ ಕೆಲಸಕ್ಕೆ ಕೆಲವರು ಮುಂದಾಗಿ ದ್ದಾರೆ. ಇದು ಕಾನೂನು ಬಾಹಿರ. ಕಾಮಗಾರಿ ಮಾಡಲು ಯಾವುದೇ ಆದೇಶ ಇಲ್ಲ. ಮುಂದಿನ ದಿನಗಳಲ್ಲಿ ಬರುವ ಗ್ರಾಪಂ ಚುನಾವಣೆ ಎದುರಿಸಲು ಜನರಿಂದ ಕರುಣೆ ಪಡೆಯಲು ಕೆಲ ರಾಜಕಾರಣಿಗಳು, ಈ ರೀತಿಯ ಸುಳ್ಳು ಅಭಿವೃದ್ಧಿ ನಾಟಕವಾಡಿ ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು.

ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಹರ್ಷದ್‌ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳು ತ್ತಾರಾದರೂ ಅದರ ಬಗ್ಗೆ ಯಾವುದೇ ದಾಖಲೆ ಯಿಲ್ಲ. ಪೊಲೀಸರು ಗುತ್ತಿಗೆದಾರನ ಭಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದರು.ಮುಂದಿನ ದಿನಗಳಲ್ಲಿ ಬರುತ್ತಿರುವ ಗ್ರಾಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತನಾಡುವುದಾಗಿ ತಿಳಿಸಿದರು.

ಸ್ಥಳದಲ್ಲಿ ಹಾಜರಿದ್ದ ಡಿವೈಎಸ್‌ಪಿ ನಿಂಗಪ್ಪ ಸಕ್ರಿ, ನಾವು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಊರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಸಲುವಾಗಿ ಬಂದಿದ್ದೇವೆಂದರು. ಮುಖಂಡರಾದ ಬೈರೇಗೌಡ, ಕೋಡಿಹಳ್ಳಿ ಸುರೇಶ್‌, ಜಿಪಂ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಜಿಪಂ ಸದಸ್ಯ ವೈಎಸ್‌ಎಂ ಮಂಜುನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next