Advertisement
ಕೆಲವು ವಿದ್ಯುತ್ ಕಂಬಗಳು ಕೂಡ ಬಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿತು. ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೆಸ್ಕಾಂ ಸಿಬಂದಿ ಆಗಮಿಸಿ ವಿದ್ಯುತ್ ತಂತಿ, ಕಂಬಗಳನ್ನು ತೆರವು ಮಾಡಿದರು. ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮರಗಳನ್ನು ತೆರವು ಮಾಡಿದರು.
ಬಡಗನ್ನೂರು: ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಮೀನಾವು ಇಬ್ರಾಹಿಂ ಅವರ ದನದ ಹಟ್ಟಿಗೆ ಮೇಲೆ ಬುಧವಾರ ಸಂಜೆ ಮಳೆಯ ಸಂದರ್ಭ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ವಿವಿಧೆಡೆ ಉತ್ತಮ ಮಳೆ
ಮಂಗಳೂರು/ ಉಡುಪಿ: ದ.ಕ., ಉಡುಪಿ, ಜಿಲ್ಲೆಯ ವಿವಿಧೆಡೆ ಬುಧ ವಾರ ರಾತ್ರಿ ಮಳೆಯಾಗಿದೆ. ಉಜಿರೆ, ಮುಂಡಾಜೆ, ಸುಬ್ರಹ್ಮಣ್ಯ, ಕಡಬ, ಮಣಿಪಾಲ, ಇಂದ್ರಾಳಿ, ಕುಂದಾಪುರದ ಬೆಳ್ವೆ, ಸಿದ್ದಾಪುರ ಮೊದಲಾದ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.
Related Articles
ಕರಾವಳಿ ಭಾಗದಲ್ಲಿ ಜೂನ್ 1 ಮತ್ತು 4ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಬಿಸಿಲು ಮತ್ತು ಉರಿಸೆಕೆಯಿಂದ ಕೂಡಿತ್ತು.
Advertisement