Advertisement

ಆವಂತಿಪೋರಾ ರಸ್ತೆ ಅಪಘಾತದಲ್ಲಿ ಇಬ್ಬರು ಐಎಎಫ್ ಅಧಿಕಾರಿಗಳ ಸಾವು

09:16 AM Apr 05, 2019 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಇಂದು ಗುರುವಾರ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಭಾರತೀಯ ವಾಯು ಪಡೆಯ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದು ಇನ್ನಿಬ್ಬರು ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.

Advertisement

ಮೃತ ಪಟ್ಟಿರುವ ಐಎಎಫ್ ಸಿಬಂದಿಗಳ ಗುರುತು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಘಟನೆ ಬಗ್ಗೆ ಐಎಎಫ್ ಶೀಘ್ರವೆ ಖುದ್ದು ತನಿಖೆ ನಡೆಸಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ ಐಎಎನ್‌ಎಸ್‌ ವರದಿಯ ಪ್ರಕಾರ ಮೃತ ಐಎಎಫ್ ಅಧಿಕಾರಿಗಳಲ್ಲಿ ಒಬ್ಬರು ಸ್ಕ್ವಾಡ್ರನ್‌ ಲೀಡರ್‌ ರಾಕೇಶ್‌ ಪಾಂಡೆ ಎಂದೂ ಇನ್ನೊಬ್ಬರು ಕಾರ್ಪೊರಲ್‌ ಅಜಯ್‌ ಕುಮಾರ್‌ ಎಂದೂ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next