Advertisement

ಮಹಿಳಾ ವಸತಿ ನಿಲಯದಲ್ಲಿ ಆಹಾರ ಸೇವಿಸಿದ 9 ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

08:14 PM Feb 09, 2022 | Team Udayavani |

ರಾಮದುರ್ಗ: ಮಹಿಳಾ ವಸತಿ ನಿಲಯದಲ್ಲಿ ಆಹಾರ ಸೇವಿಸಿದ 9 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮದುರ್ಗ ಪಟ್ಟಣದ ಆಂಜನೇಯ ನಗರದ ವಸತಿ ನಿಲಯದಲ್ಲಿ ನಡೆದಿದೆ.

Advertisement

ಸಮಾಜ ಕಲ್ಯಾಣ ಇಲಾಖೆಯ ಪಟ್ಟಣದ ಆಂಜನೇಯ ನಗರದಲ್ಲಿರುವ ಮಹಿಳಾ ವಸತಿ ನಿಲಯದಲ್ಲಿ 100 ವಿದ್ಯಾರ್ಥಿನಿಯರು ಇದ್ದು, ಮಂಗಳವಾರ ರಾತ್ರಿ ಊಟ ಮಾಡಿದ ನಂತರ ಅದರಲ್ಲಿ 9 ವಿದ್ಯಾರ್ಥಿನಿಯರಿಗೆ ಏಕಾಏಕಿ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಕೂಡಲೇ ಅಸ್ವಸ್ಥರಾದ ವಿದ್ಯಾರ್ಥಿನಿಯರನ್ನು ಪಟ್ಟಣದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಸ್ವಸ್ಥಗೊಂಡ ವಿದ್ಯಾರ್ಥಿನಿಯರಿಗೆ ಬುಧವಾರವು ಚಿಕಿತ್ಸೆ ಮುಂದುವರೆದಿದ್ದು, ವಸತಿ ನಿಲಯದಲ್ಲಿ ಆಹಾರ ಸೇವಿಸಿದ ಸಾಕಷ್ಟು ವಿದ್ಯಾರ್ಥಿನಿಯರಲ್ಲಿ 9 ವಿದ್ಯಾರ್ಥಿನಿಯರಿಗೆ ಈ ರೀತಿಯ ವಾಂತಿ ಹಾಗೂ ಹೊಟ್ಟೆ ಕಾಣಿಸಿಕೊಳ್ಳಲು ಕಾರಣ ಏನು ಎಂಬುವದು ತಿಳಿದು ಬಂದಿಲ್ಲ. ಹಾಸ್ಟೇಲ್ ಊಟದಲ್ಲಿನ ಏನಾದರೂ ವ್ಯತ್ಯಾಸವಾಗಿದಯೋ ಅಥವಾ ಇನ್ಯಾವದಾದರು ಸಮಸ್ಯೆಯಾಗಿದೆ ಎಂಬುವದು ತನಿಖೆಯಿಂದ ತಿಳಿದು ಬರಬೇಕಿದೆ.

ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕಿಯರನ್ನು ವಿಚಾರಿಸಿದಾಗ ಊಟ ಮಾಡಿದ ನಂತರ ವಿದ್ಯಾರ್ಥಿನಿಯರಿಗೆ ಈ ರೀತಿ ವಾಂತಿಬೇಧಿ ಹಾಗೂ ಹೊಟ್ಟೆನೋವು ಎಂದು ಬಳಲುತ್ತಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೇವೆ 100 ಜನ ವಿದ್ಯಾರ್ಥಿನಿಯರಲ್ಲಿ 9 ವಿದ್ಯಾರ್ಥಿನಿಯರಿಗೆ ಈ ರೀತಿಯ ಸಮಸ್ಯೆ ಆಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಟಿಕ್ ಟಾಕ್ ಸ್ಟಾರ್ ಕಮಲಜ್ಜಿ ನಿಧನ

Advertisement

ಅಧಿಕಾರಿಗಳ ಭೇಟಿ:
ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಿದಂತೆ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಿಪಿಐ ಎಸ್.ಪಿ. ತಳವಾರ ಅವರು ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯವನ್ನು ವಿಚಾರಿಸಿದರು. ನಂತರ ವಸತಿ ನಿಲಯಕ್ಕೆ ಬೇಟಿ ನೀಡಿ ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಆಹಾರ ಸಮಸ್ಯೆ ಏನಾದರೂ ಇದ್ದರೆ ತಮ್ಮ ಗಮನಕ್ಕೆ ತರುವಂತೆ ಹೇಳಿದರು. ಅಲ್ಲದೇ ಅಡುಗೆ ತಯಾರಕರನ್ನು ಬದಲಾಯಿಸುವದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next