Advertisement

ಮಂಜು ಕವಿದ ದಿಲ್ಲಿ: ರಸ್ತೆ ಕಾಣದೆ ಕಣಿವೆಗೆ ಬಿದ್ದ ಕಾರು; ಆರು ಜನರ ದುರ್ಮರಣ

09:56 AM Dec 31, 2019 | Team Udayavani |

ಹೊಸದಿಲ್ಲಿ: ತೀವ್ರ ಚಳಿಯಿಂದ ನಡುಗುತ್ತಿರುವ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮಂಜು ಆವರಿಸಿದೆ. ದಟ್ಟ ಮಂಜು ಕವಿದ ಕಾರಣ ರಸ್ತೆ ಕಾಣದೆ ಕಾರೊಂದು ಕಣಿವೆಗೆ ಉರುಳಿ ಆರು ಜನರು ಸಾವನ್ನಪ್ಪಿದ್ದಾರೆ.

Advertisement

ದೆಹಲಿ ಹೊರವಲಯದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ರವಿವಾರ ತಡರಾತ್ರಿ 11.30ಕ್ಕೆ ಈ ದುರ್ಘಟನೆ ನಡೆದಿದೆ.

ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದು,  ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹೇಶ್ ( 35), ಕಿಶನ್ ಲಾಲ್ (50), ನೀರೆಶ್ (17), ರಾಮ್ ಖಿಲಾಡಿ (75), ಮಲ್ಲು (12) ಮತ್ತು ನೇತ್ರಪಾಲ್ (40) ಮೃತ ದುರ್ದೈವಿಗಳು.

ಪೊಲೀಸರು ಸ್ಥಳಕ್ಕಾಮಿಸಿದ್ದು, ತನಿಖೆ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next