Advertisement

ಮರೀಲು –ಪಳಿಕೆ: ಕಾಂಕ್ರೀಟ್‌ ಕಾಮಗಾರಿಗೆ ಗುದ್ದಲಿ ಪೂಜೆ

03:30 AM Dec 04, 2018 | Team Udayavani |

ಮರೀಲು: ನಗರಸಭಾ ವ್ಯಾಪ್ತಿಯ ಮರೀಲು ಪಳಿಕೆ ರಸ್ತೆಗೆ ಎಸ್‌.ಎಫ್‌.ಸಿ ಅನುದಾನದಿಂದ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಸಲು ಸೋಮವಾರ ಗುದ್ದಲಿ ಪೂಜೆ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯರಾದ ವಿಜಯ ಶೇಣವ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

Advertisement

ನಗರಸಭಾ ಸದಸ್ಯೆ ಮಮತಾ ರಂಜನ್‌, ಸದಸ್ಯ ಪಿ.ಜಿ. ಜಗನ್ನಿವಾಸ ರಾವ್‌, ಮಾಜಿ ಸದಸ್ಯ ರಾಜೇಶ್‌ ಬನ್ನೂರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್‌ ಹಾರಾಡಿ, ಬಿ.ಎಂ.ಎಸ್‌. ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಭಾಸ್ಕರ್‌, ನವನೀತ್‌, ರಾಜೇಶ್‌, ಉದಯ, ಸುರೇಶ್‌, ರಂಜನ್‌, ಸಮದ್‌ ಮರೀಲ್‌, ದಾಮೋದರ, ಸೂರ್ಯ ಕುಮಾರ್‌, ಉಮೇಶ್‌, ಚಂದ್ರಶೇಖರ್‌, ವಿಜಯ ದಿನೇಶ್‌, ಲಕ್ಷ್ಮಿ, ಮನೋರಮಾ, ಪುಷ್ಪಾ, ಲತಾ ಆನಂದ್‌, ಗೀತಾಲಕ್ಷ್ಮೀ ಭಟ್‌, ಗುತ್ತಿಗೆದಾರ ಹಂಝ ಉಪಸ್ಥಿತರಿದ್ದರು. ಸುನೀಲ್‌ ಸ್ವಾಗತಿಸಿ, ವಂದಿಸಿದರು.

ರಿಕ್ಷಾದಲ್ಲಿ ಆಗಮಿಸಿದ ಶಾಸಕರು


ಮರೀಲು ಪಳಿಕೆ ಪರಿಸರದಲ್ಲಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಅವರು ಆಟೋ ರಿಕ್ಷಾದಲ್ಲಿ ಆಗಮಿಸುವ ಮೂಲಕ ಗಮನ ಸೆಳೆದರು. ಬಿ.ಎಂ. ಎಸ್‌. ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ ಅವರು ಶಿಲಾನ್ಯಾಸದ ಸ್ಥಳಕ್ಕೆ ಶಾಸಕರನ್ನು ರಿಕ್ಷಾದಲ್ಲಿ ಕರೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next