Advertisement

ಸುಂಕದಕಟ್ಟೆ -ಪ್ರೇಮ್‌ಛಾಯ ರಸ್ತೆ ಕಾಂಕ್ರೀಟ್‌ ಬಿರುಕು

10:49 AM Apr 14, 2018 | Team Udayavani |

ಸುಂಕದಕಟ್ಟೆ : ಬಜಪೆ -ಕೈಕಂಬ ರಾಜ್ಯಹೆದ್ದಾರಿಯ ಸುಂಕದ ಕಟ್ಟೆಯಿಂದ ಪ್ರೇಮ್‌ ಛಾಯಕ್ಕೆ ಹೋಗುವ ರಸ್ತೆ ತರಾತುರಿಯಿಂದ ಮಾಡಿದ ಕಾಮಗಾರಿಯಿಂದಾಗಿ ಕಾಂಕ್ರೀಟ್‌ನಲ್ಲಿ ಬಿರುಕು ಕಂಡು ಬಂದಿದ್ದು, ಗ್ರಾಮಸ್ಥರು ಕಾಮಗಾರಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Advertisement

ಲೋಕೋಪಯೋಗಿ ಇಲಾಖೆಯ 30ಲಕ್ಷ ರೂ. ವೆಚ್ಚದಲ್ಲಿ 600ಮೀಟರ್‌ ಉದ್ದದ ಕಾಂಕ್ರೀಟ್‌ ಕಾಮಗಾರಿಯು ಎ. 3 ರಂದು ಆರಂಭವಾಗಿ ಎ.8 ಕ್ಕೆ ಮುಗಿದಿದೆ. 5ತಿಂಗಳ ಹಿಂದೆ ಈ ಕಾಮಗಾರಿ ಅನುಮೋದನೆಗೊಂಡಿದ್ದು, 2ತಿಂಗಳ ಹಿಂದೆ ರಸ್ತೆ ಕಾಮಗಾರಿ ಆರಂಭಗೊಂಡಿತ್ತು.

ಎ.3ರಂದು ಪ್ರೇಮ್‌ ಛಾಯ ಕಡೆಯಿಂದ ಈ ರಸ್ತೆಗೆ ಕಾಂಕ್ರೀಟ್‌ ಹಾಕುವ ಕಾರ್ಯ ಆರಂಭವಾಗಿತ್ತು. ಎ.8ಕ್ಕೆ ರಾಜ್ಯ ಹೆದ್ದಾರಿಯ ಜೋಡಣೆಯ ಸುಮಾರು 600ಮೀಟರ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿ ಮುಗಿದಿತ್ತು. ರಸ್ತೆ ಕಾಮಗಾರಿ ನಡೆಯುತ್ತಿದ್ದಂತೆ ರಸ್ತೆಯಲ್ಲಿ ವಾಹನ ಸಂಚಾರವಿತ್ತು. ಕಾಂಕ್ರೀಟ್‌ ರಸ್ತೆಗೆ ಸರಿಯಾಗಿ ನೀರು ಸಿಂಪಡಣೆ ಮಾಡದಿರುವುದು ಕೂಡ ಬಿರುಕು ಬೀಳಲು ಕಾರಣ ಎಂಬುವುದು ಸ್ಥಳೀಯರ ಅಭಿಪ್ರಾಯ.

ತಲ್ಲದಬೈಲು ಮತ್ತು ಸುಂಕದಕಟ್ಟೆ ಕಾಂಕ್ರೀಟ್‌ ರಸ್ತೆಗೆ ರಿಕ್ಷಾದಲ್ಲಿ ಬರಲು ಕಷ್ಟಕರವಾಗುತ್ತಿದೆ. ಆ ರಸ್ತೆ ಮತ್ತು ಈ ರಸ್ತೆಗೆ ಎತರ ತಗ್ಗುಗಳು ಚಕ್ರವನ್ನು ಸಿಲುಕಿಸುವಂತೆ  ಬಿರುಕು ಬಿಟ್ಟಿರುವ ಕಾಂಕ್ರೀಟ್‌ ರಸ್ತೆ. ಇದರಿಂದ ಲಘುವಾಹನ ಸಂಚಾರ ಕಷ್ಟಕರ ಎಂದು ರಿಕ್ಷಾ ಚಾಲಕರು ತಿಳಿಸಿದ್ದಾರೆ.

ಚರಂಡಿ ಸಮಸ್ಯೆ
ಚುನಾವಣೆಯ ಲಾಭ ಪಡೆಯುವ ಉದ್ದೇಶದಿಂದ ಈ ಕಾಮಗಾರಿಯನ್ನು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚರಂಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಮಳೆಗಾಲದಲ್ಲಿ ಎರಡು ಕಡೆಯ ನೀರು ರಭಸವಾಗಿ ಬಂದು ಬ್ಲಾಕ್‌ ಆಗುವ ಸಂಭವವಿದೆ.

Advertisement

 2 ತಿಂಗಳ ಹಿಂದೆ ಆರಂಭ
ಈ ಕಾಮಗಾರಿ 5 ತಿಂಗಳ ಹಿಂದೆ ಅನುಮೋದನೆಗೊಂಡಿದೆ. ಪಿಡಬ್ಯೂಡಿ ಬಜೆಟ್‌ ವರ್ಕ್‌ 5054ರ ವಿಆರ್‌ ಯೋಜನೆಯಡಿ 30ಲಕ್ಷ ರೂ.ಅನುದಾನದಲ್ಲಿ ಸುಂಕದಕಟ್ಟೆಯಿಂದ ಪ್ರೇಮ್‌ ಛಾಯ ರಸ್ತೆ ಕೂಡುವಲ್ಲಿ ಸುಮಾರು 600 ಮೀಟರ್‌ ಕಾಂಕ್ರೀಟ್‌ಗೊಂಡಿದೆ. ಈ ಕಾಮಗಾರಿಯನ್ನು 2ತಿಂಗಳ ಹಿಂದೆ ಆರಂಭಿಸಲಾಗಿದೆ. ಪ್ರಸ್ತುತ ಚುನಾವಣಾ ಕಾರ್ಯದಲ್ಲಿದ್ದೇವೆ.
-ರತ್ನಾಕರ ಚೌಟ ಪಿಡಬ್ಯೂಡಿ ಸಹಾಯಕ
ಎಂಜಿನಿಯರ್‌

ಸುಬ್ರಾಯ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next