ಗೋಶಾಮಹಲ್ (ಹೈದರಾಬಾದ್): ಸಾರ್ವಜನಿಕರು, ಬೀದಿ ಬದಿಯಲ್ಲಿ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಭೂಕಂಪದ ರೀತಿಯಲ್ಲಿ ರಸ್ತೆ ಕುಸಿದು ಹೋಗಿ ಗುಂಡಿ ಬಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಗಾಯ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಆರ್ ಸಿಬಿ ಸೇರಿದ ಕೂಡಲೇ ತಂಡವನ್ನೇ ಟ್ರೋಲ್ ಮಾಡಿದ ವಿಲ್ ಜ್ಯಾಕ್ಸ್
ರಸ್ತೆ ದಿಢೀರನೆ ಕುಸಿದು ಬಿದ್ದ ಪರಿಣಾಮ ರಸ್ತೆ ಮೇಲಿದ್ದ ತರಕಾರಿ, ಸೈಕಲ್, ಬೈಕ್, ಕಾರುಗಳು ಗುಂಡಿಯಲ್ಲಿ ಬಿದ್ದುಬಿಟ್ಟಿದ್ದವು. ಜನರಿಗೆ ಇದು ಭೂಕಂಪವೋ, ರಸ್ತೆ ಕುಸಿತವೋ ಅಂತ ತಿಳಿಯದೇ ಗಾಬರಿಗೊಂಡಿದ್ದರು. ಕೊನೆಗೆ ಗುಂಡಿಯಲ್ಲಿ ಬಿದ್ದಿದ್ದ ತರಕಾರಿ ಗಾಡಿ, ಬುಟ್ಟಿ, ಕಾರು ಸೇರಿದಂತೆ ವಾಹನಗಳನ್ನು ಮೇಲಕ್ಕೆತ್ತಲಾಗಿತ್ತು.
Related Articles
ರಸ್ತೆ ಕುಸಿತದ ಪರಿಣಾಮ ಇಡೀ ಪ್ರದೇಶಲ್ಲಿ ವ್ಯಾಪಕ ಅಡಚಣೆ ಉಂಟಾಗಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುಂತಾಗಿದೆ ಎಂದು ವರದಿ ತಿಳಿಸಿದೆ. ಸಂಪೂರ್ಣ ರಸ್ತೆ ದುರಸ್ತಿಯಾಗುವವರೆಗೆ ಈ ಪ್ರದೇಶದ ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
ರಸ್ತೆ ಕೆಳಗಿರುವ ನೀರಿನ ಪೈಪ್ ಲೈನ್ ನಿಂದಾಗಿ ರಸ್ತೆ ಕುಸಿತಕ್ಕೆ ಕಾರಣ ಇರಬಹುದು ಎಂದು ಊಹಿಸಲಾಗಿದೆ. ಆದರೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.