Advertisement

ಮಾರಾಟಕ್ಕಿದೆ ಆರ್‌.ಕೆ.ಸ್ಟುಡಿಯೋ

10:33 AM Aug 27, 2018 | |

ಮುಂಬಯಿ: ಹಿಂದಿ ಚಿತ್ರರಂಗಕ್ಕೆ ಹಲವು ಅದ್ದೂರಿ ಮತ್ತು ನೆನಪಿನಲ್ಲಿ ಉಳಿಯಬಹುದಾದ ಸಿನಿಮಾಗಳನ್ನು ನೀಡಿದ ಆರ್‌.ಕೆ.ಸ್ಟುಡಿಯೋ ಶೀಘ್ರದಲ್ಲೇ ಮಾರಾಟ ಆಗಲಿದೆ. ಈ ಬಗ್ಗೆ ಕಪೂರ್‌ ಕುಟುಂಬದ ಸದಸ್ಯರು ಮಾತುಕತೆ ನಡೆಸಿ ತೀರ್ಮಾನಿಸಿದ್ದಾರೆ ಎಂದು ಬಾಲಿವುಡ್‌ ನಟ ರಿಷಿ ಕಪೂರ್‌ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದರ ನಿರ್ವಹಣೆಯಿಂದ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ ರಿಷಿ ಕಪೂರ್‌. ಅದಕ್ಕಾಗಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕಪೂರ್‌ ಕುಟುಂಬದ ಸದಸ್ಯರು ಮಧ್ಯವರ್ತಿಯನ್ನೂ ನೇಮಿಸಿದ್ದಾರೆ.

Advertisement

ದಿ| ರಾಜ್‌ಕಪೂರ್‌ ಮುಂಬೈನ ಚೆಂಬೂರ್‌ನಲ್ಲಿ 70 ವರ್ಷಗಳ ಹಿಂದೆ ಅಂದರೆ 1948ರಲ್ಲಿ ಅದನ್ನು ಸ್ಥಾಪಿಸಿದ್ದರು. ಇದೇ ಸ್ಟುಡಿಯೋದಲ್ಲಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಭಾರೀ ಪ್ರಮಾಣದ ಅಗ್ನಿ ಅನಾಹುತ ಉಂಟಾಗಿತ್ತು. 
“ಆಗ್‌’, “ಬರ್ಸಾತ್‌’, “ಶ್ರೀ420′, “ಜಿಸ್‌ ದೇಶ್‌ ಮೆ ಗಂಗಾ ಬೆಹಿ¤ ಹೈ’, “ಮೇರಾ ನಾಮ್‌ ಜೋಕರ್‌’, “ಬಾಬ್ಬಿ’, “ಸತ್ಯಂ ಶಿವಂ ಸುಂದರಂ’, “ರಾಂ ತೇರಿ ಗಂಗಾ ಮೈಲಿ’ ಸೇರಿದಂತೆ ಹಲವು ಸಿನಿಮಾಗಳು ಆರ್‌.ಕೆ.ಬ್ಯಾನರ್‌ ಅಡಿ ನಿರ್ಮಾಣ ಆಗಿದ್ದವು. ಈ ಬ್ಯಾನರ್‌ ಅಡಿ ನಿರ್ಮಾಣ ಆದ ಕೊನೆಯ ಸಿನಿಮಾ “ಆ ಅಬ್‌ ಲೌಟ್‌ ಚಲೇ’. ಬಾಲಿವುಡ್‌ ನಟ ರಿಷಿ ಕಪೂರ್‌ ಅದನ್ನು ನಿರ್ಮಿಸಿದ್ದರು. 1988ರಲ್ಲಿ ರಾಜ್‌ಕಪೂರ್‌ ನಿಧನರಾದ ಬಳಿಕ ಅವರ ಹಿರಿಯ ಪುತ್ರ ರಣಧೀರ್‌ ಕಪೂರ್‌ ಸ್ಟುಡಿಯೋದ ನೇತೃತ್ವ ವಹಿಸಿದ್ದರು. ಇದಾದ ಬಳಿಕ  “ಪ್ರೇಮ್‌ ಗ್ರಂಥ್‌’ ಸಿನಿಮಾ ನಿರ್ದೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next