Advertisement

18 ಹಳ್ಳಿಗಳ ಜನರ ಸ್ಥಳಾಂತರ: ತಿರುಪತಿಗೆ ರಸ್ತೆ, ರೈಲು ಸಂಪರ್ಕ ಕಡಿತ

10:12 AM Nov 23, 2021 | Team Udayavani |

ತಿರುಪತಿ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿವಿಧ ಮಾರ್ಗಗಳಿಂದ ತಿರುಪತಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಹಾಳಾಗಿರುವುದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವವರಿಗೆ ತೀವ್ರ ತೊಂದರೆಯಾಗಿದೆ.

Advertisement

ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಿಂದ ತಿರುಪತಿಗೆ ಹೋಗುವ ಎಲ್ಲ ಮಾರ್ಗಗಳೂ ಬಂದ್‌ ಆಗಿವೆ. ಮತ್ತೊಂದೆಡೆ, ತಿರುಪತಿಯನ್ನು ಸಂಪರ್ಕಿಸುವ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದ್ದು ತಿರುಪತಿಗೆ ಸಂಪರ್ಕವೇ ತಪ್ಪಿಹೋಗಿದೆ.

ಮಳೆಯಿಂದಾಗಿ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಸುತ್ತಲೂ ತುಂಬಿಕೊಂಡಿದ್ದ ಮಳೆ ನೀರನ್ನು ಬೇರೆಡೆಗೆ ಪಂಪ್‌ಔಟ್‌ ಮಾಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ತಿರುಪತಿ ಬಳಿಯ ರಾಯುಲು ಚೆರುವು ಜಲಾಶಯವು ನೀರಿನ ಅಗಾಧ ಒತ್ತಡದಿಂದಾಗಿ ಒಡೆಯುವ ಹಂತಕ್ಕೆ ಬಂದಿದೆ. ಅಣೆಕಟ್ಟಿನಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಸುತ್ತಲಿನ ಜನರಿಗೆ ಭೀತಿಗೊಳಗಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ತೂರು ಜಿಲ್ಲಾಡಳಿತ 18 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

ಇದನ್ನೂ ಓದಿ:ಜಿಮ್ ನಲ್ಲಿ ವರ್ಕೌಟ್ : ವಧುವಿನ ವೆರೈಟಿ ಪ್ರೀವೆಡ್ಡಿಂಗ್ ಫೋಟೋ ಶೂಟ್ !

ದರ್ಶನಕ್ಕೆ ಮತ್ತೆ ಅವಕಾಶ: ಟಿಟಿಡಿ:
ನ. 18ರಿಂದ ನ. 30ವರೆಗಿನ ಅವಧಿಯಲ್ಲಿ ತಿರುಮಲದ ಶ್ರೀ ವೆಂಕ ಟೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಲು ಟಿಕೆಟ್‌ ಪಡೆದಿದ್ದ ಎಲ್ಲ ಭಕ್ತರಿಗೆ ಬೇರೆ ನಿರ್ದಿಷ್ಟ ದಿನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಶ್ರೀ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ತಿಳಿಸಿದೆ. ದರ್ಶನ ಪಡೆಯದ ಭಕ್ತರಿಗಾಗಿ ಪ್ರತ್ಯೇಕ ಸಾಫ್ಟ್ ವೇರ್‌ ರೂಪಿಸಲಾಗುತ್ತದೆ. ಅದನ್ನು ಬಳಸಿ, ಭಕ್ತರು ಬೇರೊಂದು ದಿನ ದರ್ಶನಕ್ಕೆ ಅವಕಾಶ ಪಡೆಯ ಬಹುದು ಎಂದು ಟಿಟಿಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next